ಕ್ರಿಕೆಟ್‌ಗೆ ಮರಳಿದ ಪೃಥ್ವಿ: ಟಿ20ಯಲ್ಲಿ ಸ್ಫೋಟಕ ಫಿಫ್ಟಿ
ಡೋಪಿಂಗ್ ಶಿಕ್ಷೆ ಅನುಭವಿಸಿ ಮುಂಬೈ ತಂಡ ಕೂಡಿಕೊಂಡಿರುವ ಪೃಥ್ವಿ ಶಾ, ಕಮ್‌ಬ್ಯಾಕ್ ಪಂದ್ಯದಲ್ಲೇ ಭರ್ಜರಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದರ ಬೆನ್ನಲ್ಲೇ ಟ್ವಿಟರಿಗರಿಂದ ವ್ಯಾಪಕ ಟೀಕೆಗೂ ಗುರಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಮುಂಬೈ[ನ.18]: ಡೋಪಿಂಗ್ ಪ್ರಕರಣದಲ್ಲಿ ಸಿಲುಕಿ ಬಿಸಿಸಿಐನಿಂದ 8 ತಿಂಗಳ ನಿಷೇಧಕ್ಕೆ ಗುರಿಯಾಗಿದ್ದ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಭಾನುವಾರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾದರು.
ಪೃಥ್ವಿ ಶಾ 5 ಸೆಕೆಂಡ್ ಗಮನವಿಟ್ಟಿದ್ದರೆ ತಪ್ಪು ಆಗ್ತಿರ್ಲಿಲ್ಲ; BCCI
ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿದ ಪೃಥ್ವಿ, ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 39 ಎಸೆತಗಳಲ್ಲಿ 63 ರನ್ ಸಿಡಿಸಿ ತಮ್ಮ ಪುನರಾಗಮನವನ್ನು ಸಂಭ್ರಮದಿಂದ ಆಚರಿಸಿಕೊಂಡರು.
ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪೃಥ್ವಿ, ‘ನಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದೇನೆ. ನಿಷೇಧದ ದಿನಗಳು ಕಷ್ಟಕರವಾಗಿದ್ದವು. ಆದರೆ 2 ತಿಂಗಳ ಹಿಂದೆ ರಾಹುಲ್ ದ್ರಾವಿಡ್ ನನ್ನನ್ನು ಎನ್‌ಸಿಎಗೆ ಕರೆಸಿಕೊಂಡು ಅಭ್ಯಾಸ ನಡೆಸಲು ಅನುಕೂಲ ಮಾಡಿಕೊಟ್ಟರು. ಅವರ ಮಾರ್ಗದರ್ಶನ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು’ ಎಂದರು.
ಕಮ್ ಬ್ಯಾಕ್ ಪಂದ್ಯದಲ್ಲೇ ಭರ್ಜರಿ ಅರ್ಧಶತಕ ಬಾರಿಸಿದ ಬೆನ್ನಲ್ಲೇ ಪೃಥ್ವಿ ಶಾ ಬ್ಯಾಟ್ ಮೇಲೆತ್ತಿ ಮತ್ತೊಂದು ಕೈನಲ್ಲಿ ಪ್ರೇಕ್ಷರತ್ತ ಕೈಬೀಸಿದರು. ಅಲ್ಲದೇ ಟೀಕಾಕಾರಿಗೆ ಬಾಯಿ ಮುಚ್ಚಿಕೊಳ್ಳಿ ಎಂಬರ್ಥದ ರೀತಿಯಲ್ಲಿ ಸನ್ನೆ ಮಾಡಿದರು. ಈ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಸ್ಸಾಂನಂತಹ ಲಘು ತಂಡದ ವಿರುದ್ಧ ಅರ್ಧಶತಕ ಬಾರಿಸಿ ಸಂಭ್ರಮಿಸಿದ್ದರ ಬಗ್ಗೆ ಟ್ವಿಟರಿಗರು ಕುಹಕ ವ್ಯಕ್ತಪಡಿಸಿದ್ದಾರೆ.