ಟಿ20 ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ನೋರಾ ಫತೇಹಿ ಅವರ ನೃತ್ಯವನ್ನು ಡ್ರೆಸ್ಸಿಂಗ್ ರೂಮ್‌ನಿಂದ ಸೂರ್ಯಕುಮಾರ್ ಯಾದವ್ ತದೇಕಚಿತ್ತದಿಂದ ವೀಕ್ಷಿಸುತ್ತಿದ್ದರು. ಇದೇ ವೇಳೆ, ಗ್ಯಾಲರಿಯಲ್ಲಿದ್ದ ಅವರ ಪತ್ನಿ ದಿವಿಶಾ ಶೆಟ್ಟಿ ಈ ದೃಶ್ಯವನ್ನು ವಿಡಿಯೋ ಮಾಡಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. 

'ಜಗತ್ತಲ್ಲಿ ಗಂಡ್‌ ಮಕ್ಕಳು ಯಾರ ಕಣ್ಣಿಂದ ಬೇಕಾದ್ರೂ ತಪ್ಪಿಸಿಕೊಳ್ಳಬಹುದು. ಆದ್ರೆ ಹೆಂಡ್ತಿ ಕಣ್ಣಿಂದ ಮಾತ್ರ ತಪ್ಪಿಸಿಕೊಳ್ಳೋಕೇ ಸಾಧ್ಯಾನೇ ಇಲ್ಲ..' ಅನ್ನೋ ಮಾತನ್ನ ತಮಾಷೆಯಾಗಿ ಕೇಳ್ತಾ ಇರ್ತೇವೆ. ಆದ್ರೆ, ಈ ಮಾತು ತಮಾಷೆಯಲ್ಲ ನಿಜ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಟಿ20 ವಿಶ್ವಕಪ್‌ ಉದ್ಘಾಟನಾ ಸಮಾರಂಭದಲ್ಲಿ ಸಿಕ್ಕಿದೆ. ಭಾರತದಲ್ಲಿ ಐಸಿಸಿ ಟಿ20 ವಿಶ್ವಕಪ್‌ ಅದ್ಭುತವಾಗಿ ಆರಂಭವಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅದ್ಭುತವಾಗಿ ಉದ್ಘಾಟನಾ ಸಮಾರಂಭ ನಡೆಯಿತು. ಹಲವು ಕಲಾವಿದರು ಈ ವೇಳೆ ತಮ್ಮ ಪ್ರದರ್ಶನ ನೀಡಿದ್ದರು. 

ಬಾಲಿವುಡ್‌ನ ಸ್ಟಾರ್‌ ನೋರಾ ಫತೇಹಿ ಅವರ ನೃತ್ಯ ಕಾರ್ಯಕ್ರಮ ಕೂಡ ಈ ವೇಳೆ ಪ್ರೇಕ್ಷಕರ ಗಮನ ಸೆಳೆಯಿತು. ನೋರಾ ಫತೇಹಿ ಅವರ ಡಾನ್ಸ್‌ ಎಷ್ಟು ಅದ್ಭುತವಾಗಿತ್ತೆಂದರೆ, ಸ್ಟೇಡಿಯಂನಲ್ಲಿರುವ ಪ್ರೇಕ್ಷಕರು ಮಾತ್ರವಲ್ಲ, ಟೀಮ್‌ಇಂಡಿಯಾ ಪ್ಲೇಯರ್‌ಗಳು ಕೂಡ ನೋರಾ ನಾಟ್ಯವನ್ನು ನೋಡಲು ಡ್ರೆಸ್ಸಿಂಗ್‌ ರೂಮ್‌ನಿಂದ ಹೊರಬಂದು ನಿಂತಿದ್ದರು. ಈ ವೇಳೆ ಆದ ಫನ್ನಿ ಘಟನೆ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಸೂರ್ಯಕುಮಾರ್‌ ಯಾದವ್‌

ಭಾರತ ತಂಡ ಮೊದಲ ಪಂದ್ಯವನ್ನು ಅಮೆರಿಕದ ವಿರುದ್ಧ ಆಡಿತ್ತು. ಮುಂಬೈನ ವಾಂಖಡೆಯಲ್ಲಿ ಈ ಪಂದ್ಯ ನಡೆಯುವ ಮುನ್ನ ಉದ್ಘಾಟನಾ ಸಮಾರಂಭ ನಡೆದಿತ್ತು. ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ ಈ ಪಂದ್ಯದಲ್ಲಿ ಅದ್ಭುತ ಆಟವಾಡಿದ್ದರು. ಆದರೆ, ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್‌ ಯಾದವ್‌ ಹೆಂಡ್ತಿ ಕೈಯಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ನೋರಾ ಫತೇಹಿ ಡಾನ್ಸ್‌ ಮಾಡಲು ಆರಂಭಿಸುತ್ತಿದ್ದಂತೆ, ಡ್ರೆಸಿಂಗ್‌ ರೂಮ್‌ನಲ್ಲಿ ಇದ್ದ ಟೀಮ್‌ ಇಂಡಿಯಾ ಆಟಗಾರರು ಬಾಲ್ಕನಿಗೆ ಬಂದು ಆಕೆಯ ಡಾನ್ಸ್‌ ನೋಡಲು ಆರಂಭಿಸಿದ್ದರು. ಆಟಗಾರರು ಮಾತ್ರವಲ್ಲದೆ, ಕೋಚ್‌ ಗೌತಮ್‌ ಗಂಭೀರ್‌ ಕೂಡ ಡ್ರೆಸ್ಸಿಂಗ್‌ ರೂಮ್‌ ಗ್ಯಾಲರಿಯಲ್ಲಿದ್ದರು. ಇದೇ ಸಮಯದಲ್ಲಿ ಸೂರ್ಯ ಸಿಕ್ಕಿಬಿದ್ದಿದ್ದಾರೆ.

ವಿಡಿಯೋ ಮಾಡಿದ ದಿವಿಶಾ ಶೆಟ್ಟಿ

ನೋರಾ ಡಾನ್ಸ್‌ ಮಾಡುವಾಗ ಸೂರ್ಯಕುಮಾರ್‌ ಯಾದವ್‌ ಬಾಲ್ಕನಿಯಲ್ಲಿ ನಿಂತು ನೋಡುತ್ತಿದ್ದರು. ಈ ವೇಳೆ ಸ್ಟೇಡಿಯಂನ ಗ್ಯಾಲರಿಯಲ್ಲಿದ್ದ ಸೂರ್ಯ ಅವರ ಪತ್ನಿ ದಿವಿಶಾ ಶೆಟ್ಟಿ ಆಕೆಯ ಡಾನ್ಸ್‌ಅನ್ನು ವಿಡಿಯೋ ಮಾಡುತ್ತಿದ್ದರು. ನೋರಾ ಡಾನ್ಸ್‌ ಮಾಡುವುದನ್ನು ತೋರಿಸುತ್ತಲೇ ಕ್ಯಾಮೆರಾ ಟೀಮ್‌ ಇಂಡಿಯಾ ಡ್ರೆಸಿಂಗ್‌ರೂಮ್‌ ಕಡೆ ತಿರುಗಿತು. ಈ ವೇಳೆ ಸೂರ್ಯಕುಮಾರ್‌ ಯಾದವ್‌, ನೋರಾ ಅವರ ನೃತ್ಯ ನೋಡುತ್ತಿದ್ದರು. ದಿವಿಶಾ ವಿಡಿಯೋ ಮಾಡುತ್ತಾ ಇರುವುದು ಇಶಾನ್‌ ಕಿಶನ್‌ ಹಾಗೂ ಆರ್ಶ್‌ದೀಪ್‌ ಸಿಂಗ್‌ಗೆ ಗೊತ್ತಾದ ಬಳಿಕ ಸೂರ್ಯಕುಮಾರ್‌ರನ್ನು ನೋಡಿ ನಗಲು ಆರಂಭಿಸಿದರು. ನೋರಾ ಡಾನ್ಸ್‌ಅನ್ನು ತದೇಕಚಿತ್ತದಿಂದ ನೋಡುತ್ತಿದ್ದ ಸೂರ್ಯಕುಮಾರ್‌ನನ್ನು ದಿವಿಶಾ ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರ. ಈ ಕ್ಷಣವನ್ನು ನೋಡಿ ಟೀಮ್‌ ಇಂಡಿಯಾ ಆಟಗಾರರು ನಗಲು ಆರಂಭಿಸಿದರು.

ಕೆಲ ಸಮಯದ ನಂತರ ಸೂರ್ಯಕುಮಾರ್ ಯಾದವ್ ಡ್ರೆಸ್ಸಿಂಗ್ ಕೋಣೆಗೆ ಹೋದರು. ಅದಾದ ನಂತರ, ಸೂರ್ಯಕುಮಾರ್ ಮತ್ತು ಇತರ ಆಟಗಾರರು ಮತ್ತೆ ಟೀಮ್ ಇಂಡಿಯಾ ಜೆರ್ಸಿ ಧರಿಸಿ, ಯುಎಸ್ಎ ವಿರುದ್ಧದ ಪಂದ್ಯವನ್ನು ದೊಡ್ಡ ಹೋರಾಟದಿಂದ ಗೆದ್ದಿದ್ದರು.

Scroll to load tweet…