Asianet Suvarna News Asianet Suvarna News

ಸೂರ್ಯನಬ್ಬರಕ್ಕೆ ಕರಗಿದ ವೆಸ್ಟ್‌ ಇಂಡೀಸ್‌; ಟೀಂ ಇಂಡಿಯಾಗೆ ಮೊದಲ ಟಿ20 ಗೆಲುವು..!

3ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್ ಸುಲಭ ಜಯ
ಪಂದ್ಯ ಗೆದ್ದು ಸರಣಿ ಜಯದಾಸೆ ಜೀವಂತವಾಗಿರಿಸಿಕೊಂಡ ಪಾಂಡ್ಯ ಪಡೆ
ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ ಸೂರ್ಯಕುಮಾರ್ ಯಾದವ್

Suryakumar Yadav blasting half century powers Team win 3rd T20I against West Indies kvn
Author
First Published Aug 9, 2023, 8:59 AM IST

ಪ್ರಾವಿ​ಡೆನ್ಸ್‌(ಗಯಾನ): ಸೂರ್ಯಕುಮಾರ್‌ ಯಾದವ್‌ ಸ್ಫೋಟಿ​ಸಿ​ದಾಗ ಭಾರತ ಗೆಲುವು ನಿಶ್ಚಿತ. ಏಕಾಂಗಿ​ಯಾಗಿ ಪಂದ್ಯ ಗೆಲ್ಲಿ​ಸ​ಬಲ್ಲ ಸಾಮ​ರ್ಥ್ಯ​ವಿ​ರುವ ವಿಶ್ವ ನಂ.1 ಬ್ಯಾಟರ್‌ ಸೂರ್ಯ, ಮಂಗ​ಳ​ವಾರ ವಿಂಡೀಸ್‌ ವಿರು​ದ್ಧದ 3ನೇ ಟಿ20ಯಲ್ಲಿ ಲಯಕ್ಕೆ ಮರಳಿ ಭಾರ​ತದ 7 ವಿಕೆಟ್‌ ಜಯ​ದಲ್ಲಿ ಪ್ರಮುಖ ಪಾತ್ರ ವಹಿ​ಸಿ​ದರು. 5 ಪಂದ್ಯ​ಗಳ ಸರ​ಣಿ​ಯಲ್ಲಿ ಜಯದ ಖಾತೆ ತೆರೆ​ದಿ​ರುವ ಭಾರತ, ಸರಣಿ ಗೆಲು​ವಿನ ಆಸೆಯನ್ನು ಜೀವಂತ​ವಾ​ಗಿ​ರಿ​ಸಿ​ಕೊಂಡಿದೆ.

ಮೊದ​ಲೆ​ರೆ​ಡು ಪಂದ್ಯ​ಗ​ಳಿಗೆ ಹೋಲಿ​ಸಿ​ದರೆ ಈ ಪಂದ್ಯ​ದಲ್ಲಿ ಭಾರ​ತದ ಯೋಜನೆಗಳು ಸುಧಾ​ರಿ​ಸಿ​ದಂತೆ ಕಂಡು ಬಂತು. ನಿಕೋ​ಲಸ್‌ ಪೂರನ್‌ರನ್ನು ಕಟ್ಟಿ​ಹಾ​ಕಲು ಭಾರತೀಯ ಸ್ಪಿನ್ನರ್‌ಗಳು ಯಶ​ಸ್ವಿ​ಯಾ​ದರು. ನಾಯಕ ರೋವ್ಮನ್‌ ಪೋವೆಲ್‌(19 ಎಸೆ​ತ​ದಲ್ಲಿ 40 ರನ್‌)ರ ವೀರಾ​ವೇ​ಶದ ನೆರ​ವಿ​ನಿಂದ ವಿಂಡೀಸ್‌ 5 ವಿಕೆಟ್‌ಗೆ 159 ರನ್‌ ಕಲೆಹಾಕಿ, ಭಾರ​ತಕ್ಕೆ ಸ್ಪರ್ಧಾ​ತ್ಮಕ ಗುರಿ ನೀಡಿತು. ಪಾದಾ​ರ್ಪಣಾ ಪಂದ್ಯ​ದಲ್ಲಿ ಯಶಸ್ವಿ ಜೈಸ್ವಾಲ್‌ ಕೇವಲ 1 ರನ್‌ಗೆ ಔಟಾ​ದರೆ, ಗಿಲ್‌(11 ಎಸೆ​ತ​ದಲ್ಲಿ 6 ರನ್‌) ಮತ್ತೊಮ್ಮೆ ವೈಫಲ್ಯ ಕಂಡರು. ಆದರೆ ಸೂರ್ಯ ಹಾಗೂ ತಿಲಕ್‌ ವರ್ಮಾ, ವಿಂಡೀಸ್‌ ಬೌಲರ್‌ಗಳನ್ನು ದಂಡಿ​ಸಿ​ದರು.

"ಪಾಂಡ್ಯಗೆ ಸಿಗಬೇಕಾದ ಬೆಂಬಲ ಕೋಚ್‌ ದ್ರಾವಿಡ್‌ನಿಂದ ಸಿಕ್ತಿಲ್ಲ": ಮಾಜಿ ಕ್ರಿಕೆಟಿಗನ ಅಚ್ಚರಿಯ ಹೇಳಿಕೆ..!

ಸಣ್ಣಗೆ ಮಳೆ ಬೀಳು​ತ್ತಿದ್ದ ಕಾರಣ, ಮೊದಲು 5 ಓವರ್‌ ಮುಕ್ತಾ​ಯಕ್ಕೆ ಡಕ್ವರ್ತ್‌ ಯಿಸ್‌ ನಿಯ​ಮ​ದ​ನ್ವಯ ಬೇಕಿದ್ದ ಗುರಿ ದಾಟು​ವುದು ಭಾರ​ತದ ಉದ್ದೇ​ಶ​ವಾ​ಗಿ​ತ್ತು. ಹೀಗಾಗಿ ತಿಲಕ್‌ ಕ್ರೀಸ್‌ಗಿಳಿ​ಯು​ತ್ತಿ​ದ್ದಂತೆ ಸತತ 2 ಬೌಂಡರಿ ಬಾರಿಸಿದರು. 5 ಓವ​ರಲ್ಲಿ ಭಾರತ 40 ರನ್‌ ಗಳಿ​ಸ​ಬೇ​ಕಿತ್ತು. ತಂಡ 2 ವಿಕೆಟ್‌ಗೆ 43 ರನ್‌ ಕಲೆಹಾಕಿ ಮುಂದಿತ್ತು.

ಪವರ್‌-ಪ್ಲೇ ಮುಕ್ತಾ​ಯಕ್ಕೆ 60 ರನ್‌ ಚಚ್ಚಿದ ಭಾರತ, ವಿಂಡೀಸ್‌ಗೆ ಪುಟಿ​ದೇ​ಳಲು ಬಿಡ​ಲಿಲ್ಲ. ಸೂರ್ಯ 23 ಎಸೆ​ತ​ದಲ್ಲಿ ಅರ್ಧ​ಶ​ತಕ ಪೂರೈಸಿ ಶತ​ಕದತ್ತ ಮುನ್ನು​ಗ್ಗಿ​ದರು. ಆದರೆ 83 ರನ್‌ (44 ಎಸೆತ, 10 ಬೌಂಡರಿ, 4 ಸಿಕ್ಸರ್‌) ಗಳಿ​ಸಿ​ದ್ದಾಗ ಅವರ ಇನ್ನಿಂಗ್‌್ಸಗೆ ತೆರೆ ಬಿತ್ತು. ತಿಲಕ್‌ ಜೊತೆ 50 ಎಸೆ​ತ​ದಲ್ಲಿ 87 ರನ್‌ಗಳ ಜೊತೆ​ಯಾಟವೂ ಕೊನೆ​ಗೊಂಡಿ​ತು. ತಿಲಕ್‌(49*), ಹಾರ್ದಿಕ್‌(20*) ಭಾರ​ತ​ವನ್ನು 13 ಎಸೆತ ಬಾಕಿ ಇರು​ವಂತೆ​ಯೇ ದಡ ಸೇರಿ​ಸಿ​ದರು.

ವಿಂಡೀಸ್ ಎದುರಿನ 3ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ, 2 ಬದಲಾವಣೆ..! ಭಾರತ ಸಂಭಾವ್ಯ ತಂಡ

ಇದಕ್ಕೂ ಮುನ್ನ ಕುಲ್ದೀಪ್‌ ಯಾದವ್‌, ವಿಂಡೀಸ್‌ ಓಟಕ್ಕೆ ಅಡ್ಡಿ​ಯಾ​ದರು. ಕಿಂಗ್‌(42), ಚಾರ್ಲ್ಸ್(12), ಪೂರನ್‌(20) ಅಪಾ​ಯ​ಕಾ​ರಿ​ಯಾ​ಗಲು ಕುಲ್ದೀಪ್‌ ಬಿಡ​ಲಿಲ್ಲ. ಹಾರ್ದಿಕ್‌, ಅಕ್ಷರ್‌ ಸಹ ಉತ್ತಮ ದಾಳಿ ಸಂಘ​ಟಿಸಿ ವಿಂಡೀಸ್‌ ದೊಡ್ಡ ಮೊತ್ತ ಕಲೆಹಾಕ​ದಂತೆ ನೋಡಿ​ಕೊಂಡ​ರು.

ಸ್ಕೋರ್‌:
ವಿಂಡೀಸ್‌ 20 ಓವ​ರಲ್ಲಿ 159/5(ಕಿಂಗ್‌ 42, ಪೋವೆಲ್‌ 40*, ಕುಲ್ದೀಪ್‌ 3-28)
ಭಾರತ 17.5 ಓವ​ರಲ್ಲಿ 164/3(ಸೂರ್ಯ 83, ತಿಲಕ್‌ 49*, ಜೋಸೆಫ್‌ 2-25) 
ಪಂದ್ಯ​ಶ್ರೇ​ಷ್ಠ: ಸೂರ್ಯ​ಕು​ಮಾರ್‌

ಟರ್ನಿಂಗ್‌ ಪಾಯಿಂಟ್‌

ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್‌ ವರ್ಮಾ ನಡುವಿನ ಜೊತೆಯಾಟ ಭಾರ​ತ​ದ ಗೆಲು​ವಿ​ಗೆ ಪ್ರಮುಖ ಕಾರಣ. ಈ ಇಬ್ಬರ ಪೈಕಿ ಒಬ್ಬರು ಪವರ್‌-ಪ್ಲೇನಲ್ಲೇ ಔಟಾ​ಗಿ​ದ್ದರೆ ತಂಡದ ಮೇಲೆ ಒತ್ತಡ ಹೆಚ್ಚಾ​ಗಿ ಸೋಲಿ​ನತ್ತ ಮುಖ ಮಾಡುವ ಸಾಧ್ಯತೆ ಇತ್ತು.

ಇಂಟ್ರೆಸ್ಟಿಂಗ್ ಅಂಕಿ-ಅಂಶ:

01 ಬೌಲರ್‌

ಅಂ.ರಾ. ಟಿ20ಯಲ್ಲಿ ಅತಿ​ವೇ​ಗ​ವಾಗಿ (30 ಪಂದ್ಯ) 50 ವಿಕೆಟ್‌ ಪೂರೈ​ಸಿದ ಭಾರ​ತೀಯ ಬೌಲರ್‌ ಕುಲ್ದೀಪ್‌. ಚಹಲ್‌(34 ಪಂದ್ಯ)ರ ದಾಖಲೆಯನ್ನು ಮುರಿದರು.

100 ಸಿಕ್ಸರ್‌

ಅಂ.ರಾ. ಟಿ20ಯಲ್ಲಿ 100 ಸಿಕ್ಸರ್‌ ಪೂರೈ​ಸಿದ ಭಾರ​ತದ 3ನೇ ಬ್ಯಾಟರ್‌ ಸೂರ್ಯ​ಕು​ಮಾರ್‌(101). ರೋಹಿತ್‌(182), ಕೊಹ್ಲಿ​(117) ಮೊದ​ಲೆ​ರಡು ಸ್ಥಾನ​ದ​ಲ್ಲಿ​ದ್ದಾ​ರೆ.

Follow Us:
Download App:
  • android
  • ios