Asianet Suvarna News Asianet Suvarna News

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ 2ನೇ ಅವಧಿಗೆ ಮುಂದುವರಿಯಲು ಸುಪ್ರೀಂ ಕೋರ್ಟ್ ಸಮ್ಮತಿ!

ಬಿಸಿಸಿಐ ಕೂಲಿಂಗ್ ಅವಧಿ ಮನವಿ ಪುರಸ್ಕರಿಸಿದ ಸುಪ್ರಿಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಸುಪ್ರೀಂ ಆದೇಶದಿಂದ ಇದೀಗ ಸೌರವ್ ಗಂಗೂಲಿ ಅಧ್ಯಕ್ಷ ಅಧಿಕಾರಾವದಿ 2ನೇ ಬಾರಿಗೆ ಮುಂದುವರಿಯಲಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿವೆ.

Supreme court accept BCCI cooling off period plea president sourav ganguly and Jay shah  get extension term ckm
Author
First Published Sep 14, 2022, 6:34 PM IST

ನವದೆಹಲಿ(ಸೆ.14): ಬಿಸಿಸಿಐ ಸಂವಿಧಾನದಲ್ಲಿ ತಿದ್ದುಪಡಿಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.  ಇದರ ಪರಿಣಾಮ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅಧಿಕಾರವದಿ ಎರಡನೇ ಅವಧಿಗೆ ಮುಂದುವರಿಯುತ್ತಿದೆ. ಈ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಬಿಸಿಸಿಐ ಅಧ್ಯಕ್ಷರಾಗಿ ಸೌರವ್‌ ಗಂಗೂಲಿ, ಕಾರ‍್ಯದರ್ಶಿಯಾಗಿ ಜಯ್‌ ಶಾ ಅವರೇ ಮತ್ತೊಂದು ಅವಧಿಗೆ ಮುಂದುವರಿಯಬೇಕು ಎನ್ನುವ ಕಾರಣಕ್ಕೆ ಕೂಲಿಂಗ್‌ ಆಫ್‌ ನಿಯಮವನ್ನು ರದ್ದುಗೊಳಿಸಲು ಅನುಮತಿ ಕೋರಿ ಸುಪ್ರೀಂ ಕೋರ್ಚ್‌ ಮೆಟ್ಟಿಲೇರಲಾಗಿತ್ತು.. ನ್ಯಾ.ಲೋಧಾ ಸಮಿತಿ ಮಾಡಿದ್ದ ಶಿಫಾರಸುಗಳಲ್ಲಿ ಕೂಲಿಂಗ್‌ ಆಫ್‌ ನಿಯಮವೂ ಒಂದಾಗಿತ್ತು. ಇದೀಗ ಕೊನೆ ಪಕ್ಷ ಮತ್ತೊಂದು ಅವಧಿಗೆ ಮುಂದುವರಿಯಲು ಅವಕಾಶ ನೀಡುವಂತೆ ಗಂಗೂಲಿ ಹಾಗೂ ಶಾ ಬಿಸಿಸಿಐ ವಕೀಲರ ಮೂಲಕ ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಬಿಸಿಸಿಐ ಸಂವಿಧಾನದಲ್ಲಿ ತಿದ್ದುಪಡಿಗೆ ಅವಕಾಶ ನೀಡಿದ್ದು, ಮತ್ತೊಂದು ಅವಧಿಗೆ ಸೌರವ್ ಗಂಗೂಲಿ ಹಾಗೂ ಜಯ್ ಶಾ ಅಧಿಕಾರವದಿ ಮುಂದುವರಿಸಲು ಅವಕಾಶ ನೀಡಿದೆ. 

ರಾಜ್ಯ ಕ್ರಿಕೆಟ್(State Cricket Association) ಸಂಸ್ಥೆ ಹಾಗೂ ಬಿಸಿಸಿಐ(BCCI) ಪದಾಧಿಕಾರಿಗಳ ಅವಧಿ ನಡುವಿನ ಕಡ್ಡಾಯ ಕೂಲಿಂಗ್ ಅವಧಿಯನ್ನು(bcci cooling off period) ರದ್ದುಗೊಳಿಸುವಂತೆ ಕೋರಿ ಬಿಸಿಸಿಐ ಸುಪ್ರೀಂ ಕೋರ್ಟ್‌ಗೆ(Supreme Court) ಅರ್ಜಿ ಸಲ್ಲಿಸಿತ್ತು. ಬಿಸಿಸಿಐ ಮನವಿಯನ್ನು ಬುಧವಾರ ಸುಪ್ರೀಂ ಕೋರ್ಟ್ ಅಂಗೀರಿಸಿತು. ನೂತನ ನಿಯಮದ ಪ್ರಕಾರ ಇದೀಗ ಸತತ ಎರಡು ಅವಧಿಯ ಅಧಿಕಾರದ ಬಳಿಕ ಕೂಲಿಂಗ್ ಆಫ್ ಅವಧಿಗೆ ಒಳಗಾಗಬೇಕು. ಇದೀಗ ಮೊದಲ ಅವಧಿ ಮುಗಿಸುತ್ತಿರುವ ಸೌರವ್ ಗಂಗೂಲಿ(Sourav ganguly), ಮತ್ತೊಂದು ಅವಧಿಗೆ ಅಧಿಕಾರದಲ್ಲಿ ಮುಂದುವರಿಯಬಹುದು.  ಈ ನಿಯಮ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಅನ್ವಯವಾಗಲಿದೆ.

 

Asia Cup ಟೀಂ ಇಂಡಿಯಾ ಸೋಲಿಗೆ ಕಾರಣ ಪತ್ತೆಹಚ್ಚಿದ ಬಿಸಿಸಿಐ..!

ಗಂಗೂಲಿ ಹಾಗೂ ಶಾ(Jay Shah) ಈಗಾಗಲೇ ಕ್ರಿಕೆಟ್‌ ಆಡಳಿತಗಾರರಾಗಿ ಸತತ 6 ವರ್ಷಗಳ ಕಾಲ ಅಧಿಕಾರದಲ್ಲಿದ್ದಾರೆ. ಬಿಸಿಸಿಐ ಗದ್ದುಗೆ ಏರುವ ಮೊದಲು ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಗಂಗೂಲಿ, ಗುಜರಾತ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಶಾ ತಲಾ 3 ವರ್ಷ ಅಧಿಕಾರ ಅನುಭವಿಸಿದ್ದರು. ಇದೀಗ ಬಿಸಿಸಿಐನಲ್ಲೂ 3 ವರ್ಷ ಪೂರ್ಣಗೊಂಡಿದ್ದು, ನಿಯಮದ ಪ್ರಕಾರ ಕಡ್ಡಾಯವಾಗಿ 3 ವರ್ಷ ಕೂಲಿಂಗ್‌ ಆಫ್‌ ಅವಧಿಯಲ್ಲಿ ಇರಬೇಕಿದೆ. ಆದರೆ ಅಧಿಕಾರ ಕೈತಪ್ಪಬಾರದು ಎನ್ನುವ ಉದ್ದೇಶದಿಂದ ಸಂವಿಧಾನದಲ್ಲಿ ತಿದ್ದುಪಡಿ ಮಾಡಲು ಅವಕಾಶ ಕೋರಿ ಸೌರವ್ ಗಂಗೂಲಿ ತಂಡ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿತ್ತು.

ಏನಿದು ಕೂಲಿಂಗ್‌ ಆಫ್‌ ನಿಯಮ?
ಬಿಸಿಸಿಐ ಸಂವಿಧಾನದ ಪ್ರಕಾರ ರಾಜ್ಯ ಕ್ರಿಕೆಟ್‌ ಸಂಸ್ಥೆ ಇಲ್ಲವೇ ಬಿಸಿಸಿಐ ಆಡಳಿತದಲ್ಲಿ ಎರಡು ಸತತ ಅವಧಿಗಳ ನಡುವೆ ಕಡ್ಡಾಯವಾಗಿ 3 ವರ್ಷ ಬಿಡುವು ಪಡೆಯಬೇಕು. ಒಬ್ಬರೇ ಹೆಚ್ಚು ಸಮಯ ಅಧಿಕಾರದಲ್ಲಿ ಇದ್ದರೆ ಅಧಿಕಾರದ ದುರುಪಯೋಗವಾಗಬಹುದು, ಇತರ ಅರ್ಹ ವ್ಯಕ್ತಿಗಳಿಗೆ ಅಧಿಕಾರ ಸಿಗದೆ ಇರಬಹುದು ಎನ್ನುವ ಕಾರಣಕ್ಕೆ ಈ ನಿಯಮ ಜಾರಿಗೆ ತರಲಾಗಿದೆ.

Follow Us:
Download App:
  • android
  • ios