Asianet Suvarna News Asianet Suvarna News

ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್‌ಗೆ ಸನ್‌ರೈಸರ್ಸ್‌ ₹23 ಕೋಟಿ ಮೀಸಲು?

ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯೂ ಸ್ಪೋಟಕ ಬ್ಯಾಟರ್‌ಗೆ ಬರೋಬ್ಬರಿ 23 ಕೋಟಿ ರುಪಾಯಿ ಮೀಸಲಿಡಲು ಮುಂದಾಗಿದೆ ಎಂದು ವರದಿಯಾಗಿದೆ

Sunrisers Hyderabad set to shell out a Rs 23 Crore to retain Heinrich Klaasen Says report kvn
Author
First Published Oct 17, 2024, 12:08 PM IST | Last Updated Oct 17, 2024, 12:08 PM IST

ನವದೆಹಲಿ: ದಕ್ಷಿಣ ಆಫ್ರಿಕಾದ ಪವರ್‌ ಹಿಟ್ಟರ್‌ ಹೈನ್ರಿಚ್ ಕ್ಲಾಸೆನ್‌ರನ್ನು 2025ರ ಐಪಿಎಲ್‌ಗೆ ₹23 ಕೋಟಿ ನೀಡಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಉಳಿಸಿಕೊಂಡಿದೆ ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಕಳೆದ ಆವೃತ್ತಿಯಲ್ಲಿ ₹5.25 ಕೋಟಿಗೆ ಬಿಕರಿಯಾಗಿದ್ದು, ಕ್ಲಾಸೆನ್‌ಗೆ ಈ ಬಾರಿ ಹರಾಜಿಗೂ ಮೊದಲೇ ದುಬಾರಿ ಮೊತ್ತ ನೀಡಿ, ಸನ್‌ರೈಸರ್ಸ್‌ ರೀಟೈನ್‌ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಕಳೆದ ಬಾರಿ ₹20.5 ಕೋಟಿಗೆ ತಂಡ ಕೂಡಿಕೊಂಡಿದ್ದ ಪ್ಯಾಟ್‌ ಕಮಿನ್ಸ್‌ಗೆ ಈ ಬಾರಿ ₹18 ಕೋಟಿ ನೀಡಿ ಉಳಿಸಿಕೊಂಡಿರುವುದಾಗಿ ಗೊತ್ತಾಗಿದೆ. ಈ ಸಲವೂ ಪ್ಯಾಟ್ ಕಮಿನ್ಸ್‌ ಅವರೇ ತಂಡ ಮುನ್ನಡೆಸಲಿದ್ದಾರೆ. ಭಾರತದ ಯುವ ಆರಂಭಿಕ ಬ್ಯಾಟರ್‌ ಅಭಿಷೇಕ್‌ ಶರ್ಮಾ ₹14 ಕೋಟಿ ವೇತನ ಗಳಿಸಲಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಟ್ರ್ಯಾವಿಸ್‌ ಹೆಡ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿಯನ್ನೂ ಸನ್‌ರೈಸರ್ಸ್‌ ಉಳಿಸಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬೆಂಗಳೂರು ಟೆಸ್ಟ್‌: ಕಿವೀಸ್ ಎದುರು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ತಂಡದಲ್ಲಿ 2 ಮೇಜರ್ ಚೇಂಜ್

ಐಪಿಎಲ್‌ ರೀಟೆನ್ಷನ್‌ ನಿಯಮದ ಪ್ರಕಾರ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದ್ದು, ಮೊದಲ ಆಟಗಾರನಿಗೆ ₹18 ಕೋಟಿ, 2ನೇ ಆಟಗಾರನಿಗೆ ₹14 ಕೋಟಿ, 3ನೇ ಆಟಗಾರನಿಗೆ ₹11 ಕೋಟಿ ವೇತನ ನಿಗದಿಪಡಿಸಲಾಗಿದೆ. 4 ಹಾಗೂ 5ನೇ ಆಟಗಾರನಿಗೆ ಕ್ರಮವಾಗಿ ₹18 ಕೋಟಿ ಹಾಗೂ ₹14 ಕೋಟಿ ನೀಡಬಹುದಾಗಿದೆ. ಅಂ.ರಾ. ಕ್ರಿಕೆಟ್‌ ಆಡದ ಆಟಗಾರನನ್ನು ₹4 ಕೋಟಿಗೆ ಉಳಿಸಿಕೊಳ್ಳಬಹುದು. ಒಟ್ಟಾರೆ ಆಟಗಾರರ ಖರೀದಿಗೆ ತಂಡಗಳು ₹120 ಕೋಟಿ ವೆಚ್ಚ ಮಾಡಬಹುದಾಗಿದ್ದು, ಹರಾಜಿಗೂ ಮೊದಲೇ ₹79 ಕೋಟಿಯನ್ನು ಆಟಗಾರರನ್ನು ಉಳಿಸಿಕೊಳ್ಳಲು ಬಳಸಿಕೊಳ್ಳಬಹುದು.

ಯಾವ ಆಟಗಾರನಿಗೆ ಎಷ್ಟು ದುಡ್ಡು ಕೊಡಬೇಕು ಎನ್ನುವುದನ್ನು ಫ್ರಾಂಚೈಸಿಗಳು ನಿರ್ಧರಿಸಬಹುದಾಗಿದ್ದು, ಒಂದು ವೇಳೆ ನಿಗದಿತ ₹79 ಕೋಟಿಗಿಂತ ಹೆಚ್ಚು ಮೊತ್ತವನ್ನು ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಬಳಸಿದರೆ, ಹರಾಜಿನಲ್ಲಿ ಬಳಸಬಹುದಾದ ಮೊತ್ತದಿಂದ ಕಡಿತಗೊಳಿಸುವುದಾಗಿ ಐಪಿಎಲ್‌ ಆಡಳಿತ ಮಂಡಳಿ ತಿಳಿಸಿದೆ.

ಧೋನಿಯ ಈ 7 ಜೀವನ ಪಾಠಗಳು ಅಳವಡಿಸಿಕೊಂಡರೇ ನಿಮ್ಮ ಬದುಕು ಬದಲಾಗೋದು ಗ್ಯಾರಂಟಿ!

ವನಿತಾ ಐಪಿಎಲ್‌: ರೀಟೈನ್‌ ಪಟ್ಟಿ ಸಲ್ಲಿಕೆಗೆ ನ.7ರ ಗಡುವು

ನವದೆಹಲಿ: ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌) ಆಟಗಾರ್ತಿಯರ ರೀಟೈನ್‌ ಪಟ್ಟಿ ಸಲ್ಲಿಸಲು ಫ್ರಾಂಚೈಸಿಗಳಿಗೆ ಬಿಸಿಸಿಐ ನ.7ರ ಗಡುವು ನೀಡಿದೆ ಎಂದು ವರದಿಯಾಗಿದೆ. ಈ ಮೊದಲ ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಸಲ್ಲಿಕೆಗೆ ಅ.15ರ ಗಡುವು ನೀಡಲಾಗಿತ್ತು. ಸದ್ಯ ಅವಧಿ ವಿಸ್ತರಿಸಲಾಗಿದೆ. ರೀಟೈನ್‌ ಪಟ್ಟಿ ಸಲ್ಲಿಕೆ ಬಳಿಕ ಬಿಸಿಸಿಐ ಹರಾಜು ಪ್ರಕ್ರಿಯೆ ದಿನಾಂಕ ನಿಗದಿಪಡಿಸಲಿದೆ.
 

Latest Videos
Follow Us:
Download App:
  • android
  • ios