ಕೋಲ್ಕತಾ(ನ.24): ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದ ಟೀಂ ಇಂಡಿಯಾ ಇತಿಹಾಸ ರಚಿಸಿದೆ. ಪಿಂಕ್ ಬಾಲ್ ಪಂದ್ಯ ಗೆದ್ದ ಬಳಿಕ ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಗೆಲುವಿನ ಪರಿಪಾಠ ಸೌರವ್ ಗಂಗೂಲಿಯಿಂದ ಆರಂಭಗೊಂಡಿತು. ನಾವು ಮುಂದುವರಿಸುತ್ತಿದ್ದೇವೆ ಎಂದಿದ್ದರು. ಆದರೆ ಕೊಹ್ಲಿ ಹೇಳಿಕೆಗೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಇದು ದಾದಾ ಪಡೆ ಎಂದು ಗುಡುಗಿದ ವಿರಾಟ್..!

ತಿರುಗೇಟು ನೀಡುವುದನ್ನು ದಾದಾ ಪಡೆಯಿಂದ ಕಲಿತುಕೊಂಡಿದ್ದೇವೆ ಎಂದು ಕೊಹ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸುನಿಲ್ ಗವಾಸ್ಕರ್, ಕೊಹ್ಲಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಸೌರವ್ ಗಂಗೂಲಿ ಅಧ್ಯಕ್ಷ ಅನ್ನೋ ಕಾರಣಕ್ಕೆ ಕೊಹ್ಲಿ ಆ ರೀತಿ ಹೇಳಿಕೆ ನೀಡಿದ್ದಾರೋ ತಿಳಿದಿಲ್ಲ. ಆದರೆ ಕೊಹ್ಲಿ ಒಂದು ಅರ್ಥಮಾಡಿಕೊಳ್ಳಬೇಕು, ಟೀಂ ಇಂಡಿಯಾ 2000 ಇಸವಿ ಬಳಿಕ ಗೆಲುವಿನ ಲಯಕ್ಕೆ ಬಂದಿರುವುದಲ್ಲ. 1970-80ರ ದಶತದಲ್ಲಿ ವಿದೇಶಿ ನೆಲದಲ್ಲಿ ಗೆಲುವು ಸಾಧಿಸಿದೆ. ಈ ವೇಳೆ ಕೊಹ್ಲಿ ಹುಟ್ಟಿರಲಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ: ಪಿಂಕ್ ಬಾಲ್ ಟೆಸ್ಟ್; ಮೊದಲ ಶತಕ ಸಿಡಿಸಿದ್ದು ಕೊಹ್ಲಿ ಅಲ್ಲ, ರಾಹುಲ್ ದ್ರಾವಿಡ್!

ಹಲವರು ಭಾರತೀಯ ಕ್ರಿಕೆಟ್ ಆರಂಭವಾಗಿರುವುದು 2000ನೇ ಇಸವಿಯಲ್ಲಿ ಎಂದುಕೊಂಡಿದ್ದಾರೆ. 1970ರಲ್ಲಿ ಭಾರತ ತಂಡ ವಿದೇಶದಲ್ಲಿ ಸರಣಿ ಗೆದ್ದಿತ್ತು. 1986ರಲ್ಲೂ ವಿದೇಶಿ ಪ್ರವಾಸದಲ್ಲಿ ಸರಣಿ ಗೆದ್ದಿತ್ತು, ಸರಣಿ ಡ್ರಾ ಕೂಡ ಮಾಡಿಕೊಂಡಿದೆ. ತಿರುಗೇಟು ನೀಡುವುದು, ವಿದೇಶದಲ್ಲಿ ಗೆಲುವು ಸಾಧಿಸಿವುದು 1970ರಲ್ಲೇ ಇತ್ತು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಬಿಸಿಸಿಐ ಅಧ್ಯಕ್ಷನನ್ನು ಮೆಚ್ಚಿಸಲು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.