ಕೇಪ್ ಟೌನ್(ಜ.04): ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಆರಂಭದಲ್ಲೇ ಕುತೂಹಲ ಕೆರಳಿಸಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಹಾಸ್ಯಾಸ್ಪದ ರೀತಿಯಲ್ಲಿ ಔಟಾಗಿದ್ದಾರೆ. ರಬಾಡ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದ ಬ್ರಾಡ್‌ರನ್ನು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.

ಇದನ್ನೂ ಓದಿ: ಮೈಕೆಲ್‌ ಜಾಕ್ಸನ್‌ನಂತೆ ಬಳುಕಿದ ಮ್ಯಾಥ್ಯೂ ವೇಡ್‌

ರಬಾಡ ಎಸೆತವನ್ನು ಡಿಫೆಂಡ್ ಮಾಡಿಕೊಳ್ಳಲು ಯತ್ನಿಸಿದ ಬ್ರಾಡ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಬ್ರಾಡ್ ಡಿಫೆಂಡ್ ಮಾಡಿಕೊಳ್ಳಲು ಬ್ಯಾಟ್ ಕೆಳಗಿಡುತ್ತಿದ್ದಂತೆ ಬ್ಯಾಟ್, ಬ್ರಾಡ್ ಪ್ಯಾಡ್‌ಗೆ ತಾಗಿದೆ. ಹೀಗಾಗಿ ಬಾಲ್ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ ಬಾಲ್ ನೇರವಾಗಿ ಸ್ಟಂಪ್ ಎಗರಿಸಿತ್ತು

ಇದನ್ನೂ ಓದಿ: 300+ ಚೇಸಿಂಗ್; ಟೀಂ ಇಂಡಿಯಾ ನಂ.1!

2014ರಲ್ಲಿ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಎಸೆತ ಮುಖಕ್ಕೆ ಬಡಿದು ಗಂಭೀರವಾಗಿ ಗಾಯಗೊಂಡಿದ್ದರು. ಇಷ್ಟೇ ಅಲ್ಲ ಕೆಲ ತಿಂಗಳು ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ ಅಭಿಮಾನಿಗಳು ಬ್ರಾಡ್ ಕಾಮಿಡಿ ಬ್ಯಾಟಿಂಗ್ ಮುಂದುವರಿದಿದೆ ಎಂದು ಉಮೇಶ್ ಯಾದವ್ ಎಸೆತವನ್ನೂ ನೆನಪಿಸಿಕೊಂಡಿದ್ದಾರೆ.