ಮೆಲ್ಬರ್ನ್‌(ಡಿ.27): ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ನಡುವಣ ನಡೆಯುತ್ತಿರುವ 2ನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್‌ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ವೇಡ್‌, ದಿಗ್ಗಜ ಪಾಪ್‌ ಗಾಯಕ ಮೈಕೆಲ್‌ ಜಾಕ್ಸನ್‌ ಅವರಂತೆ ಬಳುಕಿದ್ದಾರೆ. ಇದೀಗ ಮಾಥ್ಯೂ ವೇಡ್ ಶೈಲಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಕೇವಲ 40 ನಿಮಿಷದಲ್ಲಿ ಹೃದಯ ಗೆದ್ದ ನಾಯಕ; ಗಂಗೂಲಿ ಹೊಗಳಿದ ಪಾಕ್ ದಿಗ್ಗಜ!

ಕ್ರೀಸ್‌ಗಿಳಿದ ವೇಡ್‌, ನ್ಯೂಜಿಲೆಂಡ್‌ ಬೌಲರ್‌ ನೀಲ್‌ ವ್ಯಾಗ್ನರ್‌ ಎಸೆತವನ್ನು ವಿಚಿತ್ರವಾಗಿ ಎದುರಿಸಲು ಮುಂದಾಗಿದ್ದಾರೆ. ಇದು ಜಾಕ್ಸನ್‌ ಅವರ ನೃತ್ಯದಂತೆ ಕಂಡಿತು. ಈ ಫೋಟೋವನ್ನು ಆಸ್ಪ್ರೇಲಿಯಾ ಕ್ರಿಕೆಟ್‌ ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ ಆಸ್ಪ್ರೇಲಿಯಾ ಡಾಟ್‌ ಕಾಂ ನಲ್ಲಿ ಪ್ರಕಟಿಸಿದೆ. ವೇಡ್‌ ಹಾಗೂ ಜಾಕ್ಸನ್‌ ಅವರ ನೃತ್ಯದ ಚಿತ್ರವನ್ನು ಪ್ರಕಟಿಸಿ ವೇಡ್‌ ಎಲ್ಲಾ ಓಕೆ ತಾನೆ ಎಂದು ಕಾಲೆಳೆದಿದೆ.

 

ಇದನ್ನೂ ಓದಿ: ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನದಲ್ಲಿ 2020ರ IPL ಫೈನಲ್ ಪಂದ್ಯ?

ಮಾರ್ನಸ್‌ ಲಬುಶೇನ್‌ ಹಾಗೂ ಸ್ಟೀವ್‌ ಸ್ಮಿತ್‌ ಆಕರ್ಷಕ ಅರ್ಧಶತಕಗಳ ನೆರವಿನಿಂದ ಆಸ್ಪ್ರೇಲಿಯಾ, ನ್ಯೂಜಿಲೆಂಡ್‌ ವಿರುದ್ಧ ಗುರುವಾರದಿಂದ ಇಲ್ಲಿ ಆರಂಭವಾಗಿರುವ 2ನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್‌ ಮೊತ್ತದತ್ತ ಮುನ್ನಡೆದಿದೆ. ಲಬುಶೇನ್‌ (63), ಆರಂಭಿಕ ಡೇವಿಡ್‌ ವಾರ್ನರ್‌ (41), ಮ್ಯಾಥ್ಯೂ ವೇಡ್‌ 38 ರನ್‌ಗಳಿಸಿದರು. ಮುರಿಯದ 5ನೇ ವಿಕೆಟ್‌ಗೆ ಸ್ಮಿತ್‌ ಹಾಗೂ ಟ್ರಾವಿಸ್‌ ಹೆಡ್‌ 41 ರನ್‌ ಜೊತೆಯಾಟ ನಿರ್ವಹಿಸಿದ್ದಾರೆ. ಆಸ್ಪ್ರೇಲಿಯಾ ಮೊದಲ ದಿನದಂತ್ಯಕ್ಕೆ 4 ವಿಕೆಟ್‌ಗೆ 257 ರನ್‌ಗಳಿಸಿದೆ. ಸ್ಮಿತ್‌ ಅಜೇಯ 77 ಹಾಗೂ ಟ್ರಾವಿಸ್‌ ಹೆಡ್‌ 25 ರನ್‌ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.