Asianet Suvarna News Asianet Suvarna News

ಮಯಾಂಕ್ ಬೆಂಕಿಯುಗುಳುವ ಚೆಂಡಿನ ಬಗ್ಗೆ ಸ್ಟೀವ್‌ ಸ್ಮಿತ್‌ಗೆ ವಾರ್ನಿಂಗ್ ಕೊಟ್ಟ ಸ್ಟುವರ್ಟ್ ಬ್ರಾಡ್..!

ಭಾರತದ ಪ್ರತಿಭಾನ್ವಿತ ಯುವ ವೇಗಿ ಮಯಾಂಕ್ ಯಾದವ್, ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 27 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಲಖನೌ ಸೂಪರ್ ಜೈಂಟ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮಯಾಂಕ್ ಅವರ ಈ ಅದ್ಭುತ ಪ್ರದರ್ಶನಕ್ಕೆ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

Stuart Broad issues a big warning to Steve Smith about new pace sensation Mayank Yadav kvn
Author
First Published Apr 1, 2024, 9:45 AM IST

ಲಖನೌ(ಏ.01): ಐಪಿಎಲ್‌ ಮತ್ತೊಬ್ಬ ‘ಎಕ್ಸ್‌ಪ್ರೆಸ್‌ ವೇಗಿ’ಯ ಅನಾವರಣಕ್ಕೆ ಸಾಕ್ಷಿಯಾಗಿದೆ. ಶನಿವಾರ ನಡೆದ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡದ ಮಯಾಂಕ್‌ ಯಾದವ್‌ ಗಂಟೆಗೆ 155.8 ಕಿ.ಮೀ. ವೇಗದಲ್ಲಿ ಬೌಲ್‌ ಮಾಡಿ ಕ್ರಿಕೆಟ್‌ ಜಗತ್ತಿಗೆ ಅಚ್ಚರಿ ಮೂಡಿಸಿದ್ದಾರೆ. ಇದು ಈ ಐಪಿಎಲ್‌ನ ಅತಿ ವೇಗದ ಎಸೆತ ಎನಿಸಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್, ಆಸ್ಟ್ರೇಲಿಯಾದ ಬ್ಯಾಟರ್ ಸ್ಟೀವ್ ಸ್ಮಿತ್‌ಗೆ ಎಚ್ಚರಿಕೆ ರವಾನಿಸಿದ್ದಾರೆ. 

ಹೌದು, ಭಾರತದ ಪ್ರತಿಭಾನ್ವಿತ ಯುವ ವೇಗಿ ಮಯಾಂಕ್ ಯಾದವ್, ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 27 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಲಖನೌ ಸೂಪರ್ ಜೈಂಟ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮಯಾಂಕ್ ಅವರ ಈ ಅದ್ಭುತ ಪ್ರದರ್ಶನಕ್ಕೆ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಮಿಯಾಮಿ ಓಪನ್‌ನಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಚಾಂಪಿಯನ್‌

ಇದೀಗ ಮಯಾಂಕ್ ಯಾದವ್ ಅವರ ಈ ಮಾರಕ ದಾಳಿ ಹಲವು ಕ್ರಿಕೆಟ್ ಪಂಡಿತರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮಯಾಂಕ್ ಯಾದವ್ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ದಿಗ್ಗಜ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್, "ನಾನು ಈಗಾಗಲೇ ಸ್ಟೀವ್ ಸ್ಮಿತ್‌ಗೆ ಮೆಸೇಜ್ ಮಾಡಿದ್ದೇನೆ. ಟೆಸ್ಟ್ ಸರಣಿಯಲ್ಲಿ ಈತನ ಬೆಂಕಿ ವೇಗದ ದಾಳಿಯನ್ನು ಎದುರಿಸುವ ಕಾಲ ದೂರವಿಲ್ಲ ಎಂದು ತಿಳಿಸಿದ್ದೇನೆ" ಎಂದು ಸ್ಟಾರ್ ಸ್ಪೋರ್ಟ್ಸ್‌ ಚಾನೆಲ್‌ನಲ್ಲಿ ಹೇಳಿದ್ದಾರೆ.

ಮಯಾಂಕ್ ಯಾದವ್ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೇ ಲಖನೌ ಸೂಪರ್ ಜೈಂಟ್ಸ್ ತಂಡ ಭಾಗವಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ 2023ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದರು. ಚೊಚ್ಚಲ ಪಂದ್ಯದಲ್ಲೇ ಇದೀಗ ಮಯಾಂಕ್ ಯಾದವ್ ಅವರ ಈ ಬೌಲಿಂಗ್ ಪ್ರದರ್ಶನ ಸಾಕಷ್ಟು ವಿಶೇಷ ಎನಿಸಿಕೊಂಡಿದೆ.

ಧೋನಿ ಬೆರುಗುಗೊಳಿಸಿದ ಪತಿರಾನ ಕ್ಯಾಚ್, IPL 2024 ಅತ್ಯುತ್ತಮ ಕ್ಯಾಚ್ ಪಟ್ಟ!

ಭಾರತ ಕ್ರಿಕೆಟ್ ತಂಡವು ಮುಂಬರುವ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲಿದೆ. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ನವೆಂಬರ್ 22ರಿಂದ ಆರಂಭವಾಗಲಿದೆ

ಗಂಟೆಗೆ 156 ಕಿ.ಮೀ. ವೇಗದಲ್ಲಿ ಬೌಲ್‌ ಮಾಡಿದ ಲಖನೌ ಟೀಂನ ಮಯಾಂಕ್‌

ಐಪಿಎಲ್‌ನಲ್ಲಿ 155 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಬೌಲ್‌ ಮಾಡಿದ ಭಾರತದ 2ನೇ ವೇಗಿ ಎನ್ನುವ ಹಿರಿಮೆಗೆ ಡೆಲ್ಲಿಯ 21 ವರ್ಷದ ಮಯಾಂಕ್‌ ಪಾತ್ರರಾಗಿದ್ದಾರೆ. ಈ ಮೊದಲು ಜಮ್ಮು-ಕಾಶ್ಮೀರ್ ಉಮ್ರಾನ್‌ ಮಲಿಕ್‌ ಈ ಸಾಧನೆ ಮಾಡಿದ್ದರು. ಮಯಾಂಕ್‌ ತಾವು ದ.ಆಫ್ರಿಕಾದ ದಿಗ್ಗಜ ವೇಗಿ ಡೇಲ್‌ ಸ್ಟೈನ್‌ರ ಅಪ್ಪಟ ಅಭಿಮಾನಿ ಎಂದು ಹೇಳಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ವೇಗವಾಗಿ ಬೌಲ್‌ ಮಾಡುವ ಗುರಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

Follow Us:
Download App:
  • android
  • ios