Asianet Suvarna News Asianet Suvarna News

ಧೋನಿ ಬೆರುಗುಗೊಳಿಸಿದ ಪತಿರಾನ ಕ್ಯಾಚ್, IPL 2024 ಅತ್ಯುತ್ತಮ ಕ್ಯಾಚ್ ಪಟ್ಟ!

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅಬ್ಬರಕ್ಕೆ ಪತಿರಾನ ಅದ್ಭುತ ಕ್ಯಾಚ್ ಮೂಲಕ ಬ್ರೇಕ್ ಹಾಕಿದ್ದಾರೆ. ಇದೀಗ ಪತಿರಾನ ಅತ್ಯುತ್ತಮ ಕ್ಯಾಚ್ ಭಾರಿ ವೈರಲ್ ಆಗಿದೆ. ಇದು ಈ ಬಾರಿಯ ಬೆಸ್ಟ್ ಕ್ಯಾಚ್ ಎಂದು ಗುರುತಿಸುತ್ತಿದ್ದಾರೆ.
 

CSK vs DC matheesha pathirana wonderful catch Goes viral fans called best catch of IPL 2024 season ckm
Author
First Published Mar 31, 2024, 8:56 PM IST

ವಿಶಾಖಪಟ್ಟಣಂ(ಮಾ.31) ಸಿಎಸ್‌ಕೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ ಪಂದ್ಯದ ಕೆಲ ಕ್ಷಣಗಳು ಭಾರಿ ಚರ್ಚೆಯಾಗುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಹಾಫ್ ಸೆಂಚುರಿ ಸಿಡಿಸಿ ಮುನ್ನುಗ್ಗುತ್ತಿದ್ದ  ವಾರ್ನರ್ ಮುಸ್ತಾಫಿಜುರ್ ಎಸೆತದಲ್ಲಿ ರಿವರ್‌ಸ್ವೀಪ್ ಹೊಡೆತಕ್ಕೆ ಮುಂದಾಗಿ ಕೈಸುಟ್ಟುಕೊಂಡಿದ್ದಾರೆ. ಪತಿರಾನ ಹಿಡಿದ ಅದ್ಭುತ ಕ್ಯಾಚ್‌ನಿಂದ ವಾರ್ನರ್ ವಿಕೆಟ್ ಪತನಗೊಂಡಿದೆ. ಇದೀಗ ಪತಿರಾನ ಕ್ಯಾಚ್ ಈ ಆವೃತ್ತಿಯಲ್ಲಿನ ಇದುವರೆಗಿನ ಅತ್ಯುತ್ತಮ ಕ್ಯಾಚ್ ಎಂದು ಉಲ್ಲೇಖಿಸುತ್ತಿದ್ದಾರೆ.

ಡೇವಿಡ್ ವಾರ್ನರ್ 35 ಎಸೆತದಲ್ಲಿ 52 ರನ್ ಸಿಡಿಸಿದರು. 5 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ ಅಬ್ಬರಿಸಿದರು. ಆದರೆ ಮತ್ತೊಂದು ಸಿಕ್ಸರ್ ಹೊಡೆತಕ್ಕೆ ಮುಂದಾಗಿ ವಾರ್ನರ್ ವಿಕೆಟ್ ಕೈಚೆಲ್ಲಿದರು. ಥರ್ಡ್‌ಮ್ಯಾನ್ ಫೀಲ್ಡರ್ ಪತಿರಾನ ನಿಂತಲ್ಲಿಂದಲೇ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಮೂಲಕ ವಾರ್ನರ್ ಇನ್ನಿಂಗ್ಸ್ ಅಂತ್ಯಗೊಳಿಸಿದರು. 

1500+ ಸಿಕ್ಸರ್ ಸಿಡಿಸಿ 2ನೇ ಸ್ಥಾನದಲ್ಲಿದ್ರೂ RCB ಕಪ್ ಗೆದ್ದಿಲ್ಲ, ಫಸ್ಟ್ ಪ್ಲೇಸಲ್ಲಿರೋ ತಂಡ ಕಪ್ ಗೆದ್ದಿದ್ಯಾ?

ಪತಿರಾನ ಅದ್ಭುತ ಕ್ಯಾಚ್‌ನ್ನು ಎಂಎಸ್ ಧೋನಿ ಶ್ಲಾಘಿಸಿದ್ದಾರೆ. ಧೋನಿ ರಿಯಾಕ್ಷನ್ ಈ ಕ್ಯಾಚ್ ಪ್ರಾಮುಖ್ಯತೆಯನ್ನು ವಿವರಿಸುವಂತಿತ್ತು. ಚಪ್ಪಾಳೆ ತಟ್ಟುತ್ತಾ ಧೋನಿ, ಪತಿರಾನ ಅಭಿನಂದಿಸಿದರು. ಪತಿರಾನ ಕ್ಯಾಚ್ ಜೊತೆಗೆ ಧೋನಿ ರಿಯಾಕ್ಷನ್ ವಿಡಿಯೋ ಕೂಡ ವೈರಲ್ ಆಗಿದೆ.

ಅಭಿಮಾನಿಗಳು ಇದು ಐಪಿಎಲ್ 2024ರ ಇದುವರಿಗಿನ ಉತ್ತಮ ಕ್ಯಾಚ್ ಎಂದು ಹೆಸರಿಲಾಗುತ್ತಿದೆ. ಅಭಿಮಾನಿಗಳು ಬೆಸ್ಟ್ ಕ್ಯಾಚ್ ಲಿಸ್ಟ್‌ನಲ್ಲಿ ಪತಿರಾನ ಕ್ಯಾಚ್ ಮುಂಚೂಣಿಯಲ್ಲಿಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬಾರಿ ಚರ್ಚೆಯಾಗುತ್ತಿದೆ. 

 

 

ವಾರ್ನರ್ ವಿಕೆಟ್ ಪತನದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ದಿಢೀರ್ ವಿಕೆಟ್ ಕಳೆದುಕೊಂಡಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನಡೆಸಿದ ಪೃಥ್ವಿ ಶಾ, ಮಿಚೆಲ್ ಮಾರ್ಶ್, ತ್ರಿಸ್ಟನ್ ಸ್ಟಬ್ಸ್ ವಿಕೆಟ್ ಪತನಗೊಂಡಿತು.

ಈ ಬೌಲಿಂಗ್ ಪಡೆ ಇಟ್ಟುಕೊಂಡು RCB ಈ ಸಲ ಐಪಿಎಲ್ ಕಪ್ ಗೆಲ್ಲೋದು ಸಾಧ್ಯವೇ ಇಲ್ಲ

ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಆಡಿದ 2 ಪಂದ್ಯದಲ್ಲಿ 2ರಲ್ಲೂ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಆಡಿದ 2 ಪಂದ್ಯದಲ್ಲೂ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

 

 

Follow Us:
Download App:
  • android
  • ios