Asianet Suvarna News Asianet Suvarna News

ಮಿಯಾಮಿ ಓಪನ್‌ನಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಚಾಂಪಿಯನ್‌

ಆಸ್ಟ್ರೇಲಿಯಾದ ಜೊತೆಗಾರ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಕಣಕ್ಕಿಳಿದಿದ್ದ ಬೋಪಣ್ಣ, ಎಟಿಪಿ ಮಾಸ್ಟರ್ಸ್‌ 1000 ಹಂತದ ಟೂರ್ನಿಯನ್ನು ಗೆದ್ದ ವಿಶ್ವದ ಅತಿಹಿರಿಯ ಆಟಗಾರ ಎನ್ನುವ ದಾಖಲೆ ಬರೆದರು. ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಕ್ರೊವೇಷಿಯಾದ ಇವಾನ್‌ ಡೊಡಿಗ್‌ ಹಾಗೂ ಅಮೆರಿಕದ ಆಸ್ಟಿನ್‌ ಕ್ರಜಿಸೆಕ್‌ ವಿರುದ್ಧ 6-7(3), 6-3, 10-6 ಸೆಟ್‌ಗಳಲ್ಲಿ ಬೋಪಣ್ಣ ಜೋಡಿ ರೋಚಕ ಗೆಲುವು ಸಾಧಿಸಿತು.

Tennis Star Rohan Bopanna and Matthew Ebden win Miami doubles title kvn
Author
First Published Apr 1, 2024, 9:06 AM IST

ಮಿಯಾಮಿ (ಅಮೆರಿಕ): ಭಾರತದ 44 ವರ್ಷದ ದಿಗ್ಗಜ ಟೆನಿಸಿಗ ರೋಹನ್‌ ಬೋಪಣ್ಣ, ಮಿಯಾಮಿ ಓಪನ್‌ ಟೂರ್ನಿಯ ಪುರುಷರ ಡಬಲ್ಸ್‌ ಚಾಂಪಿಯನ್‌ ಆಗಿದ್ದಾರೆ.

ಆಸ್ಟ್ರೇಲಿಯಾದ ಜೊತೆಗಾರ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಕಣಕ್ಕಿಳಿದಿದ್ದ ಬೋಪಣ್ಣ, ಎಟಿಪಿ ಮಾಸ್ಟರ್ಸ್‌ 1000 ಹಂತದ ಟೂರ್ನಿಯನ್ನು ಗೆದ್ದ ವಿಶ್ವದ ಅತಿಹಿರಿಯ ಆಟಗಾರ ಎನ್ನುವ ದಾಖಲೆ ಬರೆದರು. ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಕ್ರೊವೇಷಿಯಾದ ಇವಾನ್‌ ಡೊಡಿಗ್‌ ಹಾಗೂ ಅಮೆರಿಕದ ಆಸ್ಟಿನ್‌ ಕ್ರಜಿಸೆಕ್‌ ವಿರುದ್ಧ 6-7(3), 6-3, 10-6 ಸೆಟ್‌ಗಳಲ್ಲಿ ಬೋಪಣ್ಣ ಜೋಡಿ ರೋಚಕ ಗೆಲುವು ಸಾಧಿಸಿತು.

ಈ ಗೆಲುವಿನೊಂದಿಗೆ ಬೋಪಣ್ಣ ಹಾಗೂ ಎಬ್ಡೆನ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮರಳಿ ನಂ.1 ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಗೆದ್ದ ಬಳಿಕ ಅಗ್ರಸ್ಥಾನಕ್ಕೇರಿದ್ದ ಈ ಜೋಡಿ, ದುಬೈ ಚಾಂಪಿಯನ್‌ಶಿಪ್‌ನ ಅಂತಿಮ-32ರ ಸುತ್ತಿನಲ್ಲಿ ಸೋತ ಬಳಿಕ 2ನೇ ಸ್ಥಾನಕ್ಕೆ ಕುಸಿದಿತ್ತು.

IPL 2024 ಧೋನಿ ಖದರ್ ನಡುವೆ ಸಿಎಸ್‌ಕೆಗೆ ಮೊದಲ ಸೋಲುಣಿಸಿ ಮೊದಲ ಗೆಲುವು ಕಂಡ ಡೆಲ್ಲಿ!

ಮ್ಯಾಡ್ರಿಡ್‌ ಮಾಸ್ಟರ್ಸ್‌: ರೆಡ್ಡಿ-ಸುಮಿತ್‌ಗೆ ಸೋಲು

ಮ್ಯಾಡ್ರಿಡ್‌: ಭಾರತದ ತಾರಾ ಶಟ್ಲರ್‌ಗಳಾದ ಸಿಕ್ಕಿ ರೆಡ್ಡಿ-ಸಿಮಿತ್‌ ರೆಡ್ಡಿ ದಂಪತಿ ಮ್ಯಾಡ್ರಿಡ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೋತು ಹೊರಬಿದ್ದಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಶನಿವಾರ ಭಾರತೀಯ ಜೋಡಿಗೆ, ಇಂಡೋನೇಷ್ಯಾದ ರಿನೊವ್‌ ರಿವಾಲ್ಡಿ-ಪಿಥಾ ಮೆಂಟರಿ ವಿರುದ್ಧ 17-21, 12-21 ಗೇಮ್‌ಗಳಲ್ಲಿ ಸೋಲು ಎದುರಾಯಿತು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ.

ಗ್ರಾಮೀಣ ಬಾಸ್ಕೆಟ್‌ಬಾಲ್‌: ಮಂಗಳೂರು ಚಾಂಪಿಯನ್‌

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ ಆಯೋಜಿಸಿದ ರಾಜ್ಯ ಮಟ್ಟದ ಗ್ರಾಮೀಣ ಬಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಮಂಗಳೂರು ಬಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್‌ನಲ್ಲಿ ಮಂಗಳೂರು ತಂಡ ರೈಸಿಂಗ್‌ ಸ್ಟಾರ್‌ ಬಿಸಿ ಮೈಸೂರು ವಿರುದ್ಧ 81-65ರಲ್ಲಿ ಜಯಗಳಿಸಿತು. 

ಶಾಮನೂರು ಶಿವಶಂಕರಪ್ಪ ಸ್ತ್ರೀದ್ವೇಷಿ ಹೇಳಿಕೆಗೆ ಕಿಡಿಕಾರಿದ ಬ್ಯಾಡ್ಮಿಂಟನ್ ತಾರೆ ಸೈನ್ ನೆಹ್ವಾಲ್..!

ಆರ್ಯನ್‌ ಬಿಸಿ 3ನೇ, ಹೊಯ್ಸಳ ಬಿಸಿ 4ನೇ ಸ್ಥಾನ ಪಡೆದುಕೊಂಡವು. ಚಾಂಪಿಯನ್‌ ತಂಡ ₹50,000 ನಗದು, ರನ್ನರ್‌ಅಪ್‌ ತಂಡ ₹30000 ನಗದು ಬಹುಮಾನ ಪಡೆಯಿತು. ವಿಜೇತರಿಗೆ ಫಿಬಾ ಏಷ್ಯಾ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಸೇರಿದಂತೆ ಗಣ್ಯರು ಟ್ರೋಫಿ ಹಸ್ತಾಂತರಿಸಿದರು.
 

Follow Us:
Download App:
  • android
  • ios