ಏಷ್ಯನ್ ಟಿ20 ಕದನ ನಿರ್ಣಾಯಕ ಹಂತ ತಲುಪಿದೆ. ಪ್ರಶಸ್ತಿ ಗೆಲ್ಲುವ ಕನಸಿನಲ್ಲಿರುವ ಎರಡು ತಂಡಗಳಾದ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ದುಬೈ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ದುಬೈ (ಸೆ.11): ಎರಡು ವಾರಗಳ ಹಿಂದೆ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಏಷ್ಯಾಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿದೆ ಎಂದಿದ್ದರೆ ಯಾರೂ ನಂಬುತ್ತಿರಲಿಲ್ಲ. ಆದರೆ, ಭರ್ಜರಿ ಆಟವಾಡಿರುವ ಈ ಎರಡೂ ದೇಶಗಳ ಏಷ್ಯಾಕಪ್ ಟಿ20 ಟೂರ್ನಿಯ ಟ್ರೋಫಿ ಜಯಿಸುವ ನಿಟ್ಟಿನಲ್ಲಿ ಇಂದು ದುಬೈ ಸ್ಟೇಡಿಯಂನಲ್ಲಿ ಕಾದಾಟ ನಡೆಸಲಿದೆ. ದುಬೈ ಮೈದಾನದಲ್ಲಿ ಅತಿ ಮುಖ್ಯವಾದ ಟಾಸ್‌ಅನ್ನು ಪಾಕಿಸ್ತಾನ ಜಯಿಸಿದ್ದು, ನಾಯಕ ಬಾಬರ್ ಅಜಮ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಎರಡೂ ತಂಡಗಳು ಏಷ್ಯಾಕಪ್‌ನ ತಮ್ಮ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದವು. ಶ್ರೀಲಂಕಾ ತಂಡ ಅಫ್ಘಾನಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯ ಸೋತಿದ್ದರೆ, ಪಾಕಿಸ್ತಾನ ತಂಡ ಭಾರತಕ್ಕೆ ಶರಣಾಗಿತ್ತು. ಆದರೆ, ಈ ಎಲ್ಲಾ ಸೋಲುಗಳನ್ನು ಹಿಂದಿಟ್ಟು, ಸೂಪರ್-4ನಲ್ಲಿ ಅದ್ಭುತ ನಿರ್ವಹಣೆ ತೋರುವ ಮೂಲಕ ಫೈನಲ್ ಹಂತಕ್ಕೇರಿದೆ. ಫೈನಲ್ ಪಂದ್ಯಕ್ಕೆ ಶ್ರೀಲಂಕಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇನ್ನು ಪಾಕಿಸ್ತಾನ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿದೆ. ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಕೂಡ ಮೊದಲು ಬೌಲಿಂಗ್ ಮಾಡಲು ತಾವು ಇಚ್ಛಿಸಿದ್ದಾಗಿ ಟಾಸ್‌ನ ವೇಳೆ ತಿಳಿಸಿದರು.
ಟಾಸ್ ಗೆದ್ದಲ್ಲಿ ಬೌಲಿಂಗ್ ಮಾಡಬೇಕೆನ್ನುವ ಆಸೆ ಇತ್ತು. ಇದು ಫೈನಲ್ ಪಂದ್ಯವಾಗಿರುವ ಕಾರಣ, ಮೊದಲು ಬ್ಯಾಟಿಂಗ್ ಮಾಡೋದು ಕೂಡ ಖುಷಿ. ಆರಂಭಿಕರು ಉತ್ತಮವಾಗಿ ಆಡಿದರು. ಮಧುಶಂಕ ಮತ್ತು ಮಹೇಶ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್‌ಗೆ ಇದು ಶುಭ ಸೂಚನೆ. ಈ ಟೂರ್ನಿಯಲ್ಲಿ ದಾಖಲೆ ಉತ್ತಮವಾಗಿದೆ. ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಟಾಸ್ ವೇಳೆ ಶ್ರೀಲಂಕಾ ನಾಯಕ ಹೇಳಿದ್ದಾರೆ.
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ವಿ.ಕೀ), ದನುಷ್ಕ ಗುಣತಿಲಕ, ಧನಂಜಯ ಡಿ ಸಿಲ್ವಾ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ
ಮೊದಲು ಬೌಲಿಂಗ್ ಮಾಡಲಿದ್ದೇವೆ. ಈ ಪಂದ್ಯಕ್ಕಾಗಿ ನಾವು ಎದುರು ನೋಡುತ್ತಿದ್ದೆವು. ತಂಡದ ವಿಶ್ವಾಸ ಕೂಡ ಹೆಚ್ಚಿದೆ. ಈ ಟೂರ್ನಿಯಲ್ಲಿ ನಾವು ಬಹಳ ಉತ್ತಮವಾಗಿ ಆಡಿದ್ದೇವೆ. ಪ್ರತಿ ಪಂದ್ಯದಲ್ಲೂ ಹೊಸ ಆಟಗಾರ ಪಂದ್ಯಶ್ರೇಷ್ಠ ಆಟಗಾರನಾಗಿರುವುದು ಇದಕ್ಕೆ ಸಾಕ್ಷಿ. ಶಾದಾಬ್ ಹಾಗೂ ನಸೀಮ್ ತಂಡಕ್ಕೆ ಮರಳಿದ್ದಾರೆ. ಉಸ್ಮಾನ್ ಹಾಗೂ ಹಸನ್ ತಂಡದಿಂದ ಹೊರಬಿದ್ದಿದ್ದಾರೆ ಎಂದು ಪಾಕ್ ನಾಯಕ ಬಾಬರ್ ಅಜಮ್ ಹೇಳಿದ್ದಾರೆ.
ಪಾಕಿಸ್ತಾನ ಪ್ಲೇಯಿಂಗ್ ಇಲೆವೆನ್: ಮೊಹಮ್ಮದ್ ರಿಜ್ವಾನ್(ವಿ.ಕೀ), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಆಸಿಫ್ ಅಲಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹಸ್ನಾಯಿನ್
ಟಿ20 ವಿಶ್ವಕಪ್‌ಗೆ ಈ ವಾರ ತಂಡ ಆಯ್ಕೆ, ಫಿಟ್ನೆಸ್ ಟೆಸ್ಟ್ ಕ್ಲಿಯರ್ ಮಾಡಿದ ಬುಮ್ರಾ, ಹರ್ಷಲ್!
ಎರಡೂ ತಂಡಗಳ ಪೈಕಿ, 2021ರಿಂದ ಆರಂಭವಾಗಿ ವಿಶ್ವದ ಅಗ್ರ 10 ತಂಡಗಳ ವಿರುದ್ಧ ಪಾಕಿಸ್ತಾನ (Pakistan) ತಂಡ ಶ್ರೀಲಂಕಾಕ್ಕಿಂತ ಉತ್ತಮ ದಾಖಲೆ ಹೊಂದಿದೆ. ಮೊದಲು ಬ್ಯಾಟಿಂಗ್ ಮಾಡಿ ಪಾಕಿಸ್ತಾನ ತಂಡ 12 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಕಂಡಿದ್ದರೆ, ಶ್ರೀಲಂಕಾ (Sri Lanka) ತಂಡ 17 ಪಂದ್ಯಗಳಲ್ಲಿ ಕೇವಲ 2 ರಲ್ಲಿ ಗೆಲುವು ಕಂಡಿದೆ. ಇನ್ನು ಚೇಸಿಂಗ್ ಮಾಡುವ ವೇಳೆ ಪಾಕಿಸ್ತಾನ 17 ಪಂದ್ಯಗಳಲ್ಲಿ 13ರಲ್ಲಿ ಗೆಲುವು ಸಾಧಿಸಿದ್ದರೆ, ಶ್ರೀಲಂಕಾ ತಂಡ 19 ಪಂದ್ಯಗಳ ಪೈಕಿ 9 ರಲ್ಲಿ ಗೆಲುವು ಕಂಡಿದೆ.
ಏಷ್ಯಾಕಪ್‌ಗಾಗಿಂದು ಶ್ರೀಲಂಕಾ vs ಪಾಕಿಸ್ತಾನ ಕದನ
ನಾಲ್ಕನೇ ಬಾರಿ ಮುಖಾಮುಖಿ: ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್‌ನ ಫೈನಲ್‌ನಲ್ಲಿ (Asia Cup Final) ನಾಲ್ಕನೇ ಬಾರಿ ಮುಖಾಮುಖಿಯಾಗುತ್ತಿವೆ. 1986 ಹಾಗೂ 2014ರಲ್ಲಿ ಶ್ರೀಲಂಕಾ ಜಯ ಕಂಡಿದ್ದರೆ, ಪಾಕಿಸ್ತಾನ 2000ದಲ್ಲಿ (Cricket) ಜಯ ಕಂಡಿತ್ತು. ಇದು ಶ್ರೀಲಂಕಾ ತಂಡಕ್ಕೆ 11ನೇ ಫೈನಲ್ ಆಗಿದೆ. ಯಾವುದೇ ತಂಡ ಕೂಡ ಏಷ್ಯಾಕಪ್‌ನಲ್ಲಿ ಇಷ್ಟು ಬಾರಿ ಫೈನಲ್‌ಗೇರಿಲ್ಲ.
