Asianet Suvarna News Asianet Suvarna News

ಉಲ್ಟಾ ಹೊಡೆದ ಲಂಕಾ ನಾಯಕ: ಕೊಹ್ಲಿ ಶತಕಕ್ಕೆ ನಾನೇಕೆ ಶುಭಕೋರಲಿ ಎಂದಿದ್ದ ಮೆಂಡೀಸ್

ಕುಸಾಲ್‌ ಮೆಂಡಿಸ್‌ ನೇತೃತ್ವದ ಶ್ರೀಲಂಕಾ ತಂಡವು ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 9 ಲೀಗ್ ಪಂದ್ಯಗಳ ಪೈಕಿ 2 ಗೆಲುವು ಹಾಗೂ 7 ಸೋಲು ಸಹಿತ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದೆ. ಈ ಮೂಲಕ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ವಿಫಲವಾಗಿದೆ.

Sri Lanka Captain Kusal Mendis clarifies amid furore over refusal to laud Virat Kohli 49th ODI Century kvn
Author
First Published Nov 13, 2023, 11:16 AM IST | Last Updated Nov 13, 2023, 11:16 AM IST

ನವದೆಹಲಿ(ನ.13): ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಬಾರಿಸಿದ ಬಗ್ಗೆ ಇತ್ತೀಚೆಗೆ ಪತ್ರಕರ್ತರು ಪ್ರಶ್ನಿಸಿದಾಗ, ‘ನಾನೇಕೆ ಕೊಹ್ಲಿಗೆ ಅಭಿನಂದನೆ ಸಲ್ಲಿಸಲಿ’ ಎಂದು ಶ್ರೀಲಂಕಾ ನಾಯಕ ಕುಸಾಲ್‌ ಮೆಂಡಿಸ್‌ ಸುದ್ದಿಗೋಷ್ಟಿಯಲ್ಲಿ ಉತ್ತರಿಸಿದ್ದು ಭಾರೀ ವೈರಲ್‌ ಆಗಿತ್ತು. 

ಈ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿರುವ ಮೆಂಡಿಸ್‌, ‘ಸುದ್ದಿಗೋಷ್ಟಿ ವೇಳೆ ಕೊಹ್ಲಿಯ ಶತಕ ನನ್ನ ಅರಿವಿಗೆ ಬಂದಿರಲಿಲ್ಲ. ಪತ್ರಕರ್ತರ ಪ್ರಶ್ನೆಯೂ ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ. ಕೊಹ್ಲಿ ಶ್ರೇಷ್ಠ ಕ್ರಿಕೆಟಿಗ. 49 ಶತಕ ಬಾರಿಸಿದ್ದು ಸಣ್ಣ ಸಾಧನೆಯೇನಲ್ಲ. ಅವರ ಶತಕದ ಬಗ್ಗೆ ನಾನು ಹಾಗೆ ಪ್ರತಿಕ್ರಿಯಿಸಬಾರದಿತ್ತು’ ಎಂದಿದ್ದಾರೆ.

ಕುಸಾಲ್‌ ಮೆಂಡಿಸ್‌ ನೇತೃತ್ವದ ಶ್ರೀಲಂಕಾ ತಂಡವು ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 9 ಲೀಗ್ ಪಂದ್ಯಗಳ ಪೈಕಿ 2 ಗೆಲುವು ಹಾಗೂ 7 ಸೋಲು ಸಹಿತ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದೆ. ಈ ಮೂಲಕ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ವಿಫಲವಾಗಿದೆ.

ವರ್ಷದಲ್ಲಿ 8ನೇ ಬಾರಿ ಭಾರತ 350+ ರನ್‌!

ಬೆಂಗಳೂರು: ವರ್ಷವೊಂದರಲ್ಲಿ ಏಕದಿನ ಇನ್ನಿಂಗ್ಸಲ್ಲಿ ಅತಿಹೆಚ್ಚು ಬಾರಿ 350ಕ್ಕೂ ಹೆಚ್ಚು ರನ್‌ ಕಲೆಹಾಕಿದ ದಾಖಲೆಗೆ ಭಾರತ ತಂಡ ಪಾತ್ರವಾಗಿದೆ. ನೆದರ್‌ಲೆಂಡ್ಸ್‌ ವಿರುದ್ಧ ಭಾನುವಾರ 410 ರನ್‌ ಗಳಿಸಿದ ಭಾರತ, 2023ರಲ್ಲಿ 8ನೇ ಬಾರಿಗೆ 350ಕ್ಕಿಂತ ಹೆಚ್ಚು ಮೊತ್ತ ಕಲೆಹಾಕಿತು. ಇದರೊಂದಿಗೆ ಇಂಗ್ಲೆಂಡ್‌ ಹೆಸರಲ್ಲಿದ್ದ ದಾಖಲೆಯನ್ನು ಮುರಿಯಿತು. ಇಂಗ್ಲೆಂಡ್‌ 2019ರಲ್ಲಿ 7 ಬಾರಿ 350+ ರನ್‌ ಗಳಿಸಿತ್ತು. ಈ ವರ್ಷ ದ.ಆಫ್ರಿಕಾ 6 ಬಾರಿ, ಆಸ್ಟ್ರೇಲಿಯಾ 5 ಬಾರಿ ಈ ಸಾಧನೆ ಮಾಡಿವೆ.

IPL Auction ಮುನ್ನ ಮುಂಬೈ ಇಂಡಿಯನ್ಸ್‌ ಡೆಡ್ಲಿ ವೇಗಿಗೆ ಗೇಟ್‌ಪಾಸ್?

ವಿಶ್ವಕಪ್‌ನಲ್ಲಿ ಭಾರತ ಪರ ಕೆ.ಎಲ್.ರಾಹುಲ್‌ ವೇಗದ ಶತಕ ದಾಖಲೆ

ಬೆಂಗಳೂರು: ನೆದರ್‌ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದ ಕೆ.ಎಲ್‌.ರಾಹುಲ್‌, ವಿಶ್ವಕಪ್‌ನಲ್ಲಿ ಭಾರತೀಯರ ಪೈಕಿ ವೇಗದ ಶತಕದ ದಾಖಲೆ ಬರೆದರು. ಪಂದ್ಯದಲ್ಲಿ ಅವರು 64 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 102 ರನ್‌ ಸಿಡಿಸಿದರು. ಈ ವರೆಗೆ ವೇಗದ ಶತಕ ದಾಖಲೆ ರೋಹಿತ್‌ ಶರ್ಮಾ ಅವರ ಹೆಸರಲ್ಲಿತ್ತು. ಇತ್ತೀಚೆಗಷ್ಟೇ ಅಫ್ಘಾನಿಸ್ತಾನ ವಿರುದ್ಧ ಅವರು 63 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ್ದರು. 2007ರಲ್ಲಿ ಬರ್ಮುಡಾ ವಿರುದ್ಧ ವೀರೇಂದ್ರ ಸೆಹ್ವಾಗ್‌ 81 ಎಸೆತಗಳಲ್ಲಿ ಹಾಗೂ 2011ರಲ್ಲಿ ಬಾಂಗ್ಲಾದೇಶ ವಿರುದ್ಧ ವಿರಾಟ್‌ ಕೊಹ್ಲಿ 83 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು.

INDvNED ಕೊಹ್ಲಿ ಬೌಲಿಂಗ್‌ನಲ್ಲಿ ಬಿತ್ತು ವಿಕೆಟ್, ಅನುಷ್ಕಾ ಶರ್ಮಾ ರಿಯಾಕ್ಷನ್ ವಿಡಿಯೋ ವೈರಲ್!

ಇಂಗ್ಲೆಂಡ್‌ ನಾಯಕನಾಗಿ ಬಟ್ಲರ್‌ ಮುಂದುವರಿಕೆ

ಲಂಡನ್‌: ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಕಳಪೆ ಪ್ರದರ್ಶನ ತೋರಿದ ಕಾರಣ ಜೋಸ್‌ ಬಟ್ಲರ್‌ರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಬಹುದು ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಸದ್ಯಕ್ಕೆ ಅವರನ್ನೇ ನಾಯಕನನ್ನಾಗಿ ಮುಂದುವರಿಸಲು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ನಿರ್ಧರಿಸಿದೆ. ಡಿ.3ರಿಂದ ಆರಂಭಗೊಳ್ಳಲಿರುವ ವೆಸ್ಟ್‌ಇಂಡೀಸ್‌ ವಿರುದ್ಧದ 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟಗೊಂಡಿದ್ದು, ಬಟ್ಲರ್‌ ಸೇರಿ ವಿಶ್ವಕಪ್‌ ತಂಡದಲ್ಲಿದ್ದ 6 ಮಂದಿ ಸ್ಥಾನ ಪಡೆದಿದ್ದಾರೆ.
 

Latest Videos
Follow Us:
Download App:
  • android
  • ios