ಒಂದೆಡೆ ಟೀಮ್‌ ಇಂಡಿಯಾ ಆಟಗಾರ ಹಾರ್ದಿಕ್‌ ಪಾಂಡ್ಯ ಅವರಿಗೆ ಡಿವೋರ್ಸ್ ನೀಡುವ ಸುದ್ದಿ ಬೆನ್ನಲ್ಲಿಯೇ ನತಾಶಾ ಸ್ಟಾಂಕೋವಿಕ್‌ ಹೊಸ ಹುಡುಗನ ಜೊತೆ ಕಾಣಿಸಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ. 

ಬೆಂಗಳೂರು (ಮೇ.25): ಇಂದು ದೇಶದ ಪ್ರಮುಖ ಸುದ್ದಿಗಳಲ್ಲಿ ಟೀಮ್‌ ಇಂಡಿಯಾದ ಪ್ರಮುಖ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಡಿವೋರ್ಸ್‌ ವದಂತಿಯ ಸುದ್ದಿಯೂ ವೈರಲ್‌ ಆಗಿದೆ. 2020ರಲ್ಲಿ ಸೆರ್ಬಿಯಾ ಮೂಲದ ಮಾಡೆಲ್‌ ಹಾಗೂ ನಟಿ ನತಾಶಾ ಸ್ಟಾಂಕೋವಿಕ್‌ರನ್ನು ಹಾರ್ದಿಕ್‌ ಪಾಂಡ್ಯ ವಿವಾಹವಾಗಿದ್ದರು. ಒಂದೆಡೆ ಐಪಿಎಲ್‌ನಲ್ಲಿ ತಮ್ಮ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಹೊರಬಿದ್ದಿದ್ದರೆ, ಇನ್ನೊಂದೆಡೆ ಅವರ ವೈಯಕ್ತಿಕ ಜೀವನದಲ್ಲೂ ಅತೀದೊಡ್ಡ ಹಿನ್ನಡೆ ಎದುರಾಗಿದೆ. ಮೂಲಗಳ ಪ್ರಕಾರ ಹಾರ್ದಿಕ್‌ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್‌ ಬೇರೆ ಬೇರೆಯಾಗುವ ಸಣ್ಣ ಸೂಚನೆ ಸಿಕ್ಕಿದೆ. ಸೆರ್ಬಿಯಾ ಮೂಲದ ನಟಿ ನತಾಶಾ ಸ್ಟಾಂಕೋವಿಕ್‌, ಸೋಶಿಯಲ್‌ ಮೀಡಿಯಾದಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಜೊತೆಗಿದ್ದ ಎಲ್ಲಾ ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಅದರೊಂದಿಗೆ ತಮ್ಮ ಹೆಸರಿನ ಕೊನೆಯಲ್ಲಿದ್ದ ಪಾಂಡ್ಯ ಎನ್ನುವ ಹೆಸರನ್ನೂ ತೆಗೆದುಹಾಕಿದ್ದರಿಂದ ಇವರಿಬ್ಬರೂ ಬೇರೆಬೇರೆಯಾಗುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು.

ಈವರೆಗೂ ಈ ರೂಮರ್‌ಗೆ ಯಾರೊಬ್ಬರೂ ಪ್ರತಿಕ್ರಿಯ ನೀಡಿಲ್ಲ. ಆದರೆ, ಇಬ್ಬರ ಡಿವೋರ್ಸ್‌ ಖಂಡಿತವಾಗಿ ಆಗಲಿದೆ ಎನ್ನುವ ಸೂಚನೆಗಳಂತೂ ಸಿಕ್ಕಿದೆ. ಸಾಮಾನ್ಯವಾಗಿ ಪತ್ನಿಯ ಜನ್ಮದಿನಕ್ಕೆ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಹಾರ್ದಿಕ್‌ ಪಾಂಡ್ಯ ಈ ಬಾರಿ ಇದನ್ನು ಮಾಡಿಲ್ಲ. ಇನ್ನು ನತಾಶಾ ಸ್ಟಾಂಕೋವಿಕ್‌, ಈ ವರ್ಷದ ಒಂದೇ ಒಂದು ಐಪಿಎಲ್‌ ಪಂದ್ಯಕ್ಕೂ ಹಾಜರಾಗಿಲ್ಲ. ಇದರಿಂದಾಗಿ ಇಬ್ಬರೂ ಶೀಘ್ರದಲ್ಲೇ ವಿಚ್ಛೇದನ ಪಡೆದುಕೊಳ್ಳಬಹುದು ಎನ್ನಲಾಗಿದೆ.

ಇನ್ನು ನತಾಶಾ ಸ್ಟಾಂಕೋವಿಕ್‌ ತನ್ನ ಮಾಜಿ ಗೆಳೆಯನ ಸಂಪರ್ಕದಲ್ಲಿರುವುದು ಕೂಡ ಹಾರ್ದಿಕ್‌ ಪಾಂಡ್ಯ ಆಕ್ರೋಶಕ್ಕೆ ಕಾರಣವಾಗಿದೆ. ವಿವಾಹದಲ್ಲಿ ಬಿರುಕು ಮೂಡಲು ಇದೇ ಕಾರಣ ಎನ್ನಲಾಗಿತ್ತು. ಈ ಎಲ್ಲಾ ಸುದ್ದಿಗಳ ನಡುವೆ ನತಾಶಾ ಸ್ಟಾಂಕೋವಿಕ್‌ ಶನಿವಾರ ಮಾಧ್ಯಮಗಳ ಎದುರು ಹಾಜರಾಗಿದ್ದಾರೆ.

ಡಿವೋರ್ಸ್‌ ವದಂತಿಗಳ ನಡುವೆ ಶನಿವಾರ ಜಿಮ್‌ನಿಂದ ಹೊರಬರುವ ವೇಳೆ ನತಾಶಾ ಸ್ಟಾಂಕೋವಿಕ್‌ ಅವರ ಪಕ್ಕದಲ್ಲಿ ಹೊಸ ಹುಡುಗ ಕಾಣಿಸಿಕೊಂಡಿದ್ದಾನೆ. ಈತನ ಹೆಸರು ಅಲೆಗ್ಸಾಂಡರ್‌ ಅಲೆಕ್ಸ್‌. ಈತ ಕೂಡ ಸೆರ್ಬಿಯಾ ಮೂಲದ ವ್ಯಕ್ತಿ. ನತಾಶಾ ಸ್ಟಾಂಕೋವಿಕ್‌ ಅವರ ಜಿಮ್‌ ಟ್ರೇನರ್‌ ಆಗಿರುವ ಈತ ನಟಿ ದಿಶಾ ಪಟಾನಿ ಅವರ ಮಾಜಿ ಬಾಯ್‌ಫ್ರೆಂಡ್‌ ಕೂಡ ಹೌದು. 

ಹಾರ್ದಿಕ್ ಪಾಂಡ್ಯಾ ನತಾಶಾ ವಿಚ್ಚೇದನ; ಕ್ರಿಕೆಟಿಗನ ಶೇ.70 ಆಸ್ತಿ ಪತ್ನಿ ಪಾಲಿಗೆ?

ಅಲೆಗ್ಸಾಂಡರ್‌ ಅಲೆಕ್ಸ್ ಜೊತೆ ಕಾರು ಏರಿ ಹೊರಡುವ ತಯಾರಿಯಲ್ಲಿ ನತಾಶಾ ಸ್ಟಾಂಕೋವಿಕ್‌ಗೆ ಈ ವೇಳೆ ಮಾಧ್ಯಮಗಳು ನಿಮ್ಮ ಹಾಗೂ ಹಾರ್ದಿಕ್‌ ಪಾಂಡ್ಯ ಅವರ ನಡುವೆ ವಿಚ್ಛೇದನ ಸುದ್ದಿ ಹರಿದಾಡುತ್ತಿದೆ ಇದು ನಿಜವೇ ಎಂದು ಕೇಳಲಾಗಿತ್ತು. ಆದರೆ, ಇದೆಲ್ಲಾ ಸುಳ್ಳು ಅಥವಾ ಮಾಧ್ಯಮಗಳ ದೂಷಣೆಗಳ ಹೇಳಿಕೆಯ ಬದಲು ಆಕೆ 'ಥ್ಯಾಂಕ್‌ ಯು ವೆರಿ ಮಚ್‌' ಎಂದು ಹೇಳಿ ಹೋಗಿದ್ದಾರೆ. ಇದರ ಬೆನ್ನಲ್ಲಿಯೇ ಮುಂಬೈನ ಪಾಪರಾಜಿಗಳು ಈ ಜೋಡಿ ಡಿವೋರ್ಸ್‌ ಆಗಿರುವುದು ಖಚಿತ ಎಂದು ಹೇಳುತ್ತಿದ್ದಾರೆ.

ಮದುವೆಗೆ ಮೊದಲೇ ತಂದೆಯಾಗಿದ್ದ ಹಾರ್ದಿಕ್ ಪಾಂಡ್ಯಗೆ ಕೈಕೊಟ್ರಾ ನತಾಶಾ..? ಮುಂಬೈ ನಾಯಕನಿಗೆ ಬಿಗ್ ಶಾಕ್

Scroll to load tweet…