ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ವಿಚ್ಛೇದನ ಖಚಿತವಾದರೆ, ವರದಿಯೊಂದರ ಪ್ರಕಾರ ಪಾಂಡ್ಯ ಅವರ ಆಸ್ತಿಯಲ್ಲಿ ನತಾಶಾ ಶೇ.70ರಷ್ಟು ಪಾಲು ಪಡೆಯಲಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬದುಕಿನ ಕೆಟ್ಟ ಹಂತವನ್ನು ಎದುರಿಸುತ್ತಿದ್ದಾರೆ. ಮೊದಲೇ IPL 2024ರಲ್ಲಿ ಕಳಪೆ ಪ್ರದರ್ಶನದಿಂದ ಅವರ ತಂಡ ಹೊರಗುಳಿದಿತ್ತು. ಇದೀಗ ಅವರು ಪತ್ನಿ ನತಾಶಾ ಸ್ಟಾಂಕೋವಿಕ್‌ಗೆ ಡೈವೋರ್ಸ್ ನೀಡುತ್ತಿರುವುದು ಬಹುತೇಕ ಖಚಿತವಾಗಿದೆ. ಇದನ್ನು ದಂಪತಿ ಅಧಿಕೃತವಾಗಿ ಘೋಷಿಸುವುದಷ್ಟೇ ಬಾಕಿ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ಇದು ಖಚಿತವಾದರೆ ಹಾರ್ದಿಕ್ ಗಳಿಸಿದ ಆಸ್ತಿಯ ಶೇ.70 ಪಾಲು ದೂರವಾಗಲಿರುವ ಪತ್ನಿಗೆ ಸೇರುತ್ತದೆ!

ಗುಮಾನಿ ನಿಜವಾದರೆ..
ಪಾಂಡ್ಯ ಮತ್ತು ನತಾಶಾ ದೀರ್ಘಕಾಲದಿಂದ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರೂ ಕೊನೆಯದಾಗಿ ಫೆಬ್ರವರಿ 14ರಂದು Instagram ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದಾಗ್ಯೂ, ಇದಾದ ನಂತರ ಇಬ್ಬರೂ ಫಂಕ್ಷನ್‌ನ ವಿಡಿಯೋದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ಖಚಿತಪಡಿಸದಿದ್ದರೂ, ಅವರ ಸೋಷ್ಯಲ್ ಮೀಡಿಯಾ ನಡೆಗಳು ಈ ಸುದ್ದಿ ಸತ್ಯವೆಂದೇ ಹೇಳುತ್ತಿವೆ.

ನತಾಶಾ ಸೋಷ್ಯಲ್ ಮೀಡಿಯಾಗಳಲ್ಲಿ ತನ್ನ ಹೆಸರಿನ ಮುಂದಿದ್ದ ಪಾಂಡ್ಯಾ ತೆಗೆದು ಹಾಕಿದ್ದಾರೆ. ಜೊತೆಗೆ ಪಾಂಡ್ಯಾ ಜೊತೆಗಿನ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇತ್ತ ಪಾಂಡ್ಯಾ ಕೂಡಾ ಪತ್ನಿಯ ಹುಟ್ಟುಹಬ್ಬಕ್ಕೂ ವಿಶ್ ಮಾಡಿಲ್ಲ. ಈ ಎಲ್ಲ ಕಾರಣದಿಂದ ಇವರಿಬ್ಬರೂ ಡೈವೋರ್ಸ್ ನೀಡಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

ಮದುವೆಗೆ ಮೊದಲೇ ತಂದೆಯಾಗಿದ್ದ ಹಾರ್ದಿಕ್ ಪಾಂಡ್ಯಗೆ ಕೈಕೊಟ್ರಾ ನತಾಶಾ..? ಮುಂಬೈ ನಾಯಕನಿಗೆ ಬಿಗ್ ಶಾಕ್

ವಿಚ್ಛೇದನದ ಸುದ್ದಿ ಖಚಿತವಾದಲ್ಲಿ, ವರದಿಯ ಪ್ರಕಾರ, ಪಾಂಡ್ಯ ತನ್ನ ಆಸ್ತಿಯಲ್ಲಿ 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗುತ್ತದೆ. ಈ ಕುರಿತಂತೆ ಹಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪಾಂಡ್ಯ ಕೋಟಿಗಟ್ಟಲೆ ಆಸ್ತಿಯ ಒಡೆಯ. ಐಪಿಎಲ್‌ಗಾಗಿ ಪಡೆದ ಪಂದ್ಯದ ಶುಲ್ಕದ ಜೊತೆಗೆ, ಅವರು ಇತರ ಹಲವು ರೀತಿಯಲ್ಲಿ ಗಳಿಸುತ್ತಾರೆ.

ಹಾರ್ದಿಕ್ ಪಾಂಡ್ಯ ಆಸ್ತಿ ಮೌಲ್ಯವೆಷ್ಟು?
ಪಾಂಡ್ಯ ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದಾರೆ. ಅವರು ತಂಡದಿಂದ 15 ಕೋಟಿ ರೂಪಾಯಿಗಳನ್ನು ಶುಲ್ಕವಾಗಿ ಪಡೆಯುತ್ತಾರೆ. ಅವರು ಮೊದಲು ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದರು. ಗುಜರಾತ್ ತಂಡ ಕೂಡ ಅಷ್ಟೇ ಮೊತ್ತವನ್ನು ಪಾಂಡ್ಯಗೆ ನೀಡುತ್ತಿತ್ತು. ಇದರೊಂದಿಗೆ ಭಾರತ ಕ್ರಿಕೆಟ್ ತಂಡದಿಂದ ಪಂದ್ಯ ಶುಲ್ಕವನ್ನೂ ಪಡೆಯುತ್ತಾರೆ. ಇದರೊಂದಿಗೆ, ಅವರು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಂದಲೂ ಗಳಿಸುತ್ತಾರೆ.

ಐಪಿಎಲ್ ಟ್ರೋಫಿ ಗೆಲ್ಲಬೇಕಿದ್ದರೆ ವಿರಾಟ್ ಕೊಹ್ಲಿ ಆರ್‌ಸಿಬಿಯನ್ನು ಬಿಡಲಿ: ಕೆವಿನ್ ಪೀಟರ್‌ಸನ್‌ ಅಚ್ಚರಿ ಸಲಹೆ

ವಡೋದರಾ ಮತ್ತು ಮುಂಬೈನಲ್ಲಿ ಕೋಟಿಗಟ್ಟಲೆ ಮೌಲ್ಯದ ಮನೆಗಳಿವೆ.
ಹಾರ್ದಿಕ್ ಪಾಂಡ್ಯ ಮುಂಬೈನಲ್ಲಿ ಅಪಾರ್ಟ್‌ಮೆಂಟ್ ತೆಗೆದುಕೊಂಡಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಅವರು 30 ಕೋಟಿ ರೂ.ಗೆ ಮನೆ ಖರೀದಿಸಿದ್ದರು. ಇದರೊಂದಿಗೆ ಅವರು ವಡೋದರಾದಲ್ಲಿ ವಿಲ್ಲಾ ಹೊಂದಿದ್ದಾರೆ. ಇದರ ಬೆಲೆಯೂ ಕೋಟಿಯಲ್ಲಿದೆ. ಆದರೆ ವಿಚ್ಛೇದನದ ನಂತರ ಪಾಂಡ್ಯ ಸ್ಥಿತಿ ಹದಗೆಡಬಹುದು. ಅಹಮದಾಬಾದ್ ಮಿರರ್ ವರದಿ ಪ್ರಕಾರ, ಹಾರ್ದಿಕ್ ಪಾಂಡ್ಯ 70% ಆಸ್ತಿಯನ್ನು ನತಾಶಾ ಸ್ಟಾಂಕೋವಿಕ್‌ಗೆ ವರ್ಗಾಯಿಸಬೇಕಾಗುತ್ತದೆ. 

ವಿಚ್ಛೇದನಕ್ಕೆ ಹಣ ಸಂಗ್ರಹಿಸಬೇಕಾಗಿದ್ದ ಕಾರಣ ಹಾರ್ದಿಕ್ ಮುಂಬೈ ಇಂಡಿಯನ್ಸ್‌ಗೆ ತೆರಳಿದರು ಎಂದೂ ಹೇಳಲಾಗುತ್ತಿದೆ. ಆದರೆ, ಇದರಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎಂಬುದನ್ನು ಖಚಿತಪಡಿಸಲು ಸಾಧ್ಯವಿಲ್ಲ.

Scroll to load tweet…