ಸಮಿತ್ ದ್ರಾವಿಡ್ ಅಜೇಯ ಶತಕದ ನೆರವಿನಿಂದ ದಕ್ಷಿಣ ವಲಯದ ಅಂಡರ್-14 ಟೂರ್ನಿಯಲ್ಲಿ ಗೋವಾ ಎದುರು ಕರ್ನಾಟಕ 3 ಅಂಕ ಸಂಪಾದಿಸಿದೆ. ಎರಡು ದಿನಗಳ ಪಂದ್ಯ ಡ್ರಾನೊಂದಿಗೆ ಅಂತ್ಯವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ಬೆಂಗಳೂರು(ಜ.21): ಭಾರತದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಪುತ್ರ ಸಮಿತ್‌ ದ್ರಾವಿಡ್‌, ಬಾರಿಸಿದ ಅಜೇಯ ಶತಕದ ನೆರವಿನಿಂದ ಕರ್ನಾಟಕ ಅಂಡರ್‌-14 ತಂಡವು ಗೋವಾ ವಿರುದ್ಧ 3 ಅಂಕ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತ್ತೆ ಮಿಂಚಿದ ರಾಹುಲ್‌ ದ್ರಾವಿಡ್‌ ಪುತ್ರ ಸಮಿತ್‌

ಇಲ್ಲಿನ ಆಲೂರು ಮೈದಾನದಲ್ಲಿ ಸೋಮವಾರ ಮುಕ್ತಾಯವಾದ ದಕ್ಷಿಣ ವಲಯ ಕ್ರಿಕೆಟ್‌ ಟೂರ್ನಿಯ ಗೋವಾ ವಿರುದ್ಧದ ಪಂದ್ಯದಲ್ಲಿ, ಸಮಿತ್‌ 180 ಎಸೆತಗಳನ್ನು ಎದುರಿಸಿ 15 ಬೌಂಡರಿ, 4 ಸಿಕ್ಸರ್‌ ಸಹಿತ 109 ರನ್‌ ಗಳಿಸಿ ಅಜೇಯರಾಗಿ ಉಳಿದರು. ಮೊದಲ ದಿನದಾಟದ ಅಂತ್ಯಕ್ಕೆ ಸಮಿತ್ ಅಜೇಯ 86 ರನ್ ಬಾರಿಸಿದ್ದರು. ಕರ್ನಾಟಕ ಮೊದಲ ಇನ್ನಿಂಗ್ಸಲ್ಲಿ 3 ವಿಕೆಟ್‌ಗೆ 245 ರನ್‌ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

NCA ಸುಧಾರಣೆಗೆ ದ್ರಾವಿಡ್‌-ಗಂಗೂಲಿ ಸೂತ್ರ; ಬೆಂಗಳೂರಿನಲ್ಲೇ ಹೊಸ ಅಕಾಡೆಮಿ!

ಗೋವಾ ಮೊದಲ ಇನ್ನಿಂಗ್ಸಲ್ಲಿ 84ಕ್ಕೆ ಆಲೌಟ್‌ ಆಗಿತ್ತು. 2ನೇ ಇನ್ನಿಂಗ್ಸಲ್ಲಿ 5 ವಿಕೆಟ್‌ಗೆ 117 ರನ್‌ ಗಳಿಸಿತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ ತಂಡವು 3 ಅಂಕ ಗಳಿಸುವಲ್ಲಿ ಯಶಸ್ವಿಯಾಗಿತ್ತು.

ಸೋಮವಾರ ಮುಕ್ತಾಯವಾದ ದಕ್ಷಿಣ ವಲಯ ಕ್ರಿಕೆಟ್‌ ಟೂರ್ನಿಯಲ್ಲಿ ಹೈದರಾಬಾದ್ ಹಾಗೂ ಪುದುಚೆರಿ ತಂಡಗಳು ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ 3 ಅಂಕ ಕಲೆಹಾಕುವಲ್ಲಿ ಯಶಸ್ವಿಯಾದವು. ಹೈದರಾಬಾದ್ ತಂಡವು ಕೇರಳ ಎದುರು ಡ್ರಾ ಸಾಧಿಸಿದರೆ, ಪುದುಚೆರಿ ತಂಡವು ತಮಿಳುನಾಡಿನ ಎದುರು ಡ್ರಾಗೆ ತೃಪ್ತಿಪಟ್ಟುಕೊಂಡಿತು.