ಒಳ್ಳೆಯ ಕೆಲಸಕ್ಕೆ ಅರ್ಧ ಗಡ್ಡ-ಮೀಸೆ ತೆಗೆದ ಜ್ಯಾಕ್ ಕಾಲಿಸ್..!
ಒಂದು ಒಳ್ಳೆಯ ಉದ್ದೇಶಕ್ಕಾಗಿ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಕ್ ಕಾಲಿಸ್ ಅರ್ಧ ಗಡ್ಡ-ಮೀಸೆ ಬೋಳಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ನ.29]: ‘ಘೇಂಡಾಮೃಗ ಉಳಿಸಿ ಚಾಲೆಂಜ್’ ಸ್ವೀಕರಿಸಿದ ದಕ್ಷಿಣ ಆಫ್ರಿಕಾ ಆಲ್ರೌಂಡರ್ ಜಾಕ್ ಕಾಲಿಸ್ ತಮ್ಮ ಮೀಸೆ ಹಾಗೂ ಗಡ್ಡವನ್ನು ಅರ್ಧ ಬೋಳಿಸಿದ್ದು, ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಅಪ್ಲೋಡ್ ಮಾಡುವ ಮೂಲಕ 23 ಲಕ್ಷ ರು. ಸಹಾಯ ನಿಧಿ ಸಂಗ್ರಹಿಸಿದರು.
ಜ್ಯಾಕ್ ಕಾಲಿಸ್’ಗೆ ಶುಭಕೋರಲು ಹೋಗಿ ಎಡವಟ್ಟು ಮಾಡಿಕೊಂಡ KP..!
ಘೇಂಡಾಮೃಗ ಉಳಿಸಬೇಕೆಂದು ಜನಜಾಗೃತಿ ಮೂಡಿಸುವುದಕ್ಕಾಗಿ ದಕ್ಷಿಣ ಆಫ್ರಿಕಾದಲ್ಲಿ ಈ ಅಭಿಯಾನ ಆರಂಭಿಸಲಾಗಿದೆ. ಘೇಂಡಾಮೃಗ ಉಳಿಸಲು ಹಾಗೂ ಗಾಲ್ಫ್ ಅಭಿವೃದ್ಧಿಗಾಗಿ ಅಭಿಯಾನದಲ್ಲಿ ಭಾಗವಹಿಸಿದ್ದಾಗಿ ಕಾಲಿಸ್ ಟ್ವೀಟ್ ಮಾಡಿದ್ದರು. ಈ ಫೋಟೋ ಹಾಕುವ ಮೂಲಕ ಇನ್ಸ್ಟಾಗ್ರಾಮ್ನಲ್ಲಿ 23,30,794 ರುಪಾಯಿ ಸಹಾಯ ನಿಧಿ ಸಂಗ್ರಹಿಸಿದ್ದಾಗಿ ತಿಳಿಸಿದ್ದಾರೆ.
KKR ತಂಡಕ್ಕೆ ಕೋಚ್ ಜಾಕ್ ಕಾಲಿಸ್ ಗುಡ್ ಬೈ!
ಆಧುನಿಕ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆಲ್ರೌಂಡರ್’ಗಳಲ್ಲಿ ಒಬ್ಬರೆನಿಸಿರುವ ಜಾಕ್ ಕಾಲಿಸ್ ದಕ್ಷಿಣ ಆಫ್ರಿಕಾ ಪರ 166 ಟೆಸ್ಟ್, 328 ಏಕದಿನ ಹಾಗೂ 25 ಟಿ20 ಪಂದ್ಯಗಳನ್ನಾಡಿದ್ದಾರೆ. 44 ವರ್ಷದ ಮಾಜಿ ಕ್ರಿಕೆಟಿಗ ಈ ನಡೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.