ಬೆಂಗಳೂರು[ಅ.16]: ದಕ್ಷಿಣ ಆಫ್ರಿಕಾ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಆಲ್ರೌಂಡರ್’ಗಳಲ್ಲಿ ಒಬ್ಬರು ಎನಿಸಿರುವ ಜ್ಯಾಕ್ ಕಾಲಿಸ್’ಗಿಂದು 44ನೇ ಹುಟ್ಟುಹಬ್ಬದ ಸಂಭ್ರಮ. ಕಾಲಿಸ್’ಗೆ ಜಗತ್ತಿನಾದ್ಯಂತ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿವೆ. ಇದೇ ವೇಳೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್’ಸನ್ ಶುಭಕೋರಿದ್ದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಟ್ರೋಲಿಗನ ಬಾಯಿ ಮುಚ್ಚಿಸಿದ ಮಿಥಾಲಿ ರಾಜ್..!

ಡಿಸೆಂಬರ್ 1995ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಜ್ಯಾಕ್ ಕಾಲಿಸ್ ಆ ಬಳಿಕ ಹಿಂತಿರುಗಿ ನೋಡಲೇಯಿಲ್ಲ. ಇದಾದ ಬಳಿಕ ದಕ್ಷಿಣ ಆಫ್ರಿಕಾ ಪರ 166 ಟೆಸ್ಟ್ ಹಾಗೂ 328 ಏಕದಿನ ಪಂದ್ಯಗಳನ್ನಾಡಿ ಕ್ರಮವಾಗಿ 13,289 ಹಾಗೂ 11,579 ರನ್ ಬಾರಿಸಿದ್ದಾರೆ. ಇದರಲ್ಲಿ 62 ಶತಕ ಹಾಗೂ 144 ಅರ್ಧಶತಕಗಳೂ ಸೇರಿವೆ. ಇದು ಕಾಲಿಸ್ ಬ್ಯಾಟಿಂಗ್ ಪರಾಕ್ರಮವಾದರೆ, ಇನ್ನು ಬೌಲಿಂಗ್’ನಲ್ಲೂ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್’ನಲ್ಲಿ ಕ್ರಮವಾಗಿ 292 ಹಾಗೂ 273 ವಿಕೆಟ್ ಪಡೆದು ಮಿಂಚಿದ್ದಾರೆ. ಇನ್ನು 25 ಟಿ20 ಪಂದ್ಯಗಳನ್ನಾಡಿ 5 ಅರ್ಧಶತಕಗಳನ್ನು ಚಚ್ಚಿದ್ದಾರೆ. 2014ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ್ದರು. ಇನ್ನು ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು. 

ಕೆವಿನ್ ಪೀಟರ್ ಸನ್ ಟ್ವೀಟ್ ಎಡವಟ್ಟೇನು..?

ದಿಗ್ಗಜ ಕ್ರಿಕೆಟಿಗ ಜ್ಯಾಕ್ ಕಾಲಿಸ್ 53ನೇ ಹುಟ್ಟು ಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದರು. 

 

44ನೇ ಹುಟ್ಟುಹಬ್ಬಕ್ಕೆ 53ನೇ ವರ್ಷದ ಹುಟ್ಟುಹಬ್ಬವೆಂದು ಶುಭಕೋರಿದ್ದಕ್ಕೆ ಅಭಿಮಾನಿಗಳು ಗರಂ ಆಗಿದ್ದಾರೆ. ಕೆಲವರು ಪೀಟರ್ ಸನ್ ಕುಡಿದಿದ್ದಾರೆ ಎಂದು ಟ್ವೀಟ್ ಮಾಡಿದರೆ, ಮತ್ತೆ ಕೆಲವರು ಡಾನ್ ಬ್ರಾಡ್ ಮನ್’ಗಿಂತ ಗ್ರೇಟಾ ಎಂದು ಪ್ರಶ್ನಿಸಿದ್ದಾರೆ.