ಕೇಪ್ ಟೌನ್[ಡಿ.16]: ಡಿಸೆಂಬರ್ 26ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ಫಾಫ್ ಡುಪ್ಲೆಸಿಸ್ ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಕೆಳ ಕ್ರಮಾಂಕದಲ್ಲಿರುವ ಹರಿಣಗಳ ಪಡೆ, ತವರಿನಲ್ಲಿ ಆಂಗ್ಲರ ಬೇಟೆಯಾಡಲು ಬಲಿಷ್ಠ ತಂಡದೊಂದಿಗೆ ಸಜ್ಜಾಗಿದೆ.

ಸೋಲಿಗೆ ಕಾರಣ ಹೇಳಿದ ಸೌತ್ ಆಫ್ರಿಕಾ ನಾಯಕ, ಅಭಿಮಾನಿಗಳಿಂದ ತಿರುಗೇಟು!

ಭಾರತ ವಿರುದ್ಧ ದಯನೀಯ ಸರಣಿ ಸೋಲು ಕಂಡಿದ್ದ ಹರಿಣಗಳ ಪಡೆ ಇದೀಗ, ಇಂಗ್ಲೆಂಡ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಭಾರತ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ತಂಡವು 3-0 ಅಂತರದ ಹೀನಾಯ ಟೆಸ್ಟ್ ಸೋಲು ಕಂಡಿತ್ತು. ತವರಿನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಡೇನ್ ಪೀಟರ್’ಸನ್, ಪೀಟರ್ ಮಲಾನ್, ರಸ್ಸಿ ವ್ಯಾನ್ ಡರ್ ಡ್ಯುಸೇನ್, ಬ್ಯುರಾನ್ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಸ್ ಹಾಗೂ ರೌಡಿ ಸೆಕೆಂಡ್ ಇದೇ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಹರಿಣಗಳ ಶಿಕಾರಿ; ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

ಆಂಗ್ಲರ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೆ ಮುನ್ನವೇ ಲುಂಗಿ ಎಂಗಿಡಿ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಹರಿಣಗಳ ಪಡೆ ಬ್ಯಾಟಿಂಗ್ ವಿಭಾಗದಲ್ಲಿ ಫಾಫ್ ಡುಪ್ಲೆಸಿಸ್, ತೆಂಬಾ ಬವುಮಾ, ಕ್ವಿಂಟನ್ ಡಿಕಾಕ್ ಹಾಗೂ ಡೀನ್ ಎಲ್ಗಾರ್ ಅವರನ್ನು ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್ ವಿಭಾಗವನ್ನು ಕಗಿಸೋ ರಬಾಡ ಮುನ್ನಡೆಸಲಿದ್ದು, ಡೇನ್ ಪೀಟರ್’ಸನ್ ಹಾಗೂ ಕೇಶವ್ ಮಹರಾಜ್ ಸಾಥ್ ನೀಡಲಿದ್ದಾರೆ. ಸೆಂಚುರಿಯನ್’ನ ಸೂಪರ್ ಸ್ಪೋರ್ಟ್ ಪಾರ್ಕ್ ಮೊದಲ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿದೆ.  

ದಕ್ಷಿಣ ಆಫ್ರಿಕಾ ತಂಡ ಹೀಗಿದೆ:
ಫಾಫ್ ಡುಪ್ಲೆಸಿಸ್, ತೆಂಬಾ ಬವುಮಾ, ಕ್ವಿಂಟನ್ ಡಿಕಾಕ್, ಡೀನ್ ಎಲ್ಗಾರ್, ಬ್ಯುರಾನ್ ಹೆಂಡ್ರಿಕ್ಸ್, ಕೇಶವ್ ಮಹರಾಜ್, ಪೀಟರ್ ಮಲಾನ್, ಏಯ್ಡನ್ ಮಾರ್ಕ್’ರಮ್, ಜುಬೈರ್ ಹಂಮ್ಜಾ, ಅನ್ರಿಚ್ ನೋರ್ಜೆ, ಡೇನ್ ಪೀಟರ್’ಸನ್, ಫೆಲುಕ್ವಾಯೋ, ವೆರ್ನಾನ್ ಫಿಲಾಂಡರ್, ಡ್ವೈನ್ ಪ್ರಿಟೋರಿಯಸ್, ಕಗಿಸೋ ರಬಾಡ, ರೌಡಿ ಸೆಕೆಂಡ್, ರಸ್ಸಿ ವ್ಯಾನ್ ಡರ್ ಡ್ಯುಸೇನ್.