ಜೋಹಾನ್ಸ್‌ಬರ್ಗ್(ಅ.27): ಭಾರತ ವಿರುದ್ದದ ಟೆಸ್ಟ್ ಸರಣಿ ಕೈಚೆಲ್ಲಿದ ಸೌತ್ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ವಿರುದ್ದ ಟೀಕೆಗಳು ಕೇಳಿ ಬರುತ್ತಿದೆ. ನಾಯಕತ್ವದ ಬದಲಾವಣೆಗೂ ಒತ್ತಡ ಬೀಳುತ್ತಿದೆ. ಇದರ ಬೆನ್ನಲ್ಲೇ ಫಾಫ್ ಡುಪ್ಲೆಸಿಸ್, ಭಾರತ ವಿರುದ್ದದ ಸೋಲಿಗೆ ಟಾಸ್ ಕಾರಣ, ಟೆಸ್ಟ್ ಪಂದ್ಯದಲ್ಲಿ ಟಾಸ್ ಇಲ್ಲದಿದ್ದರೆ ನಾವು ಗೆಲ್ಲುತ್ತಿದ್ದೇವು ಎಂದಿದ್ದಾರೆ. ಇದಕ್ಕೆ ಕ್ರಿಕೆಟ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಹರಿಣಗಳ ಶಿಕಾರಿ: ಟೀಂ ಇಂಡಿಯಾಗೆ ಜೈ ಹೋ ಎಂದ ಕ್ರಿಕೆಟ್ ಲವರ್ಸ್!

ಭಾರತ ವಿರುದ್ದದ ಟೆಸ್ಟ್ ಸರಣಿಯನ್ನು 0-3 ಅಂತರಿಂದ ಸೋಲು ಕಂಡಿದೆ. ಸೋಲಿನ ಕುರಿತು ಮಾತನಾಡಿದ ಡುಪ್ಲೆಸಿಸ್, ಭಾರತ ವಿರುದ್ದವೂ ಟಾಸ್ ಗೆಲ್ಲಲು ವಿಫಲನಾದೆ. ಪ್ರವಾಸಿ ತಂಡಕ್ಕೆ ಟಾಸ್ ಇಲ್ಲದಿದ್ದರೆ, ದಿಟ್ಟ ಹೋರಾಟ ನೀಡಲು ಸಾಧ್ಯ ಎಂದಿದ್ದಾರೆ. ಸೋಲನ್ನು ಸ್ವೀಕರಿಸಿದ ನಾಯಕನಿಂದ ಮಾತ್ರ ಇಂತಹ ಹೇಳಿಕೆ ಬರಲು ಸಾಧ್ಯ. ಡುಪ್ಲೆಸಿಸ್‌ಗೆ ತಿರುಗೇಟು ನೀಡಲು ಮನಸ್ಸಾಗುತ್ತಿದೆ. ಆದರೆ ನಾನು ಸಿಎಸ್‌ಕೆ ಅಭಿಮಾನಿ ಹೀಗಾಗಿ ಸುಮ್ಮನಿದ್ದೇನೆ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.