ಮುಂಬೈ(ಅ.23): ಭಾರ​ತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯ​ಕ​ರಲ್ಲಿ ಒಬ್ಬ​ರಾದ ಸೌರವ್‌ ಗಂಗೂಲಿ, ಬುಧ​ವಾರ ಭಾರ​ತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿ​ಸಿ​ಸಿ​ಐ​)​ನ 39ನೇ ಅಧ್ಯಕ್ಷರಾಗಿ ಅಧಿ​ಕಾರಿ ಸ್ವೀಕ​ರಿ​ಸ​ಲಿ​ದ್ದಾರೆ. ಬುಧ​ವಾರ ಇಲ್ಲಿ ವಾರ್ಷಿಕ ಸಾಮಾನ್ಯ ಸಭೆ ನಡೆ​ಯ​ಲಿದ್ದು, ವಿನೋದ್‌ ರಾಯ್‌ ನೇತೃ​ತ್ವ​ದ ಸುಪ್ರೀಂ ಕೋರ್ಟ್‌ ನೇಮಿತ ಆಡ​ಳಿತ 33 ತಿಂಗಳ ಬಳಿಕ ಅಧಿ​ಕಾರ ಹಸ್ತಾಂತ​ರಿ​ಸ​ಲಿದೆ. 

"

ಇದನ್ನೂ ಓದಿ: BJP ಸೇರ್ತಾರ ಗಂಗೂಲಿ? ಅಮಿತ್ ಶಾ ಭೇಟಿಯಾದ ನೂತನ BCCI ಅಧ್ಯಕ್ಷ!

ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಅವಿ​ರೋಧ ಆಯ್ಕೆಯಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪುತ್ರ ಜಯ್‌ ಶಾ ಕಾರ್ಯ​ದರ್ಶಿಯಾಗಿ ಆಯ್ಕೆಯಾಗಿ​ದ್ದಾರೆ. ಉತ್ತ​ರಾ​ಖಂಡದ ಮಾಹಿಮ್‌ ವರ್ಮಾ ಉಪಾ​ಧ್ಯ​ಕ್ಷ, ಬಿಸಿ​ಸಿಐ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಅನು​ರಾಗ್‌ ಠಾಕೂರ್‌ರ ಸಹೋ​ದರ ಅರುಣ್‌ ಧುಮಾಲ್‌ ಖಜಾಂಚಿ, ಕೇರ​ಳದ ಜಯೇಶ್‌ ಜಾಜ್‌ರ್‍ ಜಂಟಿ ಕಾರ್ಯ​ದರ್ಶಿಯಾಗಿ ಕಾರ್ಯ​ನಿ​ರ್ವ​ಹಿ​ಸ​ಲಿ​ದ್ದಾರೆ. ಗಂಗೂಲಿ ಕೇವಲ 9 ತಿಂಗಳ ಕಾಲ ಅಧ್ಯಕ್ಷರಾಗಿರಲಿದ್ದಾರೆ.

ಇದನ್ನೂ ಓದಿ: Bigg boss ಗಂಗೂಲಿಗೆ CM ಮಮತಾ ಬ್ಯಾನರ್ಜಿ ಅಭಿ​ನಂದನೆ!

ಕರ್ನಾಟಕ ಕ್ರಿಕೆಟ್ ಸಂಸ್ಥೆ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಬಿಸಿಸಿಐ ಅಧ್ಯಕ್ಷ ರೇಸ್‌ನಿಂದ ಹಿಂದೆ ಸರಿದ ಕಾರಣ, ಸೌರವ್ ಗಂಗೂಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ 2ನೇ ಬಾರಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಗಂಗೂಲಿ, ಇಂದು ಅದೀಕೃತವಾಗಿ ಬಿಸಿಸಿಐ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.