ಮುಂಬೈ(ಅ.16): ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರ​ಲಿ​ರುವ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯ​ಕ ಸೌರವ್‌ ಗಂಗೂಲಿಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ಸಚಿನ್‌ ತೆಂಡುಲ್ಕರ್‌, ವೀರೇಂದ್ರ ಸೆಹ್ವಾಗ್‌, ವಿವಿಎಸ್‌ ಲಕ್ಷ್ಮಣ್‌, ಮೊಹಮ್ಮದ್‌ ಕೈಫ್‌, ಬ್ರಾಡ್‌ ಹಾಡ್ಜ್‌, ಮೊಹಮ್ಮದ್‌ ಶಮಿ ಸೇರಿದಂತೆ ಅನೇಕರು ಗಂಗೂಲಿಯನ್ನು ಅಭಿ​ನಂದಿ​ಸಿ​ದ್ದಾರೆ. ಇನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮನತಾ ಬ್ಯಾನರ್ಜಿ ಅಭಿನಂದನೆ ಸಲ್ಲಿಸಿದ್ದಾರೆ. ಗಂಗೂಲಿ ಅಧ್ಯಕ್ಷರಾಗೋ ಮೂಲಕ ಬಂಗಾಳವೇ ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ. 

 

ಇದನ್ನೂ ಓದಿ: BCCIಗೆ ಗಂಗೂಲಿ ಬಿಗ್ ಬಾಸ್; ವಿಶೇಷ ರೀತಿಯಲ್ಲಿ ಶುಭಕೋರಿದ ಸೆಹ್ವಾಗ್!

‘ತಡವಾದರೂ ಭಾರತೀಯ ಕ್ರಿಕೆಟ್‌ಗೆ ಒಳ್ಳೆಯ ಭವಿಷ್ಯವಿದೆ. ಕ್ರಿಕೆಟ್‌ಗೆ ನಿಮ್ಮ ಕೊಡುಗೆ ಮುಂದುವರಿಯಲಿ’ ಎಂದು ಸೆಹ್ವಾಗ್‌ ಟ್ವೀಟರ್‌ನಲ್ಲಿ ಹಾರೈ​ಸಿದ್ದಾರೆ. ‘ನಿಮ್ಮ ನೇತೃತ್ವದಲ್ಲಿ ಕ್ರಿಕೆಟ್‌ ಅಭಿವೃದ್ಧಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ’ ಎಂದು ಲಕ್ಷ್ಮಣ್‌ ಟ್ವೀಟ್‌ ಮಾಡಿ​ದ್ದಾರೆ. ‘ಬಿಸಿಸಿಐ ಅಧ್ಯಕ್ಷರಾಗುವ ನಿಮಗೆ ಅಭಿನಂದನೆಗಳು, ಈ ಹಿಂದಿನಂತೆಯೇ ನಿಮ್ಮ ಕೊಡುಗೆ ನೀಡುವಿರೆಂಬ ನಂಬಿಕೆ ನನಗಿದೆ’ ಎಂದು ತೆಂಡುಲ್ಕರ್‌ ಟ್ವೀಟಿ​ಸಿದ್ದಾರೆ.

ಇದನ್ನೂ ಓದಿ: ದಾದಾಗೆ BCCI ಅಧ್ಯಕ್ಷ ಗಾದಿ: ಗಂಗೂಲಿ ಮುಂದಿ​ರುವ ಸವಾ​ಲು​ಗಳೇ​ನು?

ರಾಜ​ಕೀಯ ನಾಯ​ಕರು, ಸಾವಿ​ರಾರು ಕ್ರಿಕೆಟ್‌ ಅಭಿ​ಮಾ​ನಿ​ಗಳು ಸಹ ಗಂಗೂಲಿ ಬಿಸಿ​ಸಿಐ ಅಧ್ಯಕ್ಷರಾಗು​ತ್ತಿ​ರು​ವು​ದಕ್ಕೆ ಸಂತಸ ವ್ಯಕ್ತ​ಪ​ಡಿ​ಸಿದ್ದಾರೆ.