ಬಿಸಿಸಿಐ ವಾರ್ಷಿಕ ಸಭೆಯ ಡೇಟ್ ಫಿಕ್ಸ್..!
ಸೌರವ್ ಗಂಗೂಲಿ ನೇತೃತ್ವದಲ್ಲಿ ಬಿಸಿಸಿಐ ವಾರ್ಷಿಕ ಸಭೆಯ ದಿನಾಂಕ ಅಂತಿಮವಾಗಿದೆ. ಈ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ನವದೆಹಲಿ[ನ.11]: ಡಿ.1ರಂದು ಮುಂಬೈನಲ್ಲಿ ಬೆಳಗ್ಗೆ 11 ಗಂಟೆಗೆ ಬಿಸಿಸಿಐ 88ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ನಡೆಯಲಿದೆ. ಸಂವಿಧಾನದಲ್ಲಿ 12 ತಿದ್ದುಪಡಿಗಳು, ಸಾರ್ವಜನಿಕ ತನಿಖಾಧಿಕಾರಿ ಹಾಗೂ ನೈತಿಕ ಅಧಿಕಾರಿ ಹುದ್ದೆಗಳಿಗೆ ಹೊಸ ನೇಮಕಾತಿ ಕುರಿತು ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಯಿದೆ.
3 ಹೊಸ ನಗರಗಳಲ್ಲಿ IPL ಪಂದ್ಯ ಆಯೋಜನೆ?
ನೂತನ ಅಧ್ಯಕ್ಷ ಸೌರವ್ ಗಂಗೂಲಿ ಬಿಸಿಸಿಐ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಹಗಲು-ರಾತ್ರಿ ಟೆಸ್ಟ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ಗಂಗೂಲಿ ಅಧಿಕಾರಾವಧಿ ಕೇವಲ 9 ತಿಂಗಳು. ಆ ಬಳಿಕ ಗಂಗೂಲಿ 3 ವರ್ಷಗಳ ಕಾಲ ಯಾವುದೇ ಆಡಳಿತ ಹುದ್ದೆಗಳನ್ನು ಅಲಂಕರಿಸುವಂತಿಲ್ಲ. ದಾದಾಗೆ ತೊಂದರೆ ಆಗುವ ಕೂಲಿಂಗ್ ಆಫ್ ನಿಯಮವನ್ನೇ ತಿದ್ದುಪಡಿ ಮಾಡುವ ನಿರೀಕ್ಷೆಯಿದೆ.
ಸಚಿನ್ ದಾಖಲೆ ಮುರಿದ 15 ವರ್ಷದ ಶಫಾಲಿ
ಈ ಮೊದಲು ಬಿಸಿಸಿಐ ಸಭೆ ನವೆಂಬರ್ ತಿಂಗಳಂತ್ಯದಲ್ಲಿ ನಡೆಯಲಿದೆ ಎನ್ನಲಾಗಿತ್ತು. ಸೌರವ್ ಗಂಗೂಲಿ ಸ್ವತಃ ಈ ಹಿಂದೆ ಮಾತನಾಡಿದ್ದರು. ನವೆಂಬರ್ ತಿಂಗಳ ಮೂರನೇ ವಾರ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ, ಆದರೆ ದಿನಾಂಕ ಇನ್ನೂ ತೀರ್ಮಾನವಾಗಿಲ್ಲ ಎಂದಿದ್ದರು.