Asianet Suvarna News Asianet Suvarna News

ಅಜಿಂಕ್ಯ ರಹಾನೆಗೆ ಉಪನಾಯಕತ್ವ ನೀಡಿದ್ದಕ್ಕೆ ಸೌರವ್ ಗಂಗೂಲಿ ವ್ಯಂಗ್ಯ..!

* ವೆಸ್ಟ್ ಇಂಡೀಸ್‌ ವಿರುದ್ದದ ಸರಣಿಗೆ ಭಾರತ ಕ್ರಿಕೆಟ್ ತಂಡ
* ರಹಾನೆಗೆ ಉಪನಾಯಕ ಕಟ್ಟಿದ್ದಕ್ಕೆ ದಾದಾ ವ್ಯಂಗ್ಯ
* ಆಯ್ಕೆ ಸಮಿತಿಗೆ ಎಚ್ಚರಿಕೆ ರವಾನಿಸಿದ ಸೌರವ್ ಗಂಗೂಲಿ

Sourav Ganguly baffled by BCCI unexpected Ajinkya Rahane call and warns selectors kvn
Author
First Published Jun 30, 2023, 11:13 AM IST

ನವದೆಹಲಿ(ಜೂ.30): ಬಿಸಿಸಿಐ ಆಯ್ಕೆ ಸಮಿತಿಯ ಕಾರ್ಯವೈಖರಿ ಬಗ್ಗೆ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ವ್ಯಂಗ್ಯವಾಡಿದ್ದಾರೆ. ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ವಿಂಡೀಸ್‌ ಪ್ರವಾಸಕ್ಕೆ ಅಜಿಂಕ್ಯ ರಹಾನೆಯನ್ನು ಭಾರತ ತಂಡದ ಉಪನಾಯಕನನ್ನಾಗಿ ನೇಮಿಸಿದ್ದನ್ನು ಗಂಗೂಲಿ ಪ್ರಶ್ನಿಸಿದ್ದಾರೆ.

‘18 ತಿಂಗಳು ತಂಡದಿಂದ ಹೊರಗಿದ್ದ ಅಜಿಂಕ್ಯ ರಹಾನೆಯನ್ನು ಕೇವಲ ಒಂದು ಪಂದ್ಯ ಆಡಿದ ಕೂಡಲೇ ಮತ್ತೆ ಉಪನಾಯಕನನ್ನಾಗಿ ಆಯ್ಕೆ ಮಾಡಿರುವುದನ್ನು ನೋಡಿ ನನಗೆ ದಿಗ್ಭ್ರಮೆ ಉಂಟಾಯಿತು. ಉಪನಾಯಕನ ಸ್ಥಾನಕ್ಕೆ ರವೀಂದ್ರ ಜಡೇಜಾ ಸೂಕ್ತ ಅಭ್ಯರ್ಥಿ. ಹಲವು ವರ್ಷಗಳಿಂದ ತಂಡದಲ್ಲಿದ್ದಾರೆ. ಆಡುವ ಹನ್ನೊಂದರ ಬಳಗದ ಕಾಯಂ ಸದಸ್ಯ. ಅವರಿಗೆ ಉಪನಾಯಕತ್ವ ಕೊಡಬಹುದಿತ್ತು’ ಎಂದು ಗಂಗೂಲಿ ಅಭಿಪ್ರಾಯಿಸಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದ ಅಜಿಂಕ್ಯ ರಹಾನೆ ಆಸ್ಟ್ರೇಲಿಯಾ ಎದುರು ಆಕರ್ಷಕ ಅರ್ಧಶತಕ ಸಿಡಿಸಿದ್ದರು. ಇದರ ಬೆನ್ನಲ್ಲೇ ವಿಂಡೀಸ್ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಿದಾಗ ರಹಾನೆಗೆ ಟೆಸ್ಟ್ ತಂಡದ ಉಪನಾಯಕ ಪಟ್ಟ ಕಟ್ಟಲಾಗಿದೆ. ಇನ್ನೊಂದೆಡೆ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ವಿಫಲವಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅವರನ್ನು ವಿಂಡೀಸ್ ಪ್ರವಾಸದಿಂದ ಕೈಬಿಡಲಾಗಿದೆ. ಇದರ ಬೆನ್ನಲ್ಲೆ ಸುನಿಲ್ ಗವಾಸ್ಕರ್, ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ಮುಚ್ಚಿಡಲು ಚೇತೇಶ್ವರ್ ಪೂಜಾರ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದರು. 

ವೆಸ್ಟ್‌ ಇಂಡೀಸ್ ಪ್ರವಾಸಕ್ಕೆ ಭಾರತ ಕ್ರಿಕೆಟ್‌ ತಂಡ ಪ್ರಕಟ; ಇಬ್ಬರು ತಾರಾ ಆಟಗಾರರಿಗೆ ರೆಸ್ಟ್‌

ಇದೇ ವೇಳೆ ಹಿರಿಯ ಆಟಗಾರರ ನಿರ್ವಹಣೆಯಲ್ಲೂ ಆಯ್ಕೆ ಸಮಿತಿ ಎಡವುತ್ತಿದೆ ಎಂದಿರುವ ಗಂಗೂಲಿ, ‘ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆಯಂತಹ ಆಟಗಾರರನ್ನು ಒಮ್ಮೆ ಆಯ್ಕೆ ಮಾಡುವುದು ಮತ್ತೊಮ್ಮೆ ಕೈಬಿಡುವುದು ಮಾಡಬಾರದು. ಅವರ ಅವಶ್ಯಕತೆ ಇನ್ಮುಂದೆ ತಂಡಕ್ಕಿಲ್ಲ ಎಂದಾದರೆ ಅವರಿಗೆ ಸ್ಪಷ್ಟ ಮಾಹಿತಿ ನೀಡಬೇಕು’ ಎಂದಿದ್ದಾರೆ.

ದೇಸಿ ಕ್ರಿಕೆಟ್‌ನಲ್ಲಿ ಕಳೆದ 2-3 ವರ್ಷದಿಂದ ಉತ್ತಮ ಪ್ರದರ್ಶನ ತೋರುತ್ತಿರುವ ಸರ್ಫರಾಜ್ ಖಾನ್, ಅಭಿಮನ್ಯು ಈಶ್ವರನ್‌ಗೆ ವಿಂಡೀಸ್‌ ವಿರುದ್ಧ ಸರಣಿಗೆ ಆಯ್ಕೆ ಮಾಡಿದ ತಂಡದಲ್ಲಿ ಸ್ಥಾನ ನೀಡಿದ್ದಕ್ಕೂ ಗಂಗೂಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ODI World Cup 2023: ಜುಲೈ 01ರಿಂದ ಏಕದಿನ ವಿಶ್ವಕಪ್ ಟಿಕೆಟ್ ಮಾರಾಟ?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರುವ ಎರಡು ಪಂದ್ಯಗಳ ಟೆಸ್ಟ್‌ ಸರ​ಣಿಯ ಮೊದಲ ಪಂದ್ಯ ಜುಲೈ 12ರಿಂದ ಡೊಮಿ​ನಿ​ಕಾ​ದಲ್ಲಿ ಆರಂಭ​ವಾ​ಗ​ಲಿ​ದ್ದು, ಜುಲೈ 20ರಿಂದ 2ನೇ ಟೆಸ್ಟ್‌ ಪಂದ್ಯ ಟ್ರಿನಿ​ಡಾ​ಡ್‌​ನ​ಲ್ಲಿ ನಡೆ​ಯ​ಲಿದೆ. ಬಳಿಕ ಜುಲೈ 27, 29ರಂದು ಮೊದ​ಲೆ​ರಡು ಏಕ​ದಿನಕ್ಕೆ ಬಾರ್ಬ​ಡಾ​ಸ್‌​, ಆಗಸ್ಟ್‌ 1ರಂದು 3ನೇ ಏಕ​ದಿ​ನಕ್ಕೆ ಟ್ರಿನಿ​ಡಾಡ್‌ ಆತಿಥ್ಯ ವಹಿ​ಸ​ಲಿದೆ. 

ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ಶುಭ್‌ಮನ್‌ ಗಿಲ್‌, ಋತುರಾಜ್ ಗಾಯಕ್ವಾಡ್‌, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್‌, ಅಜಿಂಕ್ಯ ರಹಾನೆ(ಉಪನಾಯಕ), ಕೆ ಎಸ್ ಭರತ್(ವಿಕೆಟ್ ಕೀಪರ್), ಇಶಾನ್‌ ಕಿಶನ್‌(ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಯದೇವ್ ಉನಾದ್ಕತ್, ನವದೀಪ್ ಸೈನಿ.

ಏಷ್ಯನ್‌ ಗೇಮ್ಸ್‌: ಭಾರತ ತಂಡಕ್ಕೆ ಧವನ್‌ ನಾಯಕ?

ನವದೆಹಲಿ: ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲಿ ತನ್ನ ಕ್ರಿಕೆಟ್‌ ತಂಡಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಬಿಸಿಸಿಐ, ಪುರುಷರ ವಿಭಾಗದಲ್ಲಿ ಸ್ಪರ್ಧೆಗೆ ದ್ವಿತೀಯ ದರ್ಜೆ ತಂಡವನ್ನು ಕಳುಹಿಸುವುದು ಬಹುತೇಕ ಖಚಿತವಾಗಿದೆ. ಏಕದಿನ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗದ ಆಟಗಾರರನ್ನು ಸೇರಿಸಿ ಒಂದು ತಂಡ ರಚಿಸಲು ಬಿಸಿಸಿಐ ಯೋಜಿಸಿದ್ದು, ಆ ತಂಡಕ್ಕೆ ಶಿಖರ್‌ ಧವನ್‌ ನಾಯಕರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಟವು ಸೆ.23ರಿಂದ ಅ.8ರ ವರೆಗೂ ಚೀನಾದ ಹಾಂಗ್ಝೂನಲ್ಲಿ ನಡೆಯಲಿದೆ. ಏಕದಿನ ವಿಶ್ವಕಪ್‌ ಅ.5ರಿಂದ ಆರಂಭಗೊಳ್ಳಲಿದೆ.

Follow Us:
Download App:
  • android
  • ios