Asianet Suvarna News Asianet Suvarna News

ODI World Cup 2023: ಜುಲೈ 01ರಿಂದ ಏಕದಿನ ವಿಶ್ವಕಪ್ ಟಿಕೆಟ್ ಮಾರಾಟ?

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭರದ ಸಿದ್ದತೆ
ಅಕ್ಟೋಬರ್ 05ರಿಂದ ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ
ಜುಲೈ 01ರಿಂದ ಏಕದಿನ ವಿಶ್ವಕಪ್ ಟೂರ್ನಿಯ ಟಿಕೆಟ್ ಮಾರಾಟ

ODI World Cup 2023 ICC Set To Release Tickets From July 1st Says report kvn
Author
First Published Jun 30, 2023, 10:25 AM IST

ನವದೆಹಲಿ(ಜೂ.30): 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ಮೂರು ತಿಂಗಳಿಗೂ ಕಡಿಮೆ ಸಮಯವಿದ್ದು, ಆತಿಥೇಯ ಬಿಸಿಸಿಐ ಸಿದ್ಧತೆ ಆರಂಭಿಸಿದೆ. ವಿಶ್ವಕಪ್‌ ಪಂದ್ಯಗಳ ಆನ್‌ಲೈನ್‌ ಟಿಕೆಟ್‌ ಮಾರಾಟವು ಜುಲೈ 1(ಶನಿವಾರ)ರಂದು ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆನ್‌ಲೈನ್‌ನಲ್ಲೇ ಬಹುಪಾಲು ಟಿಕೆಟ್‌ಗಳು ಮಾರಾಟವಾಗುವ ಸಾಧ್ಯತೆ ಇದ್ದು, ಕ್ರೀಡಾಂಗಣಗಳ ಬಳಿ ಇರುವ ಕೌಂಟರ್‌ಗಳಲ್ಲಿ ಕೆಲವೇ ಸಾವಿರ ಟಿಕೆಟ್‌ಗಳನ್ನು ಮಾರಾಟಕ್ಕಿಡಲು ಐಸಿಸಿ ಹಾಗೂ ಬಿಸಿಸಿಐ ನಿರ್ಧರಿಸಿವೆ ಎನ್ನಲಾಗಿದೆ. ಐಸಿಸಿ ಟೂರ್ನಿಯಾಗಿರುವ ಕಾರಣ ಹಲವು ದೇಶಗಳಿಂದ ಅಭಿಮಾನಿಗಳು ಆಗಮಿಸಲಿದ್ದಾರೆ. ಭಾರತದ 10 ನಗರಗಳಲ್ಲಿ ಪಂದ್ಯಗಳು ನಡೆಯಲಿದ್ದು, ದೇಸಿ ಅಭಿಮಾನಿಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ಪಂದ್ಯ ವೀಕ್ಷಣೆಗೆ ತೆರಳಲಿದ್ದಾರೆ. ಹೀಗಾಗಿ ಆನ್‌ಲೈನ್‌ನಲ್ಲೇ ಬಹುತೇಕ ಟಿಕೆಟ್‌ಗಳು ಮಾರಾಟವಾಗಲಿವೆ. ಸ್ಥಳೀಯ ಅಭಿಮಾನಿಗಳಿಗಾಗಿ ಪಂದ್ಯ ಸಮೀಪಿಸಿದಾಗ ಆಯಾ ನಗರಗಳ ಕ್ರೀಡಾಂಗಣಗಳ ಕೌಂಟರ್‌ನಲ್ಲಿ ಟಿಕೆಟ್‌ ಮಾರಾಟ ವ್ಯವಸ್ಥೆ ಮಾಡಲು ಬಿಸಿಸಿಐ ಯೋಜನೆ ರೂಪಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಏಕದಿನ ವಿಶ್ವಕಪ್ ಪಂದ್ಯಗಳ ಆತಿಥ್ಯದಲ್ಲಿ ರಾಜಕೀಯದ ವಾಸನೆ..?

ಟಿಕೆಟ್‌ ದರ ಎಷ್ಟು?: ಪಂದ್ಯದ ಬೇಡಿಕೆಗೆ ತಕ್ಕಂತೆ ಟಿಕೆಟ್‌ಗಳ ದರ ನಿಗದಿಯಾಗುವ ಸಾಧ್ಯತೆ ಇದ್ದು, ಅಂದಾಜು ರು.500ರಿಂದ 10,000ದ ವರೆಗೂ ವಿವಿಧ ದರಗಳ ಟಿಕೆಟ್‌ಗಳು ಖರೀದಿಗೆ ಲಭ್ಯವಿರಲಿವೆ ಎನ್ನಲಾಗಿದೆ. ಭಾರತದ ಪಂದ್ಯಗಳು ಅದರಲ್ಲೂ ಪ್ರಮುಖವಾಗಿ ಪಾಕಿಸ್ತಾನ ವಿರುದ್ಧದ ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಭಾರೀ ಬೇಡಿಕೆ ಇರುವ ನಿರೀಕ್ಷೆ ಇದೆ. ಕಳೆದೊಂದು ದಶಕದಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳ ಟಿಕೆಟ್‌ ಮಾರಾಟ ಆರಂಭಗೊಂಡ 15ರಿಂದ 30 ನಿಮಿಷಗಳಲ್ಲಿ ಸೋಲ್ಡ್‌ ಔಟ್‌ ಆಗಿವೆ. ಈ ಬಾರಿಯೂ ಅದೇ ರೀತಿ ಆದರೆ ಅಚ್ಚರಿಯಿಲ್ಲ.

ಚೆನ್ನೈನಲ್ಲಿ ಅಕ್ಟೋಬರ್ 8ರಂದು ನಡೆಯಲಿರುವ ಭಾರತ-ಆಸ್ಟ್ರೇಲಿಯಾ, ಲಖನೌನಲ್ಲಿ ಅಕ್ಟೋಬರ್ 29ರಂದು ನಡೆಯಲಿರುವ ಭಾರತ-ಇಂಗ್ಲೆಂಡ್‌, ನವೆಂಬರ್ 5ರಂದು ಕೋಲ್ಕತಾದಲ್ಲಿ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ ಪಂದ್ಯಗಳ ಟಿಕೆಟ್‌ಗಳಿಗೂ ಹೆಚ್ಚಿನ ಬೇಡಿಕೆ ಕಂಡುಬರಬಹುದು. ಉಳಿದಂತೆ ಇಂಗ್ಲೆಂಡ್‌-ನ್ಯೂಜಿಲೆಂಡ್‌ ನಡುವಿನ ಉದ್ಘಾಟನಾ ಪಂದ್ಯ, ಸೆಮಿಫೈನಲ್ಸ್‌ ಹಾಗೂ ಫೈನಲ್‌ ಟಿಕೆಟ್‌ಗಳಿಗೆ ಬೇಡಿಕೆ ಇರಲಿದೆ.

ICC World Cup 2023 ಪಂದ್ಯಗಳ ಟಿಕೆಟ್ ಕೊಂಡುಕೊಳ್ಳುವುದು ಹೇಗೆ?

ವಿಶ್ವಕಪ್‌ಗೂ ಮುನ್ನ ಆಸೀಸ್‌ ವಿರುದ್ಧ ಸರಣಿ?

ನವದೆಹಲಿ: ಏಷ್ಯಾಕಪ್‌ ಮುಕ್ತಾಯಗೊಂಡ ಬೆನ್ನಲ್ಲೇ ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ವಿಶ್ವಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಆಡಲಿದ್ದು, 3 ಪಂದ್ಯಗಳ ಸರಣಿಯನ್ನು ಅಭ್ಯಾಸಕ್ಕಾಗಿ ಬಳಸಿಕೊಳ್ಳಲಿದೆ ಎನ್ನಲಾಗಿದೆ.

ವಿಶ್ವಕಪ್‌: ಅಹ್ಮದಾಬಾದಲ್ಲಿ ಹೋಟೆಲ್‌ ಬೆಲೆ ಗಗನಕ್ಕೆ!

ಅಹಮದಾಬಾದ್‌: ವಿಶ್ವಕಪ್‌ನ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಹಾಗೂ ಫೈನಲ್‌ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವುದು ಖಚಿತಗೊಂಡ ಬೆನ್ನಲ್ಲೇ ನಗರದ ಹೋಟೆಲ್‌ ರೂಂಗಳ ಬೆಲೆ ಗಗನಕ್ಕೇರಿದೆ. ಸಾಮಾನ್ಯವಾಗಿ ಪಂಚತಾರಾ ಹೋಟೆಲ್‌ಗಳಲ್ಲಿ ಒಂದು ರಾತ್ರಿಗೆ 6,500-10,000 ರು. ಇರುವ ಬೆಲೆ ಅಕ್ಟೋಬರ್ 13ರಿಂದ 16ರ ನಡುವೆ ಬರೋಬ್ಬರಿ 50 ಸಾವಿರದಿಂದ 1 ಲಕ್ಷ ರು. ವರೆಗೂ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಬೆಲೆ ಗಗನಕ್ಕೇರಿದ್ದರೂ ನಗರದ ಹೋಟೆಲ್‌ಗಳು ಶೇ.80ರಷ್ಟು ಮುಂಗಡ ಬುಕಿಂಗ್‌ ಆಗಿವೆ ಎಂದು ವರದಿಯಾಗಿದೆ.

ವಿರಾಟ್ ಕೊಹ್ಲಿ​​-ಬಾಬರ್ ಅಜಂ​ ಹುಟ್ಟುಹಬ್ಬದ ದಿನ ಮಹತ್ವದ ಪಂದ್ಯಗಳು..! ಗೆಲುವಿನ ಸಿಹಿ ಯಾರಿಗೆ?

ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಕಕಾಲದಲ್ಲಿ ಸುಮಾರು 1.30 ಲಕ್ಷ ಮಂದಿ ಪಂದ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಇದೇ ಮೈದಾನದಲ್ಲಿ ಕಾದಾಡಲಿವೆ. ಈ ಮೂಲಕ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ.

ಭಾರತದ ವೇಳಾಪಟ್ಟಿ:

ODI World Cup 2023 ICC Set To Release Tickets From July 1st Says report kvn

Follow Us:
Download App:
  • android
  • ios