Asianet Suvarna News Asianet Suvarna News

ಗೌತಮ್ ಗಂಭೀರ್‌ ಭಾರತದ ಉತ್ತಮ ಕೋಚ್‌ ಆಗಬಲ್ಲರು: ಸೌರವ್ ಗಂಗೂಲಿ

ಈ ಬಗ್ಗೆ ಮುಂಬೈನಲ್ಲಿ ಮಾತನಾಡಿದ ಅವರು, ‘ಗಂಭೀರ್‌ ಕೆಕೆಆರ್‌ ಕೋಚ್ ಆಗಿದ್ದವರು. ಅವರಲ್ಲಿ ಗೆಲುವಿನ ಹಸಿವು, ತುಡಿತವಿದೆ. ಅವರಿಗೆ ಕೋಚ್‌ ಹುದ್ದೆ ನೀಡಿದರೆ ಅದು ಉತ್ತಮ ಆಯ್ಕೆಯಾಗಿರಲಿದೆ’ ಎಂದಿದ್ದಾರೆ.

Sourav Ganguly backs Gautam Gambhir for Team India coach role kvn
Author
First Published Jun 2, 2024, 12:20 PM IST | Last Updated Jun 2, 2024, 12:20 PM IST

ಮುಂಬೈ: ಭಾರತದ ಮುಖ್ಯ ಕೋಚ್ ಹುದ್ದೆಗೆ ಗೌತಮ್‌ ಗಂಭಿರ್‌ ಅರ್ಜಿ ಸಲ್ಲಿಸಿದ್ದರೆ ಒಳ್ಳೆಯದು. ಅವರು ಭಾರತಕ್ಕೆ ಉತ್ತಮ ಕೋಚ್‌ ಆಗಬಲ್ಲರು ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ. ಬಿಸಿಸಿಐ ಇನ್ನು ಕೆಲವೇ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಅವರನ್ನು ನೇಮಿಸಲಿದೆ

ಈ ಬಗ್ಗೆ ಮುಂಬೈನಲ್ಲಿ ಮಾತನಾಡಿದ ಅವರು, ‘ಗಂಭೀರ್‌ ಕೆಕೆಆರ್‌ ಕೋಚ್ ಆಗಿದ್ದವರು. ಅವರಲ್ಲಿ ಗೆಲುವಿನ ಹಸಿವು, ತುಡಿತವಿದೆ. ಅವರಿಗೆ ಕೋಚ್‌ ಹುದ್ದೆ ನೀಡಿದರೆ ಅದು ಉತ್ತಮ ಆಯ್ಕೆಯಾಗಿರಲಿದೆ’ ಎಂದಿದ್ದಾರೆ.

ಗೌತಮ್‌ ಗಂಭೀರ್‌ಗೆ ಕೋಚ್‌ ಹುದ್ದೆ ಪಕ್ಕಾ?

ಭಾರತ ತಂಡದ ನೂತನ ಕೋಚ್‌ ಆಗಿ ಗೌತಮ್‌ ಗಂಭೀರ್‌ ಆಯ್ಕೆಯಾಗಿದ್ದಾರೆ ಎಂದು ಐಪಿಎಲ್‌ ತಂಡವೊಂದರ ಮಾಲಿಕ ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದ್ದು, ಸದ್ಯದಲ್ಲೇ ಬಿಸಿಸಿಐ ಗಂಭೀರ್‌ರನ್ನು 3 ವರ್ಷಗಳ ಅವಧಿಗೆ ಕೋಚ್‌ ಆಗಿ ಘೋಷಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಬಿಸಿಸಿಐ ಕಾರ್ಯದರ್ಶಿಗೆ ಆಪ್ತರಾಗಿರುವ ಐಪಿಎಲ್‌ ತಂಡವೊಂದರ ಮಾಲಿಕನಿಂದ ಈ ಮಾಹಿತಿ ದೊರೆತಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

T20 World Cup 2024 ಕೆನಡಾ ವಿಶ್ವಕಪ್‌ ತಂಡದಲ್ಲಿ ಕನ್ನಡಿಗ ಶ್ರೇಯಸ್!

ಇದೇ ವೇಳೆ ಐಪಿಎಲ್‌ ಫೈನಲ್‌ ಮುಕ್ತಾಯಗೊಂಡ ಬಳಿಕ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹಾಗೂ ಗಂಭೀರ್‌ ಸುದೀರ್ಘ ಚರ್ಚೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಗಂಭೀರ್‌ ‘ದೇಶಕ್ಕಾಗಿ ಮಾಡಲೇಬೇಕಾಗುತ್ತದೆ’ ಎಂದು ಹೇಳಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸಿದ್ದು, ಕೋಚ್‌ ಆಗಿ ಕಾರ್ಯನಿರ್ವಹಿಸುವ ಬಗ್ಗೆಯೇ ಮಾತನಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಟಿ20 ವಿಶ್ವಕಪ್‌ ಮುಗಿದ ಬಳಿಕ ರಾಹುಲ್‌ ದ್ರಾವಿಡ್‌ರ ಗುತ್ತಿಗೆ ಅವಧಿ ಮುಕ್ತಾಯಗೊಳ್ಳಲಿದ್ದು, ಹೊಸದಾಗಿ ಕೋಚ್‌ ಆಗುವವರು ಆ ಬಳಿಕ ಹುದ್ದೆ ಅಲಂಕರಿಸಲಿದ್ದಾರೆ. ಹೊಸ ಕೋಚ್‌ 2027ರ ಏಕದಿನ ವಿಶ್ವಕಪ್‌ ವರೆಗೂ ಕಾರ್ಯನಿರ್ವಹಿಸಲಿದ್ದಾರೆ ಎಂದು ಈ ಹಿಂದೆಯೇ ಜಯ್‌ ಶಾ ತಿಳಿಸಿದ್ದರು.

ಕ್ರಿಕೆಟ್‌ಗೆ ಕಾರ್ತಿಕ್‌ ಗುಡ್‌ಬೈ

ಚೆನ್ನೈ: ಭಾರತದ ಮಾಜಿ ವಿಕೆಟ್‌ ಕೀಪರ್‌ ಬ್ಯಾಟರ್‌ ದಿನೇಶ್‌ ಕಾರ್ತಿಕ್‌ ಶನಿವಾರ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2 ದಶಕಗಳ ಕ್ರಿಕೆಟ್‌ ವೃತ್ತಿಬದುಕಿನಲ್ಲಿ ದಿನೇಶ್‌ ಭಾರತದ ಪರ 180 ಪಂದ್ಯಗಳನ್ನಾಡಿದ್ದು, 3463 ರನ್‌ ಕಲೆಹಾಕಿದ್ದಾರೆ. 1 ಶತಕ, 17 ಅರ್ಧಶತಕ ಸಿಡಿಸಿರುವ ಅವರು, ವಿಕೆಟ್‌ ಕೀಪಿಂಗ್‌ನಲ್ಲಿ 172 ಬಲಿ ಪಡೆದಿದ್ದಾರೆ. ಅವರು ಇತ್ತೀಚೆಗಷ್ಟೇ ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಆಡಿದ್ದರು. 2007 ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ದಿನೇಶ್‌ ಈ ಬಾರಿ ವಿಶ್ವಕಪ್‌ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

Latest Videos
Follow Us:
Download App:
  • android
  • ios