ಪಂಜಾಬ್(ಸೆ.13): ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ದಿಢೀರ್ ತಂಡದಿಂದ ಹೊರಗುಳಿದು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು. ಸುರೇಶ್ ರೈನಾ ತವರಿಗೆ ವಾಪಸ್ ಆದ ಬೆನ್ನಲ್ಲೇ ಭಜ್ಜಿ ಕೂಡ ತವರಿಗೆ ಮರಳಿದ್ದರು. ಚೆನ್ನೈ ತಂಡದಲ್ಲಿ ಏನಾಗುತ್ತಿದೆ ಅನ್ನೋ ಯಾವ ಸುಳಿವು ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಈ ಬೆಳವಣಿಗೆ ತಣ್ಣಗಾಗುತ್ತಿದ್ದಂತೆ ಇದೀಗ ಎಲ್ಲರ ಚಿತ್ತ ಐಪಿಎಲ್ ಟೂರ್ನಿಯತ್ತ ನಟ್ಟಿದೆ. ಟೂರ್ನಿ ಆರಂಭಕ್ಕೆ ಕೆಲ ದಿನಗಳಿರುವಾಗಲೇ ಹರ್ಭಜನ್ ಟ್ವೀಟ್ ಇದೀಗ ಭಾರಿ ಕುತೂಹಲ ಮೂಡಿಸಿದೆ.

ಧೋನಿ ಪಡೆಗೆ ಮತ್ತೊಂದು ಶಾಕ್: ಸಿಎಸ್‌ಕೆ ತಂಡದಿಂದ ಹೊರಬಿದ್ದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ..!.

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಭಾರಿ ಸದ್ದು ಮಾಡುತ್ತಿದೆ. ಆದರೆ ನನಗೆ ಸಿಕ್ಕ ಕೆಲ ಮಾಹಿತಿಯನ್ನು ಹೇಳುತ್ತೇನೆ. ಅದು ಕ್ರಿಕೆಟ್ ಮೇಲಿನ ನಿಮ್ಮ ದೃಷ್ಟಿಕೋನವನ್ನೇ ಬದಲಿಸಲಿದೆ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಅಂತಿಮವಾಗಿ ಕ್ರಿಕೆಟ್ ಅಂತರಂಗ ಬಹಿರಂಗಪಡಿಸುವಿಕೆ ಎಂದಿದ್ದಾರೆ.

 

ಇಡೀ ಕಾಲೋನಿ ಬಿಲ್ ನೀಡಿದ್ದೀರಾ? ದುಬಾರಿ ವಿದ್ಯುತ್ ಬಿಲ್ ನೋಡಿ ಹರ್ಭಜನ್ ಶಾಕ್!

ಹರ್ಭಜನ್ ಸಿಂಗ್ ಟ್ವೀಟ್ ಇದೀಗ ಹಲವು ಚರ್ಚೆಗಳಿಗೆ ವೇದಿಕೆ ಕಲ್ಪಿಸಿದೆ. ಇತ್ತೀಚೆಗಷ್ಟೇ ಹರ್ಭಜನ್ ಸಿಂಗ್ ಐಪಿಎಲ್ ಟೂರ್ನಿಯಿಂದ ಹೊರಬಂದಿದ್ದರು. ಆದರೆ ಸ್ಪಷ್ಟ ಕಾರಣ ನೀಡಿಲ್ಲ. ಹರ್ಭಜನ್ ಸಿಂಗ್ ಕುಟುಂಬ ಸದಸ್ಯರಿಗ ಕೊರೋನಾ ಪಾಸಿಟೀವ್ ಕಾರಣ ಭಜ್ಜಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು.

ಇದೀಗ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ ಬಳಿಕ ಕ್ರಿಕೆಟ್ ಅಸಲಿ ಮುಖ ಬಹಿರಂಗ ಪಡಿಸಲಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಪ್ರತಿ ನಿಮಿಷಕ್ಕೂ ಅಭಿಮಾನಿಗಳು ಹರ್ಭಜನ್ ಸಿಂಗ್ ಟ್ವೀಟ್ ಪರಿಶೀಲನೆ ನಡೆಸುತ್ತಿದ್ದಾರೆ.