ಮುಂಬೈ(ಜು.27): ಕೊರೋನಾ ವೈರಸ್ ಲಾಕ್‌ಡೌನ್ ಬಳಿಕ ಹಲವರ ಮನೆಗೆ ದುಬಾರಿ ವಿದ್ಯುತ್ ಬಿಲ್ ಶಾಕ್ ನೀಡಿದೆ. ನಗರ ಪ್ರದೇಶ ಮಾತ್ರವಲ್ಲ ಹಳ್ಳಿಗಳಲ್ಲೂ ಈ ರೀತಿ ದುಬಾರಿ ವಿದ್ಯುತ್ ಬಿಲ್ ಕಂಡ ಜನರು ಬೆಚ್ಚಿ ಬೀಳುತ್ತಿರುವ ಘಟನೆಗಳು ನಡೆಯುತ್ತಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್‌ಗೆ ತಮ್ಮ ಒಂದು ತಿಂಗಳ ಮನೆಯ ವಿದ್ಯುತ್ ಬಿಲ್ ನೋಡಿ ಹೌಹಾರಿದ್ದಾರೆ. ಬರೋಬ್ಬರಿ 33,900 ರೂಪಾಯಿ ಬಿಲ್ ನೋಡಿದ ಹರ್ಭಜನ್ ಸಿಂಗ್, ಟ್ವಿಟರ್ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಚೀನಾ ವಸ್ತು ಪ್ರಚಾರ ಮಾಡಲ್ಲ, ಬಳಸಲ್ಲ; ಪ್ರತಿಜ್ಞೆ ಮಾಡಿದ ಹರ್ಭಜನ್!.

ಪ್ರತಿ ತಿಂಗಳ ಚಾಚೂ ತಪ್ಪದೆ ಹರ್ಭಜನ್ ಸಿಂಗ್ ತಮ್ಮ ಮುಂಬೈ ಮನೆಯ ಬಿಲ್ ಪಾವತಿ ಮಾಡುತ್ತಿದ್ದಾರೆ. ಈ ತಿಂಗಳು ಹರ್ಭಜನ್ ಸಿಂಗ್‌ಗೆ ಮುಂಬೈ ವಿದ್ಯುತ್ ಸರಬರಾಜು ಕಂಪನಿಯಿಂದ ಮೆಸೇಜ್ ಬಂದಿದೆ. ನಿಮ್ಮ ಮನೆಯ ವಿದ್ಯುತ್ ಬಿಲ್ 33,900 ರೂಪಾಯಿ. ಬಿಲ್ ಪಾವತಿಯ ಅಂತಿಮ ದಿನಾಂಕ ಆಗಸ್ಟ್ 17. ಆನ್‌ಲೈನ್ ಪಾವತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಎಂದು ಮುಂಬೈ ಅದಾನಿ ಎಲೆಕ್ಟ್ರಿಸಿಟಿ ಸಪ್ಲೈ ಬೋರ್ಡ್‌ನಿಂದ ಬಿಲ್ ಸಂದೇಶ ಬಂದಿದೆ. 

 

400 ವಿಕೆಟ್ ಸಂಭ್ರಮದ ಬೆನ್ನಲ್ಲೇ ತಂಡದಿಂದ ಹೊರಬಿದ್ದೆ; ನೋವು ತೋಡಿಕೊಂಡ ಹರ್ಭಜನ್!

ಹರ್ಭಜನ್ ಸಿಂಗ್ ಟ್ವಿಟರ್ ಮೂಲಕ ಈ ದುಬಾರಿ ಬಿಲ್ ಪ್ರಶ್ನಿಸಿದ್ದಾರೆ. ಇದು ನನ್ನ ಅಕ್ಕಪಕ್ಕದಲ್ಲಿರುವ ಎಲ್ಲಾ ಮನೆಗಳ ಬಿಲ್ ನನಗೆ ಕಳುಹಿಸಿದ್ದೀರೋ ಅಥವಾ ನನ್ನ ಮನೆಯ ಬಿಲ್ ಎಂದು ಹರ್ಭಜನ್ ಸಿಂಗ್ ಪ್ರಶ್ನಿಸಿದ್ದಾರೆ. 

ಇತ್ತೀಗೆ ಬಾಲಿವುಡ್ ನಟಿ ಚಾಪ್ಸಿ ಪನ್ನು ಕೂಡ ತಮ್ಮ ಮುಂಬೆ ಮನೆಯ ಬಿಲ್ ನೋಡಿ ಬೆಚ್ಚಿ ಬಿದ್ದಿದ್ದರು. ತಾಪ್ಸಿ ಪನ್ನುಗೆ 36,000 ರೂಪಾಯಿ ಬಿಲ್ ನೀಡಲಾಗಿತ್ತು.