Asianet Suvarna News Asianet Suvarna News

ಮೂರು ಜೆನರೇಷನ್ ಬ್ಯಾಟರ್ಸ್ ವಿರುದ್ಧವೂ ಜೇಮ್ಸ್ ಆಂಡರ್ಸನ್ ಅಬ್ಬರ...!

ವೈಜಾಗ್ ಅಂಗಳದಲ್ಲಿ ಅಬ್ಬರಿಸಲೇಬೇಕು ಅಂತ ಗಿಲ್ ಫೀಲ್ಡಿಗಿಳಿದಿದ್ರು. ಅದರಂತೆ ಅದ್ಭುತ ಶಾಟ್ಗಳ ಮೂಲಕ ಮಿಂಚಿದ್ರು. ಬಿಗ್ ಇನ್ನಿಂಗ್ಸ್ ಆಡೋ ಭರವಸೆ ಮೂಡಿಸಿದ್ರು. ಆದ್ರೆ, 34 ರನ್ ಗಳಿಸಿ ಆಡ್ತಿದ್ದಾಗ, ಆ್ಯಂಡರ್ಸನ್ಗೆ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಬೆನ್ ಫೋಕ್ಸ್ಗೆ ಕ್ಯಾಚ್ ನೀಡಿದ್ರು. ಆ ಮೂಲಕ ಮತ್ತೊಮ್ಮೆ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದ್ರು. 

Shubman Gill nightmare against James Anderson is painful full of one-way traffic kvn
Author
First Published Feb 3, 2024, 3:34 PM IST

ವಿಶಾಖಪಟ್ಟಣ(ಫೆ.03) ಫಾಸ್ಟ್ ಬೌಲರ್ಸ್ ಕರಿಯರ್ 10-15 ವರ್ಷ ಕ್ರಿಕೆಟ್ ಆಡಿದ್ರೇನೆ ಹೆಚ್ಚು. ಅಂತದ್ರಲ್ಲಿ ಈ ಇಂಗ್ಲೆಂಡ್ ವೇಗಿ , 41ನೇ ವಯಸ್ಸಿನಲ್ಲೂ ಯುವ ಬೌಲರ್ಗಳಿಗೆ ಸವಾಲೊಡ್ಡುತ್ತಿದ್ದಾರೆ. 3ನೇ ಜೆನ್ರೇಷನ್ ಗ್ರೇಟ್ ಬ್ಯಾಟರ್ಸ್‌ಗೆ ವಿಲನ್ ಆಗಿ ಕಾಡ್ತಿದ್ದಾರೆ. ನಾವ್ಯಾರ ಬಗ್ಗೆ ಹೇಳ್ತದ್ದೀವಿ ಅನ್ನೋದು ನಿಮಗೆ ಗೊತ್ತಾಗಿರುತ್ತೆ. ಹಾಗಾದ್ರೆ, ಮತ್ತ್ಯಾಕೆ ತಡ. ಈ ಸ್ಟೋರಿ ನೋಡಿ.

ಕಳಪೆ ಫಾರ್ಮ್ ಸುಳಿಯಿಂದ ಹೊರಬರ್ತಿಲ್ಲ ಗಿಲ್..! 

ಯೆಸ್, ಟೆಸ್ಟ್ ಕ್ರಿಕೆಟ್ನಲ್ಲಿ ಶುಭ್ಮನ್ ಗಿಲ್ ಕಳಪೆ ಫಾರ್ಮ್ ಸುಳಿಯಿಂದ ಹೊರಬರ್ತಿಲ್ಲ. ವಿಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಟೂರ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಗಿಲ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅದೇ ಮುಂದುವರಿಸಿದ್ದಾರೆ. 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೂ ತಮ್ಮ ಸಾಮರ್ಥ್ಯ ಪ್ರೂವ್ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಬಾರಿ ಗಿಲ್ ಆಟಕ್ಕೆ ಬ್ರೇಕ್ ಹಾಕಿದ್ದು, ಸ್ವಿಂಗ್ ಕಿಂಗ್ ಜೇಮ್ಸ್ ಆಂಡರ್ಸನ್..!  

ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ: 396ಕ್ಕೆ ಟೀಂ ಇಂಡಿಯಾ ಆಲೌಟ್

ವೈಜಾಗ್ ಅಂಗಳದಲ್ಲಿ ಅಬ್ಬರಿಸಲೇಬೇಕು ಅಂತ ಗಿಲ್ ಫೀಲ್ಡಿಗಿಳಿದಿದ್ರು. ಅದರಂತೆ ಅದ್ಭುತ ಶಾಟ್ಗಳ ಮೂಲಕ ಮಿಂಚಿದ್ರು. ಬಿಗ್ ಇನ್ನಿಂಗ್ಸ್ ಆಡೋ ಭರವಸೆ ಮೂಡಿಸಿದ್ರು. ಆದ್ರೆ, 34 ರನ್ ಗಳಿಸಿ ಆಡ್ತಿದ್ದಾಗ, ಆ್ಯಂಡರ್ಸನ್ಗೆ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಬೆನ್ ಫೋಕ್ಸ್ಗೆ ಕ್ಯಾಚ್ ನೀಡಿದ್ರು. ಆ ಮೂಲಕ ಮತ್ತೊಮ್ಮೆ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದ್ರು. 

7 ಇನ್ನಿಂಗ್ಸ್‌ಗಳಲ್ಲಿ 5 ಬಾರಿ ಆ್ಯಂಡರ್ಸನ್ಗೆ ಬಲಿ..! 

ಯೆಸ್, ಟೆಸ್ಟ್ನಲ್ಲಿ ಆ್ಯಂಡರ್ಸನ್ ಗಿಲ್ಗೆ ವಿಲನ್ ಆಗಿ ಕಾಡ್ತಿದ್ದಾರೆ. ಆ್ಯಂಡರ್ಸನ್ ಬೌಲಿಂಗ್ನಲ್ಲಿ ಬ್ಯಾಟ್ ಬೀಸಲು ಗಿಲ್ ಪರದಾಡ್ತಾರೆ. ಸುಲಭವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರ್ತಾರೆ. ಗಿಲ್ ಮತ್ತು ಆ್ಯಂಡರಸನ್ ಈವರೆಗೂ 7 ಇನ್ನಿಂಗ್ಸ್ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಇದ್ರಲ್ಲಿ 5 ಬಾರಿ ಆ್ಯಂಡರ್ಸನ್ ಗಿಲ್ರನ್ನ ಔಟ್ ಮಾಡಿದ್ದಾರೆ. ಗಿಲ್ ಕೇವಲ 7.8ರ ಸರಾಸರಿಯಲ್ಲಿ 39 ರನ್ ಗಳಿಸಿದ್ದಾರೆ. 

ಸಚಿನ್, ವಿರಾಟ್ ಕೊಹ್ಲಿಗೂ ನೀರು ಕುಡಿಸಿದ್ದ ಜಿಮ್ಮಿ..! 

ಆ್ಯಂಡರಸನ್ ಗಿಲ್‌ಗೆ  ಮಾತ್ರ ಅಲ್ಲ, ಭಾರತದ ಹಲವು ಬ್ಯಾಟರ್ಸ್ ಪಾಲಿಗೆ ಕಂಟಕವಾಗಿ ಕಾಡಿದ್ದಾರೆ. ಘಟಾನುಘಟಿ ಬ್ಯಾಟ್ಸ್ಮನ್ಗಳಿಗೆ ನೀರು ಕುಡಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ರನ್ನ 9 ಬಾರಿ ಔಟ್ ಮಾಡಿದ್ದಾರೆ. ಇನ್ನು ರನ್ಮಷಿನ್ ವಿರಾಟ್ ಕೊಹ್ಲಿಗೂ ಈ ಕಾಟ ಕೊಟ್ಟಿದ್ದಾರೆ. 7 ಬಾರಿ ಕೊಹ್ಲಿ ವಿಕೆಟ್ ಬೇಟೆಯಾಡಿದ್ದಾರೆ.

IPL ವೇಳೆಯಲ್ಲಿ ಬೆತ್ತಲೆ ಫೋಟೋ ಶೇರ್‌ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಪೂನಂ ಪಾಂಡೆ..!

41ನೇ ವರ್ಷ 187ನೇ ದಿನದಲ್ಲಿ 184ನೇ ಟೆಸ್ಟ್..! 

ಯೆಸ್, ಟೆಸ್ಟ್ ಕ್ರಿಕೆಟ್ ಆಡಿದ ಅತ್ಯಂತ ಹಿರಿಯ ವೇಗದ ಬೌಲರ್ ಅನ್ನೋ ದಾಖಲೆಗೆ ಆ್ಯಂಡರ್ಸನ್ ಪಾಲಾಗಿದ್ದಾರೆ. ಆ ಮೂಲಕ ಭಾರತದ ಮಾಜಿ ಆಟಗಾರ ಲಾಲಾ ಅಮರ್ನಾಥ್ ದಾಖಲೆ ಬ್ರೇಕ್ ಮಾಡಿದ್ದಾರೆ.  ಅಮರ್ನಾಥ್ ತಮ್ಮ 41ನೇ ವರ್ಷ 2 ತಿಂಗಳ ವಯಸ್ಸಿನಲ್ಲಿ ಭಾರತದ ಪರ ಟೆಸ್ಟ್ ಆಡಿದ್ರು. ಆದ್ರೀಗ, ಆ್ಯಂಡರ್ಸನ್ 41ನೇ ವರ್ಷ 187ನೇ ದಿನಗಳ ವಯಸ್ಸಿನಲ್ಲಿ 184ನೇ  ಟೆಸ್ಟ್ ಮ್ಯಾಚ್ ಆಡ್ತಿದ್ದಾರೆ. 

ಆ್ಯಂಡರ್ಸನ್‌ಗಿಂದು 6ನೇ ಭಾರತ ಪ್ರವಾಸ ಆಗಿದೆ. 2006ರಲ್ಲಿ ಆ್ಯಂಡರ್ಸನ್ ಮೊದಲ ಬಾರಿ ಭಾರತದಲ್ಲಿ ಟೆಸ್ಟ್ ಸರಣಿ ಆಡಿದ್ರು. ಆಗ ಅವ್ರು 23 ವರ್ಷದ ಯಂಗ್ಸ್ಟರ್ ಆಗಿದ್ರು. ಆಗ ಅ್ಯಂಡರ್ಸನ್ ಜೊತೆ ಆಡಿದ್ದ ಆಟಗಾರರು ರಿಟೈರ್ಡ್ ಆಗಿದ್ದಾರೆ. ಇನ್ನು ವಿಶೇಷ ಅಂದ್ರೆ, ಆ್ಯಂಡರ್ಸನ್ ಇಂಗ್ಲೆಂಡ್ ತಂಡದ ತರ ಡೆಬ್ಯೂ ಮಾಡಿದಾಗ, ಸದ್ಯ ಇಂಗ್ಲೆಂಡ್ ತಂಡದಲ್ಲಿರೋ ಸ್ಪಿನ್ನರ್ಗಳಾದ ಶೋಯೆಬ್ ಬಷೀರ್ ಮತ್ತು  ರಿಯಾನ್ ಅಹ್ಮದ್ ಹುಟ್ಟೇ ಇರಲಿಲ್ಲ. 2003ರಲ್ಲಿ ಆ್ಯಂರ್ಸನ್ ಟೆಸ್ಟ್ ಕ್ರಿಕೆಟ್ಗೆ  ಪದಾರ್ಪಣೆ ಮಾಡಿದ್ರು. ಆದ್ರೆ, ಶೋಯೆಬ್ ಮತ್ತು ರಿಯಾನ್ ಹುಟ್ಟಿದ್ದು 2004ರಲ್ಲಿ. 

ಅದೇನೆ ಇರಲಿ, ಫಾಸ್ಟ್ ಬೌಲರ್ಸ್ ಕರಿಯರ್ 10-15 ವರ್ಷ ಕ್ರಿಕೆಟ್ ಆಡಿದ್ರೇನೆ ಹೆಚ್ಚು. ಅಂತದ್ರಲ್ಲಿ ಅ್ಯಂಡರ್ಸ್ 41ನೇ ವಯಸ್ಸಿನಲ್ಲೂ ಟೆಸ್ಟ್ ಕ್ರಿಕೆಟ್ ಆಡ್ತಾ. ಯುವ ಬೌಲರ್ಗಳಿಗೆ ಸವಾಲೊಡ್ಡುತ್ತಿರೋದು, 3ನೇ ಜೆನ್ರೇಷನ್  ಬ್ಯಾಟರ್ಸ್ ವಿರುದ್ಧವೂ ಅಬ್ಬರಿಸ್ತಿದ್ದೋರು ನಿಜಕ್ಕೂ ಗ್ರೇಟ್. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Follow Us:
Download App:
  • android
  • ios