ಕೋಲ್ಕತಾ ನೈಟ್‌ರೈಡರ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗಿ ಶ್ರೇಯಸ್‌ ಒಟ್ಟು 55 ಪಂದ್ಯಗಳಲ್ಲಿ ಅವರು ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕೆ.ಎಲ್‌.ರಾಹುಲ್‌ 51 ಪಂದ್ಯಗಳಲ್ಲಿ ನಾಯಕನಾಗಿದ್ದು, ಸಂಜು ಸ್ಯಾಮ್ಸನ್‌ 45, ಹಾರ್ದಿಕ್‌ ಪಾಂಡ್ಯ 31, ರಿಷಭ್‌ ಪಂತ್‌ 30, ಫಾಫ್‌ ಡು ಪ್ಲೆಸಿ 27, ಶಿಖರ್‌ ಧವನ್‌ 22 ಪಂದ್ಯಗಳಲ್ಲಿ ನಾಯಕನಾಗಿ ಆಡಿದ್ದಾರೆ.

ನವದೆಹಲಿ: ಧೋನಿ ಹಾಗೂ ರೋಹಿತ್‌ ಈ ಬಾರಿ ನಾಯಕರಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ, 17ನೇ ಆವೃತ್ತಿಯಲ್ಲಿ ತಂಡಗಳನ್ನು ಮುನ್ನಡೆಸಲಿರುವ ನಾಯಕರ ಪೈಕಿ ಅತ್ಯಂತ ಅನುಭವಿ ನಾಯಕ ಎಂದರೆ ಅದು ಶ್ರೇಯಸ್‌ ಅಯ್ಯರ್‌.

ಕೋಲ್ಕತಾ ನೈಟ್‌ರೈಡರ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗಿ ಶ್ರೇಯಸ್‌ ಒಟ್ಟು 55 ಪಂದ್ಯಗಳಲ್ಲಿ ಅವರು ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕೆ.ಎಲ್‌.ರಾಹುಲ್‌ 51 ಪಂದ್ಯಗಳಲ್ಲಿ ನಾಯಕನಾಗಿದ್ದು, ಸಂಜು ಸ್ಯಾಮ್ಸನ್‌ 45, ಹಾರ್ದಿಕ್‌ ಪಾಂಡ್ಯ 31, ರಿಷಭ್‌ ಪಂತ್‌ 30, ಫಾಫ್‌ ಡು ಪ್ಲೆಸಿ 27, ಶಿಖರ್‌ ಧವನ್‌ 22 ಪಂದ್ಯಗಳಲ್ಲಿ ನಾಯಕನಾಗಿ ಆಡಿದ್ದಾರೆ.

ಋತುರಾಜ್‌ ಗಾಯಕ್ವಾಡ್‌, ಶುಭ್‌ಮನ್‌ ಗಿಲ್‌ ಹಾಗೂ ಪ್ಯಾಟ್‌ ಕಮಿನ್ಸ್‌ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

IPL 2024 ಇಂದು ಆರ್‌ಸಿಬಿ vs ಸಿಎಸ್‌ಕೆ ಮಹಾಕದನ!

ರಣಜಿ ಟ್ರೋಫಿ ಕಡೆಗಣಿಸಿದರೆ ಐಪಿಎಲ್‌ಗಿಲ್ಲ: ಶ್ರೀಘ್ರ ಬಿಸಿಸಿಐ ಹೊಸ ನಿಯಮ?

ನವದೆಹಲಿ: ರಣಜಿ ಟ್ರೋಫಿಯಲ್ಲಿ ಆಡದೆ ಆಟಗಾರರು ಕೇವಲ ಐಪಿಎಲ್ ಕಡೆಗಷ್ಟೇ ಹೆಚ್ಚು ಪ್ರಾಮುಖ್ಯತೆ ನೀಡುವುದಕ್ಕೆ ಕಡಿವಾಣ ಹಾಕಲು ಬಿಸಿಸಿಐ ಹೊಸ ನಿಯಮವನ್ನು ಜಾರಿ ಮಾಡಲು ಚಿಂತನೆ ನಡೆಸಿದೆ ಎಂದು ಕೆಲವು ದಿನಗಳ ಹಿಂದಷ್ಟೇ ವರದಿಯಾಗಿತ್ತು. ಇದರ ಬೆನ್ನಲ್ಲೇ ಆಘಾತಕಾರಿ ಅಂಕಿ-ಅಂಶವೊಂದು ಹೊರಬಿದ್ದಿದ್ದು, 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಲಿರುವ ಅರ್ಧಕರ್ಧ ಜನ ರಣಜಿ ಟ್ರೋಫಿಯಲ್ಲಿ ಆಡಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.

ಐಪಿಎಲ್‌ನಲ್ಲಿ ದಿಗ್ಗಜ ನಾಯಕರ ಯುಗಾಂತ್ಯ! ಧೋನಿ ನಿರ್ಧಾರ ಕೇಳಿ ಸಿಎಸ್‌ಕೆ ಮಾಲಿಕರಿಗೆ ಶಾಕ್!

ಈ ವರ್ಷ ಐಪಿಎಲ್‌ನ 10 ತಂಡಗಳಲ್ಲಿ ಭಾರತದ ಒಟ್ಟು 165 ಆಟಗಾರರು ಇದ್ದಾರೆ. ಈ ಪೈಕಿ 56 ಮಂದಿ 2023-24ರ ದೇಸಿ ಋತುವಿನಲ್ಲಿ ಒಂದೂ ರಣಜಿ ಪಂದ್ಯವನ್ನಾಡಿಲ್ಲ. ಇನ್ನು 25 ಮಂದಿ ಕೇವಲ ಒಂದು ಪಂದ್ಯವನ್ನಾಡಿದ್ದಾರೆ.

ಐಪಿಎಲ್‌ನಿಂದ ಹಿಂದೆ ಸರಿದ ಆಡಂ ಜಂಪಾ

ನವದೆಹಲಿ: ಆಸ್ಟ್ರೇಲಿಯಾದ ಲೆಗ್‌ಸ್ಪಿನ್ನರ್ ಆಡಂ ಜಂಪಾ 17ನೇ ಆವೃತ್ತಿಯ ಐಪಿಎಲ್‌ನಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ. ವೈಯುಕ್ತಿಕ ಕಾರಣಗಳಿಂದ ತಾವು ಟೂರ್ನಿಯಲ್ಲಿ ಆಡುವುದಿಲ್ಲ ಎಂದಿದ್ದು, ರಾಜಸ್ಥಾನ ರಾಯಲ್ಸ್‌ಗೆ ಹಿನ್ನಡೆಯುಂಟಾಗುವ ಸಾಧ್ಯತೆಯಿದೆ. ಐಪಿಎಲ್ ಆಟಗಾರರ ಹರಾಜಿಗೂ ಮುಂಚೆ ಆಡಂ ಜಂಪಾ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 1.5 ಕೋಟಿ ರುಪಾಯಿ ನೀಡಿ ತನ್ನಲ್ಲೇ ಉಳಿಸಿಕೊಂಡಿತ್ತು. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಆಡಂ ಜಂಪಾ 6 ಪಂದ್ಯಗಳನ್ನಾಡಿ 8 ವಿಕೆಟ್ ಕಬಳಿಸಿದ್ದರು.

‘ದಿ ಹಂಡ್ರೆಡ್‌’: ಸ್ಮೃತಿ, ರಿಚಾ ಘೋಷ್‌ ಆಯ್ಕೆ

ಲಂಡನ್‌: ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಆಯೋಜಿಸುವ ‘ದಿ ಹಂಡ್ರೆಡ್‌’ ಮಹಿಳಾ ಟೂರ್ನಿಗೆ ಭಾರತದ ಸ್ಮೃತಿ ಮಂಧನಾ, ರಿಚಾ ಘೋಷ್‌ ಆಯ್ಕೆಯಾಗಿದ್ದಾರೆ. ಈ ಇಬ್ಬರು ಇತ್ತೀಚೆಗೆ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಗೆದ್ದ ಆರ್‌ಸಿಬಿ ತಂಡದ ಭಾಗವಾಗಿದ್ದಾರೆ. ಸ್ಮೃತಿ ಸದ್ರನ್‌ ಬ್ರೇವ್‌ ತಂಡದ ಪರ ಆಡಲಿದ್ದು, ರಿಚಾ ಬರ್ಮಿಂಗ್‌ಹ್ಯಾಮ್‌ ಫೀನಿಕ್ಸ್‌ ತಂಡದ ಪರ ಆಡಲಿದ್ದಾರೆ. 4ನೇ ಆವೃತ್ತಿಯು ಜುಲೈ-ಆಗಸ್ಟ್‌ನಲ್ಲಿ ನಡೆಯಲಿದೆ. ಲೀಗ್‌ ಡ್ರಾಫ್ಟ್‌ ಪ್ರಕ್ರಿಯೆಗೆ ನೋಂದಾಯಿಸಿಕೊಂಡಿದ್ದ ಹರ್ಮನ್‌ಪ್ರೀತ್‌ ಕೌರ್‌, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗ್ಸ್‌, ಶ್ರೇಯಾಂಕ ಸೇರಿ ಇನ್ನೂ ಅನೇಕರಿಗೆ ಅವಕಾಶ ಸಿಕ್ಕಿಲ್ಲ.