ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಲಹೆಯನ್ನು ನಿರ್ಲಕ್ಷಿಸಿದರಾ ನಾಯಕ ಶ್ರೇಯಸ್ ಅಯ್ಯರ್? ಐಪಿಎಲ್ ಹಳೆಯ ಸೇಡಿನ ಚರ್ಚೆ ಕುರಿತ ಸಂಪೂರ್ಣ ವರದಿ ಇಲ್ಲಿದೆ.
ನವೆಂಬರ್ 15, 2026 ರಂದು ನ್ಯೂಜಿಲೆಂಡ್ನ ಮೌಂಟ್ ಮೌಂಗನುಯಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5ನೇ ಹಾಗೂ ಲಾಸ್ಟ್ ಓನ್ಡೇ ಮ್ಯಾಚ್ ನಡೆಯಿತು. ಅದರಲ್ಲಿ ಟೀಂ ಇಂಡಿಯಾ ವಿಜಯಶಾಲಿ ಸಹ ಆಯಿತು. ಇಲ್ಲಿ ವಿಷಯ ಏನೆಂದರೆ, ಮ್ಯಾಚ್ ನಡೆಯುವಾಗ ಕೊಹ್ಲಿ-ಶ್ರೇಯಸ್ ನಡುವೆ ಕೋಲ್ಡ್ ವಾರ್ ಸ್ಟ್ರಾರ್ಟ್ ಆಗದೆ ಎನ್ನಲಾಗಿದೆ. ಅಷ್ಟೇ ಅಲ್ಲ ಐಪಿಎಲ್ನಲ್ಲಿ ದ್ವೇಶವನ್ನು ಇಲ್ಲಿ ತೀರಿಸಿಕೊಳ್ಳಲಾಗ್ತಿದೆಯಾ? ಎನ್ನುತ್ತಿದ್ದಾರೆ ಅಭಿಮಾನಿಗಳು. ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಘಟನೆ ನಡೆದದ್ದು ಯಾವಾಗ?
ಕೀವಿಸ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಓವರ್ಗಳ ನಡುವಿನ ವಿರಾಮದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರು ವಿಕೆಟ್ ಕೀಪರ್ ಇಶಾನ್ ಕಿಶನ್ ಜೊತೆ ಮಾತನಾಡುತ್ತಿದ್ದರು. ಈ ವೇಳೆ ವಿರಾಟ್ ಬಂದು ಬೌಲಿಂಗ್ ಬದಲಾವಣೆ ಕುರಿತುಸಲಹೆ ನೀಡಲು ಮುಂದಾಗಿದ್ದಾರೆ.
ಅಯ್ಯರ್ ನಡೆ!
ಕೊಹ್ಲಿ ತಮ್ಮ ಸಲಹೆಯನ್ನು ಪೂರ್ಣಗೊಳಿಸುವ ಮೊದಲೇ, ಶ್ರೇಯಸ್ ಅಯ್ಯರ್ ತಲೆ ಅಲ್ಲಾಡಿಸುತ್ತಾ ಅಲ್ಲಿಂದ ನಡೆದುಕೊಂಡು ಹೋದರು. ಕೊಹ್ಲಿ ಮಾತನ್ನು ಅವರು ನಿರ್ಲಕ್ಷಿಸಿದಂತೆ ವೀಡಿಯೊದಲ್ಲಿ ಕಂಡುಬಂದಿದೆ. ಈ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (X ಮತ್ತು ಇನ್ಸ್ಟಾಗ್ರಾಮ್) ವೇಗವಾಗಿ ವೈರಲ್ ಆಗಿದೆ.
ಅಭಿಮಾನಿಗಳ ಪ್ರತಿಕ್ರಿಯೆ!
ವಿರಾಟ್ ಕೊಹ್ಲಿಯಂತಹ ಹಿರಿಯ ಹಾಗೂ ಅನುಭವಿ ಆಟಗಾರನ ಸಲಹೆಗೆ ನಾಯಕ ಅಯ್ಯರ್ ಸರಿಯಾಗಿ ಗೌರವ ನೀಡಲಿಲ್ಲ ಎಂದು ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ನೀಡಿದ್ದ 209 ರನ್ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 187 ರನ್ಗಳಿಗೆ ಆಲೌಟ್ ಆಯಿತು. ಈ ಪಂದ್ಯವನ್ನು 22 ರನ್ಗಳಿಂದ ಗೆದ್ದ ಭಾರತ, 5 ಪಂದ್ಯಗಳ ಏಕದಿನ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿತು.
IPL 2025ರ ಫೈನಲ್ ಸೋಲಿನ ಕಹಿ!
2025ರ ಐಪಿಎಲ್ ಫೈನಲ್ನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ವಿರಾಟ್ ಕೊಹ್ಲಿ ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಸತತ ಎರಡನೇ ಬಾರಿ ಕಪ್ ಗೆಲ್ಲುವ ಅಯ್ಯರ್ ಕನಸನ್ನು ಆರ್ಸಿಬಿ ಭಗ್ನಗೊಳಿಸಿತ್ತು.
ಹಳೆಯ ಸಂಭ್ರಮಾಚರಣೆಯ ವಿವಾದ!
IPL 2025ರ ಲೀಗ್ ಹಂತದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆದ್ದಾಗ ವಿರಾಟ್ ಕೊಹ್ಲಿ ಮೈದಾನದಲ್ಲಿ ಅತಿಯಾಗಿ ಸಂಭ್ರಮಿಸಿ ಅಯ್ಯರ್ ಅವರನ್ನು ಕೆಣಕಿದ್ದರು. ಪಂದ್ಯದ ಬಳಿಕ ಹಸ್ತಲಾಘವ ಮಾಡುವಾಗಲೂ ಅಯ್ಯರ್ ತೀವ್ರ ಅಸಮಾಧಾನಗೊಂಡಿದ್ದ ವೀಡಿಯೊ ಭಾರಿ ವೈರಲ್ ಆಗಿತ್ತು. ಐಪಿಎಲ್ನಲ್ಲಿ ಎದುರಾಳಿ ನಾಯಕರಾಗಿ ಮುಖಾಮುಖಿಯಾಗಿದ್ದ ಈ ಇಬ್ಬರು, ಈಗ ಭಾರತ ತಂಡದಲ್ಲಿ ಒಟ್ಟಿಗೆ ಆಡುತ್ತಿದ್ದಾರೆ. ಆದರೆ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ತಂಡದ ನಾಯಕರಾಗಿದ್ದು, ವಿರಾಟ್ ಕೊಹ್ಲಿ ಅವರ ನಾಯಕತ್ವದ ಅಡಿಯಲ್ಲಿ ಆಡುತ್ತಿದ್ದಾರೆ.
ಮೈದಾನದ ಘಟನೆ!
ನವೆಂಬರ್ 15 ರಂದು ನಡೆದ 5ನೇ ಏಕದಿನ ಪಂದ್ಯದಲ್ಲಿ, ಬೌಲಿಂಗ್ ಬದಲಾವಣೆ ಕುರಿತು ಕೊಹ್ಲಿ ನೀಡಲು ಬಂದ ಸಲಹೆಯನ್ನು ನಾಯಕ ಅಯ್ಯರ್ ಕೇಳಿಸಿಕೊಳ್ಳದೆ ನಡೆದುಕೊಂಡು ಹೋದರು. ಐಪಿಎಲ್ನಲ್ಲಿ ಆರ್ಸಿಬಿ ವಿರುದ್ಧದ ಸೋಲು ಹಾಗೂ ಕೊಹ್ಲಿಯ ಆಕ್ರಮಣಕಾರಿ ಸಂಭ್ರಮಾಚರಣೆ ಸೇಡನ್ನು ಅಯ್ಯರ್ ಈಗ ಭಾರತ ತಂಡದ ನಾಯಕನಾಗಿ ತೀರಿಸಿಕೊಂಡಿದ್ದಾರೆ" ಎಂದು ನೆಟ್ಟಿಗರು ಮತ್ತು ಕೆಲವು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.














