2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಶಿಖರ್ ಧವನ್ ರಾಯಭಾರಿಯಾಗಿದ್ದಾರೆ. ದುಬೈನಲ್ಲಿ ಭಾರತ-ಬಾಂಗ್ಲಾದೇಶ ಪಂದ್ಯ ವೀಕ್ಷಿಸುವಾಗ, ಧವನ್ ಅವರು ಐರ್ಲೆಂಡ್‌ನ ಸೋಫಿ ಶೈನ್ ಜೊತೆ ಕಾಣಿಸಿಕೊಂಡಿದ್ದು, ಡೇಟಿಂಗ್ ವದಂತಿಗಳಿಗೆ ಕಾರಣವಾಗಿದೆ. ಈ ಹಿಂದೆ ಆಯೇಷಾ ಮುಖರ್ಜಿಯೊಂದಿಗೆ ವಿಚ್ಛೇದನ ಪಡೆದಿದ್ದರು. ಧವನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ ಆಟಗಾರರಾಗಿದ್ದಾರೆ.

ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, ಭಾರತ ತನ್ನ ಪಾಲಿನ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಇನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ತಾನಾಡಿದ ಮೊದಲ ಪಂದ್ಯದಲ್ಲೇ ಬಾಂಗ್ಲಾದೇಶವನ್ನು ಅನಾಯಾಸವಾಗಿ ಬಗ್ಗುಬಡಿದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇನ್ನು ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಮಿಸ್ಟರಿ ಲೇಡಿ ಜತೆ ಕಾಣಿಸಿಕೊಂಡು ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು, ಶಿಖರ್ ಧವನ್ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ದುಬೈನಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯವನ್ನು ಶಿಖರ್ ಧವನ್ ಸ್ಟೇಡಿಯಂನಿಂದಲೇ ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಶಿಖರ್ ಧವನ್ ಪಕ್ಕದಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ವಿದೇಶಿ ಮಿಸ್ಟರಿ ಲೇಡಿಯನ್ನು ಶಿಖರ್ ಧವನ್ ಕದ್ದುಮುಚ್ಚಿ ನೋಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಶಿಖರ್ ಧವನ್, ಈ ವಿದೇಶಿ ಮಿಸ್ಟರಿ ಲೇಡಿ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

ರಣಜಿ ಟ್ರೋಫಿಯಲ್ಲಿ ನಾಟಕೀಯ ಜಯ: ಐತಿಹಾಸಿಕ ಫೈನಲ್‌ಗೆ ಕೇರಳ ಮೊದಲ ಸಲ ಲಗ್ಗೆ!

Scroll to load tweet…

ಹಲವು ಮಾಧ್ಯಮ ವರದಿಗಳ ಪ್ರಕಾರ ಈ ಮಿಸ್ಟರಿ ಲೇಡಿ ಬೇರ್ಯಾರು ಅಲ್ಲ, ಐರ್ಲೆಂಡ್ ಮೂಲದ ಸೋಫಿ ಶೈನ್ ಎಂದು ಗುರುತಿಸಿರುವುದಾಗಿ ವರದಿ ಮಾಡಿವೆ. ಶಿಖರ್ ಧವನ್ ಹಾಗೂ ಸೋಫಿ ಶೈನ್ ಇಬ್ಬರು ಡೇಟಿಂಗ್ ನಡೆಸುತ್ತಿರುವುದರ ಕುರಿತಂತೆ ಯಾರೊಬ್ಬರು ಖಚಿತಪಡಿಸಿಲ್ಲ. ಆದರೆ ಶಿಖರ್ ಧವನ್ ಈ ಸೋಫಿ ಶೈನ್ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿರುವುದು ಗುಸು ಗುಸು ಚರ್ಚೆಗೆ ಕಾರಣವಾಗಿದೆ.

Scroll to load tweet…

ಆಯೆಷಾ ಮುಖರ್ಜಿಯಿಂದ ಡಿವೋರ್ಸ್ ಪಡೆದಿರುವ ಧವನ್:

ಶಿಖರ್ ಧವನ್ ಈಗಾಗಲೇ ಭಾರತೀಯ ಮೂಲದ ಆಸ್ಟ್ರೇಲಿಯಾ ನಿವಾಸಿ ಆಯೆಷಾ ಮುಖರ್ಜಿ ಅವರಿಂದ ವಿಚ್ಛೇದನಾ ಪಡೆದುಕೊಂಡಿದ್ದಾರೆ. ಶಿಖರ್ ಧವನ್ ಹಾಗೂ ಆಯೆಷಾ ಮುಖರ್ಜಿ ಇಬ್ಬರಿಗೆ ಜ್ವರಾವರ್ ಎನ್ನುವ ಮಗನಿದ್ದಾನೆ. ಡಿವೋರ್ಸ್ ಬಳಿಕ ಆಯೆಷಾ ಮುಖರ್ಜಿ ತಮ್ಮ ಮಗನನ್ನು ಆಸ್ಟ್ರೇಲಿಯಾಗೆ ಕರೆದೊಯ್ದಿದ್ದಾರೆ. ಆಗಾಗ ಶಿಖರ್ ಧವನ್ ತಮ್ಮ ಮಗನನ್ನು ನೆನಪಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕುತ್ತಾ ಇರುತ್ತಾರೆ.

ಮುಂಬೈ ವಿರುದ್ಧ ಆರ್‌ಸಿಬಿಗೆ ತವರಲ್ಲೇ ಶಾಕ್‌; ಮಂಧನಾ ಪಡೆಗೆ ಹ್ಯಾಟ್ರಿಕ್ ಕನಸು ಭಗ್ನ!

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಭಾರತದ ಧವನ್‌ ರಾಯಭಾರಿ

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ನಾಲ್ವರು ರಾಯಭಾರಿಗಳನ್ನು ಐಸಿಸಿ ನೇಮಕ ಮಾಡಿದ್ದು, ಇದರಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಶಿಖರ್‌ ಧವನ್ ಕೂಡ ಇದ್ದಾರೆ. ಧವನ್ ಹೊರತು ಪಡಿಸಿ 2017ರ ಚಾಂಪಿಯನ್ಸ್‌ ಟ್ರೋಫಿ ವಿಜೇತ ಪಾಕ್ ತಂಡದ ನಾಯಕ ಸರ್ಫರಾಜ್‌ ಅಹ್ಮದ್‌, ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್‌ ಶೇನ್‌ ವ್ಯಾಟ್ಸನ್‌, ನ್ಯೂಜಿಲೆಂಡ್‌ ವೇಗಿ ಟಿಮ್ ಸೌಥಿ ಕೂಡ ರಾಯಭಾರಿಯಾಗಿರಲಿದ್ದಾರೆ.

ಈ ಬಗ್ಗೆ ಧವನ್ ಪ್ರತಿಕ್ರಿಯಿಸಿದ್ದು, ‘ಚಾಂಪಿಯನ್ಸ್‌ ಟ್ರೋಫಿಯ ಭಾಗವಾಗಿರುವುದು ವಿಶೇಷ ಅನುಭವ, ರಾಯಭಾರಿಯಾಗುವ ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆಯಿದೆ’ ಎಂದಿದ್ದಾರೆ. ಧವನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತದ ಗರಿಷ್ಠ ರನ್‌ ಸರದಾರ ಎನಿಸಿಕೊಂಡಿದ್ದು, 2 ಆವೃತ್ತಿಗಳಲ್ಲಿ 701 ರನ್‌ ಗಳಿಸಿದ್ದಾರೆ.