ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳಿಂದ ಸೋತಿದೆ. ಆರ್‌ಸಿಬಿ 20 ಓವರ್‌ಗಳಲ್ಲಿ 167 ರನ್ ಗಳಿಸಿತು, ಪೆರ್ರಿ 81 ರನ್ ಗಳಿಸಿದರು. ಮುಂಬೈ 19.5 ಓವರ್‌ಗಳಲ್ಲಿ 170 ರನ್ ಗಳಿಸಿ ಜಯ ಸಾಧಿಸಿತು, ಹರ್ಮನ್‌ಪ್ರೀತ್ 50 ರನ್ ಗಳಿಸಿದರು. ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮುಂಬೈ 3 ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿದೆ.

ಬೆಂಗಳೂರು: ಹಾಲಿ ಚಾಂಪಿಯನ್‌ ಆರ್‌ಸಿಬಿಯ 3ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನಗೊಂಡಿದೆ. ಶುಕ್ರವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ 4 ವಿಕೆಟ್‌ ಸೋಲನುಭವಿಸಿತು. ಇದರ ಹೊರತಾಗಿಯೂ 3 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ 4 ಅಂಕ ಸಂಪಾದಿಸಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಬಾಕಿಯಾಗಿದೆ. ಮುಂಬೈ 3 ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿತು.

ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 167 ರನ್‌ ಕಲೆಹಾಕಿತು. ಸ್ಮೃತಿ ಮಂಧನಾ(13 ಎಸೆತಕ್ಕೆ 26) ಸ್ಫೋಟಕ ಆರಂಭ ಒದಗಿಸಿ ಔಟಾದ ಬಳಿಕ, ಎಲೈಸ್‌ ಪೆರ್ರಿ ಮುಂಬೈ ಬೌಲರ್‌ಗಳನ್ನು ಚೆಂಡಾಡಿದರು. ಅವರು 43 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 81 ರನ್‌ ಸಿಡಿಸಿ, 20ನೇ ಓವರ್‌ನ 5ನೇ ಎಸೆತದಲ್ಲಿ ಔಟಾದರು. ರಿಚಾ ಘೋಷ್‌ 28 ರನ್‌ ಕೊಡುಗೆ ನೀಡಿದರು.

Scroll to load tweet…

2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆದ ಗಾಯದ ಬಳಿಕ ಅನುಭವಿಸಿದ ಆತಂಕ ಬಿಚ್ಚಿಟ್ಟ ಮೊಹಮ್ಮದ್ ಶಮಿ

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈ 19.5 ಓವರಲ್ಲಿ ಜಯಗಳಿಸಿತು. ನ್ಯಾಟ್‌ ಶೀವರ್‌ ಬ್ರಂಟ್‌ 21 ಎಸೆತಗಳಲ್ಲಿ 42, ಹರ್ಮನ್‌ಪ್ರೀತ್‌ ಕೌರ್‌ 38 ಎಸೆತಗಳಲ್ಲಿ 50 ರನ್‌ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕೊನೆಯಲ್ಲಿ ಅಮನ್‌ಜೋತ್‌ ಕೌರ್‌(34) ತಂಡವನ್ನು ಗೆಲ್ಲಿಸಿದರು.

ಸ್ಕೋರ್‌: ಆರ್‌ಸಿಬಿ 20 ಓವರಲ್ಲಿ 167/7 (ಪೆರ್ರಿ 81, ರಿಚಾ 28, ಸ್ಮೃತಿ 26, ಅಮನ್‌ಜೋತ್‌ 3-22), ಮುಂಬೈ 19.5 ಓವರಲ್ಲಿ 170/6 (ಹರ್ಮನ್‌ಪ್ರೀತ್‌ 50, ಶೀವರ್‌ 42, ವೇರ್‌ಹ್ಯಾಮ್‌ 3-21)