ಕ್ರಿಕೆಟಿಗ ಶಿಖರ್ ಧವನ್ ಹೊಸ ಪ್ರೀತಿ ಖಚಿತಪಡಿಸಿದ್ದಾರೆ. ವಿಚ್ಚೇದನ ನೋವಿನಿಂದ ಹೊರಬಂದಿರುವ ಶಿಖರ್ ಧವನ್ ಇದೀಗ ಪ್ರೀತಿಯಲ್ಲಿ ಬಿದ್ದಿರುವುದಾಗಿ ಹೇಳಿದ್ದಾರೆ. ಧವನ್ ಮನಸ್ಸು ಕದ್ದು ಹುಡುಗಿ ಯಾರು? 

ನವದೆಹಲಿ(ಏ.03) ಕ್ರಿಕೆಟಿಗ ಶಿಖರ್ ಧವನ್ ವಿಚ್ಚೇದನ ಕರಿಯರ್ ಮೇಲೂ ಪರಿಣಾಮ ಬೀರಿತ್ತು ಅನ್ನೋದು ಸುಳ್ಳಲ್ಲ. ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದ ಧವನ್‌ಗೆ ಆಯೇಷಾ ಮುಖರ್ಜಿ ಜೊತೆಗಿನ ಕಲಹ, ವಿಚ್ಚೇದನ ತೀವ್ರವಾಗಿ ಹೊಡೆತ ನೀಡಿತ್ತು. ಧವನ್ ಮಾಸಿಕವಾಗಿ ಕುಗ್ಗಿ ಹೋಗಿದ್ದರು. ಮಗನನ್ನು ನೋಡಲಾಗದ ಪರಿಸ್ಥಿತಿಯಿಂದ ಕೊರಗಿದ್ದರು. ಜೀವನದ ಅತೀದೊಡ್ಡ ಸವಾಲಿನ ಘಟ್ಟ ದಾಟಿ ಬಂದಿರುವ ಶಿಖರ್ ಧವನ್ ಇದೀಗ ಮತ್ತೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಖಚಿತಪಡಿಸಿದ್ದಾರೆ. 

ಧವನ್ ಪ್ರೀತಿ ಯಾರ ಜೊತೆಗೆ? 
ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ಶಿಖರ್ ಧವನ್ ಮಿಸ್ಟ್ರಿ ಹುಡುಗಿ ಜೊತೆ ಕಾಣಿಸಿಕೊಂಡಿದ್ದರು. ಸೋಫಿ ಶೈನ್ ಜೊತೆ ಪಂದ್ಯ ವೀಕ್ಷಿಸಿದ್ದ ಶಿಖರ್ ಧವನ್ ಭಾರಿ ಸದ್ದು ಮಾಡಿದ್ದರು. ಶಿಖರ್ ಧವನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಗಾಳಿ ಸುದ್ದಿಗಳನ್ನು ಈ ಜೋಡಿ ನಿರಾಕರಿಸಿಲ್ಲ. ಜೊತೆಗೆ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ. ಸದ್ಯ ಶಿಖರ್ ಧವನ್ ಟೈಮ್ಸ್ ಸಮ್ಮಿಟ್ 2025ರಲ್ಲಿ ಮಾತಾಡಿದ ಶಿಖರ್ ಧವನ್ ತಮ್ಮ ಪ್ರೀತಿ ಕುರಿತು ಹಂಚಿಕೊಂಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿ: ಕಣ್ಣಲ್ಲೇ ತುಂಟಾಟ ಆಡಿದ ಗಬ್ಬರ್‌ ಸಿಂಗ್! ಈಕೆಯೇ ನೋಡಿ ಶಿಖರ್ ಧವನ್ ಹೊಸ ಗರ್ಲ್‌ಫ್ರೆಂಡ್!

ನನ್ನ ಕೋಣೆಯಲ್ಲಿರುವ ಸುಂದರ ಯುವತಿ ನನ್ನ ಗರ್ಲ್‌ಫ್ರೆಂಡ್
ಶಿಖರ್ ಧವನ್ ತಮ್ಮ ಮೊದಲ ಮದುವೆ ಹಾಗೂ ವೈವಾಹಿಕ ಜೀವನ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಹೊಸ ಬದುಕಿನ ಕುರಿತೂ ಹೇಳಿದ್ದಾರೆ. ನಾನು ಹಲವು ಪಾಠಗಳನ್ನು ಕಲಿತುಕೊಂಡೆ. ವಿಚ್ಚೇದನ ನನ್ನನ್ನು ಬದಲಿಸಿತು. ಈ ಕೆಟ್ಟ ಸವಾಲಿನಿಂದ ನಾನು ಹೊರಬಂದಿದ್ದೇನೆ ಎಂದಿದ್ದಾರೆ. ಪ್ರೀತಿಯಲ್ಲಿ ನಾನು ಅನ್‌ಲಕ್ಕಿ ಅಲ್ಲ. ಆದರೆ ನನ್ನ ಆಯ್ಕೆ ಸರಿಯಾಗಿರಲಿಲ್ಲ. ನಾನು ಯಾವತ್ತೂ ಪ್ರೀತಿಯಲ್ಲಿರುತ್ತೇನೆ ಎಂದು ಧವನ್ ಹೇಳಿದ್ದಾರೆ. ನಾನು ಪ್ರೀತಿಯಲ್ಲಿದ್ದೇನೆ. ನನ್ನ ಕೋಣೆಯಲ್ಲಿರುವ ಸುಂದರ ಯುವತಿ ಎಂದರೆ ಅದು ನನ್ನ ಗರ್ಲ್‌ಫ್ರೆಂಡ್. ಯಾರು ಅನ್ನೋದನ್ನು ನೀವು ಊಹಿಸಿ ಎಂದು ಶಿಖರ್ ಧವನ್ ಹೇಳಿದ್ದಾರೆ.

Scroll to load tweet…

ಹೆಸರು ಹೇಳದ ಧವನ್
ಶಿಖರ್ ಧವನ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋದು ಖಚಿತವಾಗಿದೆ. ಆದರೆ ಯಾರು ಅನ್ನೋದು ಬಹಿರಂಗವಾಗಿಲ್ಲ. ಧವನ್ ಈ ಮಾತುಗಳನ್ನಾಡುತ್ತಿದ್ದಂತೆ ಸೋಫಿ ಶೈನ್ ಎಂದು ಹಲವರು ಉತ್ತರಿಸಿದ್ದಾರೆ. ಆದರೆ ಈ ಕುರಿತು ಯಾವುದೇ ಸ್ಪಷ್ಟನೆಯನ್ನು ಧವನ್ ಅಥವಾ ಸೋಫಿ ಶೈನ್ ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಈ ಜೋಡಿ ಪ್ರೀತಿಯಲ್ಲಿದೆ ಎಂದು ಹೇಳುತ್ತಿದೆ.

ಯಾರು ಸೋಫಿ ಶೈನ್?
ಸೋಫಿ ಶೈನ್ ಪ್ರೊಡಕ್ಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಇತರ ಕ್ರೀಡೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸೋಫಿ ಶೈನ್ ಕೆಲಸ ಮಾಡುತ್ತಿದ್ದಾರೆ. ಮೂಲತಃ ಐರ್ಲೆಂಡ್‌ನವರಾಗಿರುವ ಸೋಫಿ ಶೈನ್ ಧವನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾಹಿತಿಗಳು ಕೆಲ ದಿನಗಳಿಂದ ಕೇಳಿಬರುತ್ತಿದೆ. ಆದರೆ ಯಾವುದೂ ಸ್ಪಷ್ಟವಾಗಿಲ್ಲ.

ಆಯೇಷಾ ಮುಖರ್ಜಿಯಿಂದ ಕುಗ್ಗಿದ ಶಿಖರ್
ಭಾರತೀಯ ಮೂಲಕ ಕಿಕ್‌ಬಾಕ್ಸ್ ಆಯೇಷಾ ಮುಖರ್ಜಿ ಜೊತೆ ಪ್ರೀತಿಯಲ್ಲಿ ಬಿದ್ದ ಶಿಖರ್ ಧವನ್ 2008ರಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. 2012ರಲ್ಲಿ ಮದುವೆಯಾಗಿದ್ದರು. ಆಯೇಷಾ ಮುಖರ್ಜಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಡಿವೋರ್ಸ್ ಪಡೆದಿದ್ದ ಆಯೇಷಾ ಮುಖರ್ಜಿ ಶಿಖರ್ ಧವನ್ ಜೊತೆ ಪ್ರೀತಿಯಲ್ಲಿ ತೊಡಗಿಸಿಕೊಂಡಿದ್ದರು. ತನಗಿಂತ 12 ವರ್ಷ ದೊಡ್ಡವಳ ಮದುವೆಯಾದ ಶಿಖರ್ ಧವನ್ 2016ರಲಲಿ ಜೋರಾವರ್ ತಂದೆಯಾಗಿದ್ದರು. ಆದರೆ ಆಯೇಷಾ ಮುಖರ್ಜಿ ಕಿರುಕುಳಕ್ಕೆ ಶಿಖರ್ ಧವನ್ ಕುಗ್ಗಿ ಹೋಗಿದ್ದರು. 2021ರಲ್ಲಿ ಬೇರೆಯಾದರೂ 2023ರಲ್ಲಿ ಧವನ್‌ಗೆ ಡಿವೋರ್ಸ್ ಸಿಕ್ಕಿತ್ತು. ಆಯೇಷಾ ಮುಖರ್ಜಿಯ ಕಿರುಕುಗಳಕ್ಕೆ ಸಾಕ್ಷ್ಯಗಳು ಲಭ್ಯವಾಗಿತ್ತು. ಹೀಗಾಗಿ ಈ ಕೇಸ್ ಧವನ್ ಪರವಾಗಿ ತೀರ್ಪು ಬಂದಿತ್ತು. ಆದರೆ ಪುತ್ರ ಜೋರಾವರ್‌ನಿಂದ ದೂರವಾಗಬೇಕಾಯಿತು.

ಗೇಲ್‌ನಿಂದ ಕೊಹ್ಲಿವರೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಧೂಳೆಬ್ಬಿಸಿದ ಟಾಪ್ 10 ಬ್ಯಾಟ್ಸ್‌ಮನ್‌ಗಳು