Asianet Suvarna News Asianet Suvarna News

Sexting Scandal: ಆಸೀಸ್‌ ಟೆಸ್ಟ್ ನಾಯಕತ್ವಕ್ಕೆ ಟಿಮ್ ಪೈನ್‌ ದಿಢೀರ್ ರಾಜೀನಾಮೆ..!

* ಆ್ಯಷಸ್‌ ಸರಣಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಟಿಮ್‌ ಪೈನ್ ನಾಯಕತ್ವಕ್ಕೆ ಗುಡ್‌ಬೈ

* ಮಹಿಳಾ ಸಿಬ್ಬಂದಿಗೆ ಪೈನ್‌ ಅಶ್ಲೀಲ ಚಿತ್ರ ಕಳಿಸಿದ್ದ ಆರೋಪ

* 2018ರಲ್ಲಿ ಪೈನ್‌ ಟೆಸ್ಟ್‌ ತಂಡದ ನಾಯಕತ್ವ ವಹಿಸಿಕೊಂಡಿದ್ದರು.

Sexting Scandal Tim Paine steps down as Australia Test captain following off field scandal kvn
Author
Bengaluru, First Published Nov 20, 2021, 2:06 PM IST

ಹೋಬರ್ಟ್(ನ.20)‌: ಮಹಿಳಾ ಸಿಬ್ಬಂದಿಗೆ ಅಶ್ಲೀಲ ಫೋಟೋ ಹಾಗೂ ಸಂದೇಶ ಕಳುಹಿಸಿದ (Sexting Scandal) ಪ್ರಕರಣದ ಬಗ್ಗೆ ಕ್ರಿಕೆಟ್‌ ಆಸ್ಪ್ರೇಲಿಯಾ (Cricket Australia) ತನಿಖೆ ಚುರುಕುಗೊಳಿಸಿದ ಹಿನ್ನೆಲೆಯಲ್ಲಿ ಆಸ್ಪ್ರೇಲಿಯಾ ಟೆಸ್ಟ್‌ ತಂಡದ (Australia Cricket Team) ನಾಯಕತ್ವಕ್ಕೆ ಟಿಮ್‌ ಪೈನ್‌ ರಾಜೀನಾಮೆ ನೀಡಿದ್ದಾರೆ. ‘ನಾಯಕತ್ವ ತೊರೆಯುವ ನನ್ನ ನಿರ್ಧಾರ ಪ್ರಕಟಿಸುತ್ತಿದ್ದೇನೆ. ಇದು ಕಠಿಣ ನಿರ್ಧಾರ. ಆದರೆ ನನಗೆ, ಕುಟುಂಬಕ್ಕೆ ಮತ್ತು ಕ್ರಿಕೆಟ್‌ ದೃಷ್ಟಿಯಿಂದ ಸರಿಯಾದ ನಿರ್ಣಯ’ ಎಂದು ಶುಕ್ರವಾರ ಪೈನ್‌ ತಿಳಿಸಿದ್ದಾರೆ.

ಕ್ರೀಡೆಗೆ ನನ್ನಿಂದ ಯಾವುದೇ ರೀತಿಯಾದ ಧಕ್ಕೆಯಾಗಿದ್ದರೇ ಅದಕ್ಕೆ ನನ್ನಿಂದ ಕ್ಷಮೆಯಾಚಿಸುತ್ತೇನೆ ಎಂದು ಕಣ್ಣೀರಿಡುತ್ತಲೇ ಟಿಮ್‌ ಪೈನ್ (Tim Paine) ನಾಯಕತ್ವದಿಂದ ಕೆಳಗಿಳಿಯುತ್ತಿರುವುದಾಗಿ 36 ವರ್ಷದ ವಿಕೆಟ್‌ ಕೀಪರ್‌ ಘೋಷಿಸಿದ್ದಾರೆ. ಟಿಮ್ ಪೈನ್ 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ಆಸ್ಟ್ರೇಲಿಯಾ ಪರ 35 ಟೆಸ್ಟ್ ಪಂದ್ಯಗಳನ್ನಾಡಿ 1,534 ರನ್ ಬಾರಿಸಿದ್ದಾರೆ. ವಿಕೆಟ್ ಹಿಂದೆ ನಿಂತು 157 ಬಲಿ ಪಡೆದಿದ್ದಾರೆ. 

Australian Legendary Cricketer ರಿಕಿ ಪಾಂಟಿಂಗ್ ಟೀಂ ಇಂಡಿಯಾ ಹೆಡ್‌ ಕೋಚ್ ಹುದ್ದೆ ಅಫರ್‌ ನಿರಾಕರಿಸಿದ್ದೇಕೆ..?

2017ರಲ್ಲಿ ಟ್ಯಾಸ್ಮೇನಿಯಾ ಕ್ರಿಕೆಟ್‌ನ ಮಹಿಳಾ ಸಿಬ್ಬಂದಿಗೆ ಪೈನ್‌ ಅಶ್ಲೀಲ ಚಿತ್ರ ಹಾಗೂ ಸಂದೇಶ ಕಳುಹಿಸಿದ್ದರು ಎಂದು ಆರೋಪಿಸಲಾಗಿತ್ತು. ಆ ಸಂದರ್ಭದಲ್ಲಿ ನಡೆದಿದ್ದ ಕ್ರಿಕೆಟ್‌ ಆಸ್ಪ್ರೇಲಿಯಾ ಮತ್ತು ಕ್ರಿಕೆಟ್‌ ಟ್ಯಾಸ್ಮೇನಿಯಾ ಜಂಟಿ ತನಿಖೆಯಲ್ಲಿ ಪೈನ್‌ಗೆ ಕ್ಲೀನ್‌ ಚಿಟ್‌ ನೀಡಲಾಗಿತ್ತು. 2018ರಲ್ಲಿ ಪೈನ್‌ ಟೆಸ್ಟ್‌ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ಇದೀಗ ಇದಕ್ಕಿದ್ದಂತೆ ಪ್ರಕರಣವನ್ನು ಮತ್ತೆ ತೆರೆದಿರುವ ಕ್ರಿಕೆಟ್‌ ಆಸ್ಪ್ರೇಲಿಯಾ ತನಿಖೆ ಚುರುಕುಗೊಳಿಸುವುದಾಗಿ ತಿಳಿಸಿದೆ. ಕ್ರಿಕೆಟ್‌ ಮಂಡಳಿ ನಾಯಕತ್ವದಿಂದ ಕಿತ್ತೊಗೆಯುವ ಮೊದಲು ಸ್ವತಃ ಪೈನ್‌ ನಾಯಕತ್ವ ಬಿಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

Emirates T20 League: ಟೂರ್ನಿಯಲ್ಲಿ ತಂಡ ಖರೀದಿಸಲು ಶಾರುಖ್, ಅಂಬಾನಿ ಆಸಕ್ತಿ..!

ಆ್ಯಷಸ್‌ ಸರಣಿಗೆ (Ashes Test Series) ಕೆಲವೇ ದಿನಗಳು ಬಾಕಿ ಇರುವಾಗಲೇ ಟಿಮ್‌ ಪೈನ್ ನಾಯಕತ್ವದಿಂದ ಕೆಳಗಿಳಿದಿರುವುದು ಆಸೀಸ್ ಪಾಲಿಗೆ ದೊಡ್ಡ ಹಿನ್ನೆಡೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 8ರಿಂದ ಆರಂಭಗೊಳ್ಳುವ ಪ್ರತಿಷ್ಠಿತ ಆ್ಯಷಸ್‌ ಸರಣಿಗೆ ಕೆಲ ದಿನಗಳ ಹಿಂದಷ್ಟೇ ತಂಡ ಪ್ರಕಟಿಸಲಾಗಿತ್ತು. ಪೈನ್‌ ನಾಯಕರಾಗಿದ್ದರು. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಟಿಮ್ ಪೈನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಹೊಸ ನಾಯಕನ ಹುಡುಕಾಟದಲ್ಲಿದೆ. ವೇಗಿ ಪ್ಯಾಟ್‌ ಕಮಿನ್ಸ್‌ ನೂತನ ನಾಯಕರಾಗಿ ನೇಮಕಗೊಳ್ಳುವ ಸಾದ್ಯತೆ ಇದೆ. 

IND vs NZ: ಡಗೌಟ್‌ನಲ್ಲಿ ಕುಳಿತಿದ್ದ ಮೊಹಮ್ಮದ್ ಸಿರಾಜ್ ತಲೆಗೆ ಹೊಡೆದ ರೋಹಿತ್ ಶರ್ಮಾ, ವಿಡಿಯೋ ವೈರಲ್!

ಈ ಪ್ರಮಾದ ಹೊರತುಪಡಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಅವರನ್ನು ನಾಯಕರಾಗಿ ಆಯ್ಕೆ ಮಾಡಿದ ಬಳಿಕ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಟಿಮ್ ಪೈನ್ ನಾಯಕತ್ವದಿಂದ ಕೆಳಗಿಳಿದಿದ್ದರೂ ಸಹಾ ಆ್ಯಷಸ್ ಸರಣಿಯಲ್ಲಿ ತಂಡದ ಆಯ್ಕೆಗೆ ಲಭ್ಯವಿರಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ರಿಚರ್ಡ್‌ ಪ್ರದಸ್ಟ್ರನ್‌ ತಿಳಿಸಿದ್ದಾರೆ. 

ಈ ಮೊದಲು 2018ರಲ್ಲಿ ಚೆಂಡು ವಿರೂಪಗೊಳಿಸಿದ ವಿವಾದದ ಬಳಿಕ ಸ್ವೀವ್‌ ಸ್ಮಿತ್‌ (Steve Smith) ಟೆಸ್ಟ್‌ ನಾಯಕತ್ವದಿಂದ ಕೆಳಗಿಳಿದಿದ್ದರು. ಇದರೊಂದಿಗೆ ಆಸೀಸ್‌ನ ಕೊನೆಯ ಇಬ್ಬರು ಟೆಸ್ಟ್‌ ನಾಯಕರ ಅವಧಿ ವಿವಾದದಲ್ಲೇ ಕೊನೆಗೊಂಡಂತಾಗಿದೆ. ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಿ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೋನ್ ಬೆನ್‌ಕ್ರಾಪ್ಟ್ ನಿಷೇಧಕ್ಕೆ ಗುರಿಯಾಗಿದ್ದರು.

Follow Us:
Download App:
  • android
  • ios