Asianet Suvarna News Asianet Suvarna News

IND vs NZ: ಡಗೌಟ್‌ನಲ್ಲಿ ಕುಳಿತಿದ್ದ ಮೊಹಮ್ಮದ್ ಸಿರಾಜ್ ತಲೆಗೆ ಹೊಡೆದ ರೋಹಿತ್ ಶರ್ಮಾ, ವಿಡಿಯೋ ವೈರಲ್!

  • ಮೊಹಮ್ಮದ್ ಸಿರಾಜ್‌ಗೆ ಕಪಾಳಮೋಕ್ಷ ಮಾಡಿದ ರೋಹಿತ್ ಶರ್ಮಾ
  • ತಲೆಗೆ ಹೊಡೆದ ವಿಡಿಯೋ ಫನ್ನಿ ವಿಡಿಯೋ ವೈರಲ್
  • ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2 ಪಂದ್ಯದಲ್ಲಿ ಘಟನೆ
     
IND vs NZ 2nd T20 Rohit sharma slap Mohammed Siraj back of his head in Dugout funny video goes viral ckm
Author
Bengaluru, First Published Nov 20, 2021, 4:02 AM IST

ರಾಂಚಿ(ನ.20): ನ್ಯೂಜಿಲೆಂಡ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕೈವಶ ಮಾಡಿದೆ. ಈ ಪಂದ್ಯದ ನಡುವೆ ನಾಯಕ ರೋಹಿತ್ ಶರ್ಮಾ(Rohit sharma) ಡಗೌಟ್‌ನಲ್ಲಿ ಕುಳಿತಿದ್ದ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ತಲೆಗೆ ಹೊಡೆದ ವಿಡಿಯೋ ವೈರಲ್ ಆಗಿದೆ.

ನ್ಯೂಜಿಲೆಂಡ್(New zealand) ತಂಡ 154 ರನ್ ಟಾರ್ಗೆಟ್ ನೀಡಿತ್ತು. ಈ ಗುರಿ ಚೇಸ್ ಮಾಡಿದ ಟೀಂ ಇಂಡಿಯಾಗೆ(Team India) ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್(KL Rahul) ಉತ್ತಮ ಆರಂಭ ನೀಡಿದರು. ಕೆಎಎಲ್ ರಾಹುಲ್ 65 ರನ್ ಸಿಡಿಸಿದರೆ, ರೋಹಿತ್ 55 ರನ್ ಸಿಡಿಸಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ನಿರಾಯಾಸವಾಗಿ ಪಂದ್ಯ ಗೆದ್ದುಕೊಂಡಿತು. ಆದರೆ ಔಟಾಗಿ ಪೆವಿಲಿಯನ್ ಸೇರಿಕೊಂಡ ಇಬ್ಬರು ಬ್ಯಾಟ್ಸ್‌ಮನ್, ಪಕ್ಕದಲ್ಲೇ ಕುಳಿತಿದ್ದ ವೇಗಿ ಮೊಹಮ್ಮದ್ ಸಿರಾಜ್ ಜೊತೆ ಸಂವಾದ ನಡೆಸಿದ್ದಾರೆ. ವೇಳೆ ಸಿರಾಜ್ ಜೋಕ್ ಹೇಳಿದ್ದಾರೆ. ತಕ್ಷಣ ರಾಹುಲ್ ಸಿರಾಜ್ ಮುಖನೋಡಿದರೆ, ಇತ್ತ ಹಿಂಬದಿಯಲ್ಲಿ ಕುಳಿತಿದ್ದ ರೋಹಿತ್ ಶರ್ಮಾ, ಸಿರಾಜ್ ತಲೆಗೆ ಹೊಡೆದಿದ್ದಾರೆ. 

IND vs NZ T20:ಕಿವೀಸ್ ವಿರುದ್ಧ ಭಾರತಕ್ಕೆ 7 ವಿಕೆಟ್ ಗೆಲುವು, ಸರಣಿ ಗೆದ್ದ ರೋಹಿತ್ ಸೈನ್ಯ!

ರೋಹಿತ್ ಶರ್ಮಾ ಹೊಡೆದ ಬೆನ್ನಲ್ಲೇ ಸಿರಾಜ್ ನಕ್ಕಿದ್ದಾರೆ. ಈ ಮೂಲಕ ಇದು ಜೋಕ್ ಎಂದು ಸಾಬೀತಾಗಿದೆ. ಆದರೆ ರೋಹಿತ್ ಶರ್ಮಾ ತೆಲೆಗೆ ಹೊಡೆಯುವ ವಿಡಿಯೋ ವೈರಲ್ ಆಗಿದೆ. ಮತ್ತೊಂದು ಕಪಾಳಮೋಕ್ಷ ಪ್ರಕರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಫನ್ನಿ ಟ್ವೀಟ್ ವ್ಯಕ್ತವಾಗಿದೆ.

 

ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಿಂದ ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಲಾಗಿತ್ತು. ಸಿರಾಜ್ ಬದಲು ಹರ್ಷಲ್ ಪಟೇಲ್ ಸ್ಥಾನ ಪಡೆದುಕೊಂಡಿದ್ದರು. 30ರ ಹರೆಯಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಹರ್ಷಲ್ ಪಟೇಲ್ ಪ್ರಮುಖ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಲ್ಲಿ ಕೈಶ ಮಾಡಿದೆ. ಮೊದಲ ಪಂದ್ಯದಲ್ಲಿ ಭಾರತ 5 ವಿಕೆಟ್ ಗೆಲುವು ಸಾಧಿಸಿದ್ದರೆ, ಎರಡನೇ ಪಂದ್ಯದಲ್ಲಿ 7 ವಿಕೆಟ್ ಗೆಲುವು ಕಂಡಿದೆ. ಇದೀಗ ಅಂತಿಮ ಪಂದ್ಯದಲ್ಲಿ ಗೆದ್ದ ಕ್ಲೀನ್ ಸ್ಪೀಪ್ ಮಾಡಲು ತುದಿಗಾಲಿಲ್ಲಿ ನಿಂತಿದೆ. ರೋಹಿತ್ ಶರ್ಮಾ ನಾಯಕತ್ವ, ನೂತನ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಮೊದಲ ಸರಣಿ ಗೆದ್ದುಕೊಂಡಿದೆ. ಈ ಮೂಲಕ ಹೊಸ ಭಾಷ್ಯ ಬರೆಯಲು ತಂಡ ಸಜ್ಜಾಗಿದೆ.

Ab De Villiers Retires: ಕಳಚಿತು ಕ್ರಿಕೆಟ್ ಕೊಂಡಿ: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಎಬಿಡಿ ಗುಡ್‌ ಬೈ..!

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ದ ಮುಗ್ಗರಿಸಿದ ಟೀಂ ಇಂಡಿಯಾ ಟೂರ್ನಿಯಲ್ಲಿ ಲೀಗ್ ಹಂತದಿಂದ ಹೊರಬಿದ್ದಿತ್ತು. ಇತ್ತ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ನಾಯಕನಾಗಿ ಟಿ20 ತಂಡ ಮುನ್ನಡೆಸಿದ್ದರು. ಆದರೆ ನಿರಾಸೆಯ ಟೂರ್ನಿಯಾಗಿ ಮಾರ್ಪಡಾಗಿತ್ತು. ನ್ಯೂಜಿಲೆಂಡ್ ಟಿ20 ಸರಣಿ ಹಾಗೂ ಆರಂಭಿಕ ಟೆಸ್ಟ್ ಪಂದ್ಯದಿಂದ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ. ಟಿ20 ಮಾದರಿಯಲ್ಲಿ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಗಿದೆ. ಇನ್ನು ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯಕ್ಕೆ ಅಜಿಂಕ್ಯ ರಹಾನೆಗೆ ನಾಯಕತ್ವ ನೀಡಲಾಗಿದೆ.

ರೋಹಿತ್ ನಾಯಕತ್ವದ ಮೊದಲ ಸರಣಿಯಲ್ಲಿ ಬಹುತೇಕ ಯಶಸ್ಸು ಸಿಕ್ಕಿದೆ. ಯುವಕರನ್ನೊಳಗೊಂಡ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದೆ.  2013ರ ಬಳಿಕ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಬಾರಿ ಭಾರಿ ನಿರೀಕ್ಷೆ ಇಡಲಾಗಿತ್ತು. ಅದು ಕೂಡ ಹುಸಿಯಾಗಿದೆ. ಇದೀಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮುಂದಿನ ಟಿ20 ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.

Follow Us:
Download App:
  • android
  • ios