Ind vs WI : ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ, ದೀಪಕ್ ಹೂಡಾ ಅಚ್ಚರಿಯ ಆಯ್ಕೆ

18 ಸದಸ್ಯರ ತಂಡಕ್ಕೆ ರೋಹಿತ್ ಶರ್ಮ ಕ್ಯಾಪ್ಟನ್, ಕೆಎಲ್ ರಾಹುಲ್ ಉಪನಾಯಕ
ನಾಯಕ ಸ್ಥಾನಕ್ಕೆ ಮರಳಿದ ರೋಹಿತ್ ಶರ್ಮ
ಅನುಭವಿ ಬೌಲರ್ ಅಶ್ವಿನ್ ಔಟ್

Senior Selection Committee has picked an 18 member squad for the upcoming ODI and T20I series against the West Indies san

ಬೆಂಗಳೂರು (ಜ. 26): ಪ್ರವಾಸಿ ವೆಸ್ಟ್ ಇಂಡೀಸ್ (West Indies)ತಂಡದ ವಿರುದ್ಧ ನಡೆಯಲಿರುವ ತಲಾ ಮೂರು ಪಂದ್ಯಗಳ ಏಕದಿನ (ODI) ಹಾಗೂ ಟಿ20 (T20) ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸಂಪೂರ್ಣವಾಗಿ ಫಿಟ್ ಆಗಿರುವ ರೋಹಿತ್ ಶರ್ಮ (Rohit Sharma) ನಾಯಕನ ಜವಾಬ್ದಾರಿಗೆ ಮರಳಿದ್ದು, ಅವರ ಅನುಪಸ್ಥಿತಿಯಲ್ಲಿ ದಕ್ಷಿಣ ಅಫ್ರಿಕಾ (South Africa) ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಿದ್ದ ಕೆಎಲ್ ರಾಹುಲ್ (KL Rahul) ಉಪನಾಯಕನ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.

18 ಸದಸ್ಯರ ತಂಡದಲ್ಲಿ ನಿರೀಕ್ಷೆಯಂತೆಯೇ ಅನುಭವಿ ಬೌಲರ್  ಆರ್. ಅಶ್ವಿನ್ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಏಕದಿನ ತಂಡಕ್ಕೆ ದೀಪಕ್ ಹೂಡಾ ಅಚ್ಚರಿಯ ಆಯ್ಕೆಯಾಗಿದ್ದರೆ, ಭುವನೇಶ್ವರ್ ಕುಮಾರ್ ಕೇವಲ ಟಿ20 ಸರಣಿಯಲ್ಲಿ ಮಾತ್ರವೇ ಆಡಲಿದ್ದಾರೆ. ತಮಿಳುನಾಡು ತಂಡ ಸ್ಫೋಟಕ ಬ್ಯಾಟ್ಸ್ ಮನ್ ಶಾರುಖ್ ಖಾನ್ ಅವರನ್ನು ಯಾವುದೇ ತಂಡಕ್ಕೆ ಪರಿಗಣನೆ ಮಾಡಲಾಗಿಲ್ಲ. ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನ ಹಾಗೂ ಟಿ20 ಎರಡೂ ಸರಣಿಯಲ್ಲಿ ಆಡಲಿದ್ದಾರೆ. ನಾಯಕತ್ವದ ಕುರಿತಾಗಿ ದೊಡ್ಡ ಮಟ್ಟದ ವಿವಾದಗಳು ನಡೆದ ಬಳಿಕ ಭಾರತೀಯ ಕ್ರಿಕೆಟ್ ನ ಶಕ್ತಿ ಕೇಂದ್ರಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಇದೇ ಮೊದಲ ಬಾರಿಗೆ ಒಟ್ಟಾಗಿ ಆಡಲಿದ್ದಾರೆ. 

ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ಕಳಪೆ ಆಟವಾಡಿದ್ದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿದ್ದು, ಸಂಪೂರ್ಣ ಹೊಸತನದಲ್ಲಿರುವ ವೇಗದ ಬೌಲಿಂಗ್ ವಿಭಾಗವನ್ನು ಆಯ್ಕೆ ಸಮಿತಿ ಪರಿಗಣನೆ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ 18 ಓವರ್ ಬೌಲಿಂಗ್ ಮಾಡಿದ್ದ ಭುವನೇಶ್ವರ್ ಕನಿಷ್ಠ 1 ವಿಕೆಟ್ ಪಡೆಯಲು ಯಶಸ್ವಿಯಾಗಿರಲಿಲ್ಲ. ಜಸ್ ಪ್ರೀತ್ ಬುಮ್ರಾ ಅವರ ಮೇಲೆ ವರ್ಕ್ ಲೋಡ್ ಹೊರೆ ಇಳಿಸುವಲ್ಲಿ ವಿಶ್ರಾಂತಿ ನೀಡಲಾಗಿದ್ದರೆ, ಮೊಹಮದ್ ಶಮಿ ಹಾಗೂ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಗೆ ಇದೇ ಕಾರಣಕ್ಕೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
 


ಕಳೆದ ಕೆಲವು ಪ್ರವಾಸಗಳ ವೇಳೆ ತಂಡದಿಂದ ಹೊರಗುಳಿದಿದ್ದ ಕುಲದೀಪ್ ಯಾದವ್ (Kuldeep Yadav) ತಂಡಕ್ಕೆ ಮರಳಲು ಯಶಸ್ವಿಯಾಗಿದ್ದರೆ, ವಾಷಿಂಗ್ಟನ್ ಸುಂದರ್ (Washington Sundar) ವಿಚಾರದಲ್ಲೂ ಇದೇ ರೀತಿಯಾಗಿದೆ. ಕೋವಿಡ್ ಪಾಸಿಟಿವ್ ಆದ ಕಾರಣದಿಂದಾಗಿ ವಾಷಿಂಗ್ಟನ್ ಸುಂದರ್ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಬಿದ್ದಿದ್ದರು. ರವಿ ಬಿಷ್ಣೋಯಿ ಅವರು ಟಿ20 ಸರಣಿ ಮತ್ತು ಏಕದಿನ ಸರಣಿಯಲ್ಲಿ ತಮ್ಮ ಚೊಚ್ಚಲ ಕರೆಯನ್ನು ಪಡೆದಿದ್ದಾರೆ. ಮತ್ತೊಂದೆಡೆ, ಅವೇಶ್ ಖಾನ್ ಕೂಡ ಸರಣಿಗೆ ತನ್ನ ಮೊದಲ ಕರೆಯನ್ನು ಪಡೆದಿದ್ದಾರೆ. 
2ನೇ ಏಕದಿನದಿಂದ ಕೆಎಲ್ ರಾಹುಲ್ ಲಭ್ಯ: ಕೆಎಲ್ ರಾಹುಲ್ 2ನೇ ಏಕದಿನ ಪಂದ್ಯದಿಂದ ಆಯ್ಕೆಗೆ ಲಭ್ಯರಾಗಲಿದ್ದಾರೆ. ರವೀಂದ್ರ ಜಡೇಜಾ ಫಿಟ್ ನೆಸ್ ಪಡೆದುಕೊಳ್ಳುವ ಅಂತಿಮ ಹಂತದಲ್ಲಿರುವ ಕಾರಣ ಆಯ್ಕೆಗೆ ಪರಿಗಣನೆ ಮಾಡಲಾಗಿಲ್ಲ. ಇನ್ನು ಅಕ್ಷರ್ ಪಟೇಲ್ ಕೇವಲ ಟಿ20 ಸರಣಿಗೆ ಮಾತ್ರವೇ ಲಭ್ಯರಿರಲಿದ್ದಾರೆ.

Ind vs WI : ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೆ ರೋಹಿತ್ ಶರ್ಮ ಫಿಟ್, ಈ ಇಬ್ಬರು ಪ್ಲೇಯರ್ ತಂಡದಲ್ಲಿರೋದು ಡೌಟ್!
ವೆಸ್ಟ್ ಇಂಡೀಸ್‌ ವಿರುದ್ಧ ಏಕದಿನ ಪಂದ್ಯಗಳ ಸಂಪೂರ್ಣ ಸರಣಿ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ(Ahmedabad’s Narendra Modi Stadium) ನಡೆಯಲಿದ್ದರೆ, ಕೋಲ್ಕತದ ಈಡನ್ ಗಾರ್ಡನ್ಸ್ ನಲ್ಲಿ(Kolkata’s Eden Gardens)  ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.  ಫೆಬ್ರವರಿ 6, 9 ಹಾಗೂ 12 ರಂದು ಏಕದಿನ ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 15, 18 ಹಾಗೂ 20 ರಂದು ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ICC ODI Rankings: ಎರಡನೇ ಸ್ಥಾನ ಉಳಿಸಿಕೊಂಡ ವಿರಾಟ್ ಕೊಹ್ಲಿ..!
ಟಿ20ತಂಡ: ರೋಹಿತ್ ಶರ್ಮ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್ (ವಿ.ಕೀ), ವೆಂಕಟೇಶ್ ಅಯ್ಯರ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯಿ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಭುವನೇಶ್ವರ್, ಅವೇಶ್ ಖಾನ್, ಹರ್ಷಲ್ ಪಟೇಲ್

ಏಕದಿನ ತಂಡ: ರೋಹಿತ್ ಶರ್ಮ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶಿಖರ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಬ್ ಪಂತ್ (ವಿ.ಕೀ), ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್

Latest Videos
Follow Us:
Download App:
  • android
  • ios