Ind vs WI : ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೆ ರೋಹಿತ್ ಶರ್ಮ ಫಿಟ್, ಈ ಇಬ್ಬರು ಪ್ಲೇಯರ್ ತಂಡದಲ್ಲಿರೋದು ಡೌಟ್!

ಈ ವಾರದಲ್ಲಿ ನಡೆಯಲಿದೆ ವೆಸ್ಟ್ ಇಂಡೀಸ್ ಸರಣಿಗೆ ಟೀಮ್ ಸೆಲೆಕ್ಷನ್
ನಾಯಕ ರೋಹಿತ್ ಶರ್ಮ ತಂಡಕ್ಕೆ ಮರಳುವುದು ಖಚಿತ
ಇಬ್ಬರು ಪ್ರಮುಖ ಪ್ಲೇಯರ್ ಗಳಗೆ ಗೇಟ್ ಪಾಸ್ ಸಿಗುವ ಸಾಧ್ಯತೆ

Cricket News Rohit Sharma will captain the Windies series Bhuvneshwar and R Ashwin can be Dropped From the Team India

ಬೆಂಗಳೂರು (ಜ. 25): ದಕ್ಷಿಣ ಆಫ್ರಿಕಾ (South Africa) ಪ್ರವಾಸದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಕೆಟ್ಟ ಸೋಲನ್ನು ಎದುರಿಸಿ ತವರಿಗೆ ಮರಳಿರುವ ಟೀಂ ಇಂಡಿಯಾ (Team India) ಫೆ. 6 ರಿಂದ ಪ್ರವಾಸಿ ವೆಸ್ಟ್ ಇಂಡೀಸ್ (West Indies) ತಂಡವನ್ನು ತವರಿನಲ್ಲಿ ಎದುರಿಸಲು ಸಿದ್ಧವಾಗುತ್ತಿದೆ. ಇದರ ಮೊದಲ ಹಂತವಾಗಿ ಈ ವಾರದಲ್ಲಿ ಟೀಂ ಇಂಡಿಯಾ ಸೆಲಕ್ಷನ್ ನಡೆಯಲಿದ್ದು ತಂಡದಲ್ಲಿ ಕೆಲ ಬದಲಾವಣೆಗಳು ಖಂಡಿತ ಎಂದು ಹೇಳಲಾಗುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತ (India) ತಂಡ ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿಯನ್ನು ಆಡಲಿದ್ದು, ಅಹಮದಾಬಾದ್ ಹಾಗೂ ಕೋಲ್ಕತದಲ್ಲಿ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿ ನಡೆಯಲಿದೆ.

ಸ್ನಾಯುಸೆಳೆತದ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದಲೇ ಹೊರಬಿದ್ದಿದ್ದ ಸೀಮಿತ ಓವರ್ ಗಳ ತಂಡದ ರೋಹಿತ್ ಶರ್ಮ (Rohit Sharma) ಏಕದಿನ ಮಾದರಿಯ ತಮ್ಮ ನಾಯಕತ್ವದ ಅಭಿಯಾನವನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಆರಂಭಿಸಲಿದ್ದಾರೆ. ಸಂಪೂರ್ಣವಾಗಿ ಫಿಟ್ ಆಗಿರುವ ರೋಹಿತ್ ಶರ್ಮ ತಂಡಕ್ಕೆ ಮರಳುವುದು ಖಚಿತವಾಗಿದೆ. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಕಳಪೆ ನಿರ್ವಹಣೆ ತೋರಿರುವ ಭುವನೇಶ್ವರ್ ಕುಮಾರ್ ( Bhuvneshwar Kumar) ಹಾಗೂ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ (R. Ashwin) ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಅನುಮಾನಗಳಿವೆ.

"ರೋಹಿತ್ ಶರ್ಮ ಸಂಪೂರ್ಣವಾಗಿ ಫಿಟ್ ಆಗಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಲಭ್ಯರಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಆರಂಭವಾಗುವ ವೇಳೆಗೆ ರೋಹಿತ್ ಶರ್ಮ ಅವರ ಪುನಃಶ್ಚೇತನ ಹಾಗೂ ಚೇತರಿಕೆ ಆರಂಭವಾಗಿ ಏಳೂವರೆ ವಾರಗಳು ಮುಕ್ತಾಯವಾಗಲಿದೆ' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟೆಸ್ಟ್ ತಂಡಕ್ಕೂ ರೋಹಿತ್ ನಾಯಕ?: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಇಲ್ಲದಿದ್ದರೂ, ಟೆಸ್ಟ್ ತಂಡಕ್ಕೆ ನಾಯಕರಾಗಿ ರೋಹಿತ್ ಶರ್ಮ ಅವರನ್ನೇ ಘೋಷಣೆ ಮಾಡುವ ಸಾಧ್ಯತೆ ಇದೆ. 2022ರ ಟಿ20 ವಿಶ್ವಕಪ್ ಹಾಗೂ 2023ರ ಏಕದಿನ ವಿಶ್ವಕಪ್ ಟೂರ್ನಿ ಇರುವ ಕಾರಣ ನಾಯಕನ ವರ್ಕ್ ಲೋಡ್ ಮ್ಯಾನೇಜ್ ಮಾಡುವ ನಿಟ್ಟಿನಲ್ಲೂ ಬಿಸಿಸಿಐ ಗಮನ ನೀಡಲಿದೆ. ಎಲ್ಲಾ ಮೂರೂ ಮಾದರಿಯ ತಂಡಕ್ಕೆ ಕೆಎಲ್ ರಾಹುಲ್ ಉಪನಾಯಕರಾಗಿ ಇರಲಿದ್ದು, ರೋಹಿತ್ ಶರ್ಮ ಅವರ ಮಾರ್ಗದರ್ಶನದಲ್ಲಿ ಇರಲಿದ್ದಾರೆ. ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿದೆ. ನಾಯಕನಾಗಿ ನಿರೀಕ್ಷಿತ ಮಟ್ಟದ ನಿರ್ವಹಣೆ ರಾಹುಲ್ ಅವರಿಂದ ಬಂದಿಲ್ಲ. ಹಾಗಾಗಿ ಮುಂಬರುವ ಐಪಿಎಲ್ ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ರಾಹುಲ್ ನಿರ್ವಹಣೆ ಹೇಗೆ ಇರಲಿದೆ ಎನ್ನುವ ಆಧಾರದಲ್ಲಿ ಅವರ ಉಪನಾಯಕ ಸ್ಥಾನದ ಕುರಿತಾಗಿ ಚರ್ಚೆಯಾಗಲಿದೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ಗೆ ಕೋವಿಡ್ ಪಾಸಿಟಿವ್..!
ಬುಮ್ರಾಗೆ ವಿಶ್ರಾಂತಿ, ಭುವನೇಶ್ವರ್, ಅಶ್ವಿನ್ ಡೌಟ್: ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾಗೆ ವರ್ಕ್ ಲೋಡ್ ಮ್ಯಾನೇಜ್ ಮಾಡುವ ಉದ್ದೇಶದಲ್ಲಿ ಎಲ್ಲಾ ಆರೂ ಪಂದ್ಯಗಳಿಂದ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ವೇಗಿ ಭುವನೇಶ್ವರ್ ಕುಮಾರ್ ಹಾಗೂ ಅಶ್ವಿನ್ ಫಾರ್ಮ್ ಬಗ್ಗೆ ಟೀಂ ಇಂಡಿಯಾ ಕಳವಳ ಹೊಂದಿದ್ದು ತಂಡದಿಂದ ಹೊರಬೀಳುವ ಸಾಧ್ಯತೆ ಇದೆ. ಆದರೆ, ತವರಿನ ಸರಣಿ ಆಗಿರುವ ನಿಟ್ಟಿನಲ್ಲಿ ಅಶ್ವಿನ್ ಗೆ ಇನ್ನೊಂದು ಚಾನ್ಸ್ ಸಿಗಬಹುದು ಎನ್ನುವ ನಿರೀಕ್ಷೆಯನ್ನೂ ಇಡಲಾಗಿದೆ. ವೇಗಿಗಳಾದ ಆವೇಶ್ ಖಾನ್ ಹಾಗೂ ಹರ್ಷಲ್ ಪಟೇಲ್ ಟಿ20 ತಂಡದಲ್ಲಿ ಸ್ಥಾನ ಪಡೆಯಬಹುದು.

Neeraj Chopra : ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾಗೆ PVSM ಗೌರವ!​​​​​​​
ಹಾರ್ದಿಕ್ ಪಾಂಡ್ಯ-ರವೀಂದ್ರ ಜಡೇಜಾ ಆಯ್ಕೆ ಸಾಧ್ಯತೆ: ಆಲ್ರೌಂಡರ್ ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ತಂಡಕ್ಕೆ ಮರಳಬಹುದು. ಪಾಂಡ್ಯ ಈಗಾಗಲೇ ನೆಟ್ಸ್ ನಲ್ಲಿ ಅಭ್ಯಾಸ ಆರಂಭಿಸಿದ್ದು ಅವರಿಗಾಗಿ ವೆಂಕಟೇಶ್ ಅಯ್ಯರ್ ಸ್ಥಾನ ತೆರವು ಮಾಡಲಿದ್ದಾರೆ. ಇನ್ನೊಂದೆಡೆ ರವೀಂದ್ರ ಜಡೇಜಾ ಕೂಡ ಫಿಟ್ ಆಗುವ ಲಕ್ಷಣ ತೋರಿದ್ದು, ವೆಸ್ಟ್ ಇಂಡೀಸ್ ಅಥವಾ ಶ್ರೀಲಂಕಾ ವಿರುದ್ಧ ಸರಣಿಗೆ ಟೀಂ ಇಂಡಿಯಾಗೆ ಮರಳಬಹುದು ಎನ್ನುವ ನಿರೀಕ್ಷೆ ಇಡಲಾಗಿದೆ.

Latest Videos
Follow Us:
Download App:
  • android
  • ios