* ಎರಡನೇ ಟಿ20 ಪಂದ್ಯಕ್ಕೆ ಸಜ್ಜಾಗುತ್ತಿದ್ದ ಟೀಂ ಇಂಡಿಯಾಗೆ ಶಾಕ್* ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯಗೆ ಕೋವಿಡ್ ಪಾಸಿಟಿವ್* ಎರಡನೇ ಟಿ20 ಪಂದ್ಯ ದಿಢೀರ್ ಮುಂದೂಡಿಕೆ

ಕೊಲಂಬೊ(ಜು.27): ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಮೇಲೆ ಕೊರೋನಾ ವೈರಸ್ ತನ್ನ ವಕ್ರದೃಷ್ಟಿ ಬೀರಿದ್ದು ಎರಡನೇ ಪಂದ್ಯವನ್ನು ದಿಢೀರ್ ರದ್ದು ಪಡಿಸಲಾಗಿದೆ. ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯಗೆ ಕೋವಿಡ್ 19 ದೃಢಪಟ್ಟ ಬೆನ್ನಲ್ಲೇ ಎರಡನೇ ಟಿ20 ಪಂದ್ಯವನ್ನು ರದ್ದು ಪಡಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಮೂಲಗಳ ಪ್ರಕಾರ ಕೃನಾಲ್ ಪಾಂಡ್ಯ ಜತೆ ಎಂಟು ಕ್ರಿಕೆಟಿಗರು ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಇವರ ಪೈಕಿ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಕೂಡಾ ಇದ್ದರು ಎನ್ನಲಾಗಿದೆ. ಒಂದು ವೇಳೆ ಪೃಥ್ವಿ ಹಾಗೂ ಸೂರ್ಯಕುಮಾರ್ ಯಾದವ್‌ ಅವರಿಗೂ ಕೋವಿಡ್ ದೃಢಪಟ್ಟರೆ ಇಂಗ್ಲೆಂಡ್ ಪ್ರವಾಸದಿಂದ ಹೊರಬೀಳುವ ಸಾಧ್ಯತೆಯಿದೆ.

Scroll to load tweet…

ಭಾರತ ಹಾಗೂ ಲಂಕಾ ನಡುವಿನ ಎರಡನೇ ಟಿ20 ಪಂದ್ಯವು ಇಂದು ಸಂಜೆ 8 ಗಂಟೆಯಿಂದ ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಆರಂಭವಾಗಬೇಕಿತ್ತು. ಈಗಾಗಲೇ ಮೊದಲ ಟಿ20 ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾಗೆ ಶಾಕ್ ಎದುರಾಗಿದೆ.

Scroll to load tweet…