Asianet Suvarna News Asianet Suvarna News

ಜಿಂಬಾಬ್ವೆ ವಿರುದ್ಧ 4-1ರಲ್ಲಿ ಟಿ20 ಸರಣಿ ಗೆದ್ದ ಟೀಂ ಇಂಡಿಯಾ

ಮೊದಲು ಬ್ಯಾಟ್‌ ಮಾಡಿದ ಭಾರತ 6 ವಿಕೆಟ್‌ಗೆ 167 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಪಡೆದ ಜಿಂಬಾಬ್ವೆ, ಭಾರತದ ಮಾರಕ ದಾಳಿ ಮುಂದೆ ತತ್ತರಿಸಿ 18.3 ಓವರ್‌ಗಳಲ್ಲಿ 125 ರನ್‌ಗೆ ಸರ್ವಪತನ ಕಂಡಿತು.

Sanju Samson Mukesh Kumar Fire India To 42 Run Win Over Zimbabwe In 5th T20I kvn
Author
First Published Jul 15, 2024, 6:59 AM IST | Last Updated Jul 15, 2024, 11:52 AM IST

ಹರಾರೆ: 2026ರ ಟಿ20 ವಿಶ್ವಕಪ್‌ಗೆ ಮೊದಲ ಆಡಿಷನ್‌ ಎಂಬಂತಿದ್ದ ಜಿಂಬಾಬ್ವೆ ವಿರುದ್ಧ ಟಿ20 ಸರಣಿಯಲ್ಲಿ ಯುವ ಪ್ರತಿಭೆಗಳನ್ನೊಳಗೊಂಡ ಭಾರತ ತಂಡ ಭರ್ಜರಿ ಯಶಸ್ಸು ಸಾಧಿಸಿದೆ. ಆರಂಭಿಕ ಪಂದ್ಯದಲ್ಲಿ ಎದುರಾಗಿದ್ದ ಆಘಾತದಿಂದ ಹೊರಬಂದು 5 ಪಂದ್ಯಗಳ ಸರಣಿಯನ್ನು 4-1ರಿಂದ ಗೆದ್ದು ಭಾರತಕ್ಕೆ ಹಿಂದಿರುಗಿದೆ. ಭಾನುವಾರ ನಡೆದ ಕೊನೆ ಟಿ20 ಪಂದ್ಯದಲ್ಲಿ ಶುಭ್‌ಮನ್ ಗಿಲ್‌ ನಾಯಕತ್ವದ ಭಾರತಕ್ಕೆ 42 ರನ್‌ ಭರ್ಜರಿ ಗೆಲುವು ಲಭಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 6 ವಿಕೆಟ್‌ಗೆ 167 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಪಡೆದ ಜಿಂಬಾಬ್ವೆ, ಭಾರತದ ಮಾರಕ ದಾಳಿ ಮುಂದೆ ತತ್ತರಿಸಿ 18.3 ಓವರ್‌ಗಳಲ್ಲಿ 125 ರನ್‌ಗೆ ಸರ್ವಪತನ ಕಂಡಿತು.

ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡ ಅಯ್ಕೆ ಮಾಡಿದ ಯುವರಾಜ್ ಸಿಂಗ್..! ಸ್ನೇಹಿತನಿಗೆ ಗೇಟ್‌ಪಾಸ್, ಕೆಣಕಿದವನಿಗೆ ಮಣೆ ಹಾಕಿದ ಯುವಿ

ಮೊದಲ ಓವರ್‌ನಲ್ಲೇ ಮಧೆವೆರೆ ವಿಕೆಟ್‌ ಉರುಳಿಸಿದ ಮುಕೇಶ್‌ ಕುಮಾರ್‌ ಇನ್ನಿಂಗ್ಸ್‌ ಉದ್ದಕ್ಕೂ ಜಿಂಬಾಬ್ವೆ ಬ್ಯಾಟರ್‌ಗಳನ್ನು ಕಾಡಿದರು. 8 ಓವರಲ್ಲಿ 2 ವಿಕೆಟ್‌ಗೆ 59 ರನ್‌ ಗಳಿಸಿದ್ದ ತಂಡ ಬಳಿಕ ಕುಸಿಯಿತು. ಡಿಯಾನ್‌ ಮೈರ್ಸ್‌ 34, ಮರುಮಾನಿ 27 ರನ್‌ ಗಳಿಸಿದರು. ಕೊನೆಯಲ್ಲಿ ಫರಾಜ್‌ ಅಕ್ರಂ 13 ಎಸೆತಗಳಲ್ಲಿ 27 ರನ್‌ ಸಿಡಿಸಿ ಸೋಲಿನ ಅಂತರ ತಗ್ಗಿಸಿದರು. ಮುಕೇಶ್‌ 22ಕ್ಕೆ 4 ವಿಕೆಟ್‌ ಕಿತ್ತರು.

ಸಂಜು ಫಿಫ್ಟಿ: ಇದಕ್ಕೂ ಮುನ್ನ, ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತಕ್ಕೆ ದೊಡ್ಡ ಮೊತ್ತವೇನೂ ಗಳಿಸಲಾಗಲಿಲ್ಲ. ಇನ್ನಿಂಗ್ಸ್‌ನ ಮೊದಲ 2 ಎಸೆತಗಳನ್ನು ಯಶಸ್ವಿ ಜೈಸ್ವಾಲ್ ಸಿಕ್ಸರ್‌ಗಟ್ಟಿದರೂ 12 ರನ್‌ಗೆ ನಿರ್ಗಮಿಸಿದರು.

ಗಿಲ್‌(13), ಅಭಿಷೇಕ್‌(14) ಇನ್ನಿಂಗ್ಸ್ ಕೂಡಾ ಬೇಗನೇ ಕೊನೆಗೊಂಡಿತು. ಆದರೆ ಜವಾಬ್ದಾರಿಯುತ ಆಟವಾಡಿದ ಸ್ಯಾಮ್ಸನ್‌ 45 ಎಸೆತಗಳಲ್ಲಿ 58 ರನ್‌ ಸಿಡಿಸಿದರು. ಕೊನೆಯಲ್ಲಿ ಶಿವಂ ದುಬೆ 12 ಎಸೆತಗಳಳ್ಲಿ 26 ರನ್‌ ಸಿಡಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.

ಭಾರತ vs ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..! ಇಲ್ಲಿದೆ ಹೊಸ ಅಪ್‌ಡೇಟ್

ಸ್ಕೋರ್: ಭಾರತ 20 ಓವರಲ್ಲಿ 167/6 (ಸ್ಯಾಮ್ಸನ್ 58, ದುಬೆ 26, ಮುಜರಬಾನಿ 2-19), ಜಿಂಬಾಬ್ವೆ 18.3 ಓವರ್‌ಗಳಲ್ಲಿ 125/10 (ಮೈರ್ಸ್‌ 34, ಅಕ್ರಂ 27, ಮುಕೇಶ್‌ 4-22)

ಪಂದ್ಯಶ್ರೇಷ್ಠ: ಶಿವಂ ದುಬೆ, ಸರಣಿ ಶ್ರೇಷ್ಠ: ವಾಷಿಂಗ್ಟನ್‌ ಸುಂದರ್‌

ಜಿಂಬಾಬ್ವೆ ವಿರುದ್ಧ 3ನೇ ಟಿ20 ಸರಣಿ ಗೆದ್ದ ಭಾರತ

ಭಾರತ ತಂಡ ಜಿಂಬಾಬ್ವೆ ವಿರುದ್ಧ 3ನೇ ಬಾರಿ ಟಿ20 ಸರಣಿ ಗೆದ್ದಿದೆ. ಈ ಮೊದಲು 2010ರಲ್ಲಿ 2-0 ಹಾಗೂ 2016ರಲ್ಲಿ 2-1 ಅಂತರದಲ್ಲಿ ಭಾರತಕ್ಕೆ ಸರಣಿ ಗೆಲುವು ಲಭಿಸಿತ್ತು. 2015ರಲ್ಲಿ ಉಭಯ ತಂಡಗಳ ನಡುವಿನ 2 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿತ್ತು.

ಇನ್ನಿಂಗ್ಸ್‌ ಮೊದಲ ಎಸೆತದಲ್ಲೇ 13 ರನ್‌!

ಸಿಕಂದರ್ ರಾಜಾ ಎಸೆದ ಇನ್ನಿಂಗ್ಸ್‌ ಮೊದಲ ಎಸೆತ ನೋಬಾಲ್‌ ಆಗಿತ್ತು. ಇದರಲ್ಲಿ ಜೈಸ್ವಾಲ್‌ ಸಿಕ್ಸರ್‌ ಬಾರಿಸಿದರು. ಬಳಿಕ ಫ್ರೀ ಹಿಟ್‌ ಎಸೆತವನ್ನೂ ಜೈಸ್ವಾಲ್‌ ಸಿಕ್ಸರ್‌ಗಟ್ಟಿದರು. ಈ ಮೂಲಕ ಮೊದಲ ಎಸೆತದಲ್ಲೇ ಭಾರತಕ್ಕೆ 13 ರನ್ ಲಭಿಸಿತು.

ಮೊದಲ ಪಂದ್ಯ ಸೋತರೂ 4-1 ಜಯ: ಭಾರತ ದಾಖಲೆ

ಸರಣಿಯ ಮೊದಲ ಪಂದ್ಯದಲ್ಲಿ ಸೋತ ಹೊರತಾಗಿಯೂ ಭಾರತ ಸರಣಿಯನ್ನು 4-1ರಲ್ಲಿ ಕೈವಶಪಡಿಸಿಕೊಂಡಿತು. 5 ಪಂದ್ಯಗಳ ಸರಣಿಯಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ.
 

Latest Videos
Follow Us:
Download App:
  • android
  • ios