ಭಾರತ vs ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..! ಇಲ್ಲಿದೆ ಹೊಸ ಅಪ್‌ಡೇಟ್
ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಕೊಂಚ ಬದಲಾವಣೆಯಾಗಿದೆ. ಈ ಕುರಿತಾದ ಹೊಸ ಅಪ್‌ಡೇಟ್ ಇಲ್ಲಿದೆ ನೋಡಿ
ಮುಂಬೈ: ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿಯ ವೇಳಾಪಟ್ಟಿ ಬದಲಾ ವಣೆಯಾಗಿದೆ. ಜುಲೈ 26ರಂದು ಆರಂಭ ಗೊಳ್ಳಬೇಕಿದ್ದ ಸರಣಿ 1 ದಿನ ತಡವಾಗಿ ಅಂದರೆ ಜುಲೈ 27ರಿಂದ ಆರಂಭ ಗೊಳ್ಳಲಿದೆ ಎಂದು ಬಿಸಿಸಿಐ ಶನಿವಾರ ಮಾಹಿತಿ ನೀಡಿದೆ.
ಹೊಸ ವೇಳಾಪಟ್ಟಿ ಪ್ರಕಾರ ಟಿ20 ಸರಣಿಯ 3 ಪಂದ್ಯಗಳು ಕ್ರಮವಾಗಿ ಜುಲೈ27, ಜು.28 ಹಾಗೂ ಜು.30ಕ್ಕೆ ನಿಗದಿಯಾಗಿದೆ. ಎಲ್ಲಾ ಪಂದ್ಯಗಳು ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಲಿವೆ. ಇನ್ನು, ಆಗಸ್ಟ್ 1ರಿಂದ ಆರಂಭ ಗೊಳ್ಳಬೇಕಿದ್ದ ಏಕದಿನ ಸರಣಿ ಕೂಡಾ 1 ದಿನ ತಡವಾಗಿ ಆರಂಭಗೊಳ್ಳಲಿದೆ. ಮೊದಲ ಪಂದ್ಯ ಆ.2ರಂದು ನಡೆಯಲಿದ್ದು, ಇನ್ನುಳಿದ 2 ಪಂದ್ಯಗಳು ಕ್ರಮ ವಾಗಿ ಆ.4 ಹಾಗೂ 7ಕ್ಕೆ ನಡೆಯಲಿವೆ. ಎಲ್ಲಾ ಪಂದ್ಯಕ್ಕೆ ಕೊಲಂಬೊ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಲಂಕಾ ವಿರುದ್ಧ ಸರಣಿಗೆ ಮುಂದಿನ ವಾರ ಭಾರತ ತಂಡ ಆಯ್ಕೆ ಸಾಧ್ಯತೆ
ಮುಂಬೈ: ಶ್ರೀಲಂಕಾ ವಿರುದ್ಧ ಜುಲೈ 26ರಿಂದ ಆರಂಭಗೊಳ್ಳಲಿರುವ ತಲಾ 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಗೆ ಭಾರತ ತಂಡ ಮುಂದಿನ ವಾರ ಪ್ರಕಟ ಗೊಳ್ಳುವ ನಿರೀಕ್ಷೆಯಿದೆ. ಈ ಸರಣಿ ಮೂಲಕ ಅಧಿಕೃತವಾಗಿ ಪ್ರಧಾನ ಕೋಚ್ ಹುದ್ದೆ ಅಲಂಕರಿಸಲಿರುವ ಗೌತಮ್ ಗಂಭೀರ್ ಅವರು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ತಂಡವನ್ನು ಅಂತಿಮಗೊಳಿಸಲಿದ್ದಾರೆ.
ಜಿಂಬಾಬ್ವೆ ಬೌಲರ್‌ಗಳನ್ನು ಚೆಂಡಾಡಿದ ಟೀಂ ಇಂಡಿಯಾ; 10 ವಿಕೆಟ್ ಜಯ ಸಾಧಿಸಿ ಸರಣಿ ಗೆದ್ದ ಭಾರತ
ವರದಿಗಳ ಪ್ರಕಾರ ಹಾರ್ದಿಕ್ ಪಾಂಡ್ಯ ಟಿ20, ಕರ್ನಾಟಕದ ಕೆ.ಎಲ್.ರಾಹುಲ್ ಏಕದಿನ ತಂಡಕ್ಕೆ ನಾಯಕತ್ವ ವಹಿಸುವ ಸಾಧ್ಯತೆಯಿದೆ. 2023ರ ಡಿಸೆಂಬರ್ ಬಳಿಕ ತಂಡದಿಂದ ದೂರವಿರುವ ಶ್ರೇಯಸ್ ಅಯ್ಯರ್ ಈ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಮೆರಿಕದಲ್ಲಿ ವಿಶ್ವಕಪ್ ನಡೆಸಿದ ಐಸಿಸಿಗೆ ಈಗ ಕೋಟ್ಯಂತರ ರು. ನಷ್ಟ!
ದುಬೈ: ಕ್ರಿಕೆಟ್‌ನ ಮಾರುಕಟ್ಟೆ ವಿಸ್ತರಿಸುವ ಗುರಿ ಇಟ್ಟುಕೊಂಡು ಟಿ20 ವಿಶ್ವಕಪ್‌ನ ಕೆಲ ಪಂದ್ಯಗಳನ್ನು ಅಮೆರಿಕದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕೈ ಸುಟ್ಟುಕೊಂಡಿದೆ. ಟೂರ್ನಿ ಯಿಂದಾಗಿ ಐಸಿಸಿ ಕೋಟ್ಯಂತರ ರು. ನಷ್ಟ ಅನುಭವಿಸಿದ್ದು, ಈ ಬಗ್ಗೆ ಜು.19ರಂದು ಕೊಲಂಬೊದಲ್ಲಿ ನಡೆಯಲಿರುವ ಸಭೆ ಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಿದೆ.
ಐಸಿಸಿ ಅಮೆರಿಕ ಚರಣದ ಪಂದ್ಯಗಳಿಗೆ 150 ಮಿಲಿಯನ್ ಡಾಲರ್ (ಅಂದಾಜು 1250 ಕೋಟಿ ರು.) ಮೀಸಲಿಟ್ಟಿತ್ತು. ಆದರೆ ಕ್ರೀಡಾಭಿಮಾನಿಗಳನ್ನು ಸೆಳೆಯಲು ಟೂರ್ನಿ ವಿಫಲವಾಗಿದ್ದು, ಪ್ರೇಕ್ಷಕರ ಕೊರತೆ ಹಿನ್ನೆಲೆಯಲ್ಲಿ ನಿಗದಿತ ಮೊತ್ತಕ್ಕಿಂತ ಜಾಸ್ತಿ ಖರ್ಚಾಗಿದೆ. ಇದರ ಪ್ರಮಾಣ ಎಷ್ಟು ಎಂಬುದು ಇನ್ನೂ ಗೊತ್ತಾಗಿಲ್ಲ. ಈ ನಡುವೆ ಟೂರ್ನಿಯ ನಿರ್ದೇಶಕ ಕ್ರಿಸ್ ಟೆಟ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಗನ ಮದುವೆ ಬೆನ್ನಲ್ಲೇ ಭಾರತೀಯರೆಲ್ಲರಿಗೂ ಬಂಪರ್ ಗಿಫ್ಟ್ ಕೊಟ್ಟ ಮುಕೇಶ್ ಅಂಬಾನಿ..!
ಐಪಿಎಲ್: ಡೆಲ್ಲಿ ತಂಡದ ಕೋಚ್ ಸ್ಥಾನದಿಂದ ರಿಕಿ ಪಾಂಟಿಂಗ್‌ಗೆ ಕೊಕ್!
ನವದೆಹಲಿ: ಐಪಿಎಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಸ್ಥಾನದಿಂದ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್‌ರನ್ನು ವಜಾಗೊಳಿಸಲಾಗಿದೆ. ಕಳೆದ 7 ವರ್ಷಗಳಿಂದ ತಂಡಕ್ಕೆ ಕೋಚ್ ಆಗಿದ್ದ ಪಾಂಟಿಂಗ್ ಹುದ್ದೆ ತೊರೆದಿದ್ದಾರೆ ಎಂದು ಫ್ರಾಂಚೈಸಿಯು ಶನಿವಾರ ಘೋಷಿಸಿದೆ.
2 ಬಾರಿ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದ ಪಾಂಟಿಂಗ್ 2018 ರಲ್ಲಿ ಡೆಲ್ಲಿ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. 2020ರಲ್ಲಿ ತಂಡ ಫೈನಲ್‌ಗೇರಿದ್ದು ಬಿಟ್ಟರೆ ಈ ವರೆಗೂ ಟ್ರೋಫಿ ಗೆದ್ದಿಲ್ಲ. ಹೀಗಾಗಿ ಪಾಂಟಿಂಗ್‌ರನ್ನು ಕೋಚ್ ಸ್ಥಾನದಿಂದ ಫ್ರಾಂಚೈಸಿ ಕೆಳಗಿಳಿಸಿದೆ. ತಂಡಕ್ಕೆ ಮಾರ್ಗ ದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸೌರವ್ ಗಂಗೂಲಿಯನ್ನು ಫ್ರಾಂಚೈಸಿಯು ಮುಂದಿನ ಆವೃತ್ತಿ ಯಲ್ಲಿ ಕೋಚ್ ಆಗಿ ನೇಮಿಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.