ಮುಂಬೈ(ಜು.12): ಕ್ರಿಕೆಟ್‌ನಲ್ಲಿ ಹಲವು ನಿಯಮಗಳು ಕಾಲ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಜೊತೆ ಟೆಕ್ನಾಲಜಿಯನ್ನು ಬಳಸಿಕೊಳ್ಳೋ ಮೂಲಕ ಕ್ರಿಕೆಟ್ ಆಧುನಿಕತೆಗೆ ತೆರೆದುಕೊಳ್ಳುತ್ತಾ ಬಂದಿದೆ. ಇದರಲ್ಲಿ ಪ್ರಮಖವಾಗಿ LBW ವಿಚಾರದಲ್ಲಿ ಕ್ರಿಕೆಟ್ ಟೆಕ್ನಾಲಜಿ ಬಳಸಿಕೊಂಡು URDS ನಿಯಮ ಜಾರಿಗೆ ತಂದಿದೆ. ಆದರೆ ಅತ್ತ ಟೆಕ್ನಾಲಜಿಯನ್ನು ಪೂರ್ತಿಯಾಗಿ ನಂಬದೆ, ಇತ್ತ ಅಂಪೈರ್ ತೀರ್ಪನ್ನು ಪೂರ್ತಿಯಾಗಿ ತೆಗೆದುಕೊಳ್ಳದ DRS ನಿಮಯ ಬದಲಿಸಲು ಸಚಿನ್ ಆಗ್ರಹಿಸಿದ್ದಾರೆ.

ಆಸ್ಟ್ರೇಲಿಯಾ ರಸ್ತೆಗಳಿಗೆ ಕಪಿಲ್ ದೇವ್, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಹೆಸರು..!.

ಅಂಪೈರ್ ರಿವ್ಯೂವ್ ಸಿಸ್ಟಮ್ ಜಾರಿಗೆ ತರಲಾಗಿದೆ. ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಆದರೆ ಇಲ್ಲಿ ಕೆಲ ಗೊಂದಲಗಳಿವೆ. ತಂತ್ರಜ್ಞಾನದ ತೀರ್ಪಿನ ಬಳಿಕ ಅಂಪೈರ್ ಕಾಲ್ ಕೂಡ ಗಮನಕ್ಕೆ ತೆಗೆದುಕೊಳ್ಳಲಾಗುತ್ತದೆ. ನಾವು ತಂತ್ರಜ್ಞಾನ ಬಳಸುತ್ತಿದ್ದೇವೆ ಅಂದ ಮೇಲೆ ಬಾಲ್ ವಿಕೆಟ್‌ಗೆ ತಾಗುತ್ತಿದ್ದರೆ ಅದು ಔಟ್ ನೀಡಬೇಕು. ಇಲ್ಲಿ ಅಂಪೈರ್ ಕಾಲ್ ಕುರಿತು ಗಮನ ಹರಿಸುವ ಅಗತ್ಯವಿಲ್ಲ ಎಂದು ಸಚಿನ್ ಹೇಳಿದ್ದಾರೆ.

ಸಚಿನ್‌ ತೆಂಡುಲ್ಕರ್ ಔಟ್‌ ಮಾಡಿ​ದ್ದಕ್ಕೆ ಇಂಗ್ಲೆಂಡ್ ವೇಗಿಗೆ ಬಂದಿತ್ತಂತೆ ಜೀವ ಬೆದ​ರಿ​ಕೆ!

ಅಂಪೈರ್ ತೀರ್ಪು ಸರಿಇಲ್ಲ ಎಂದು ರಿವ್ಯೂವ್ ಮಾಡಲಾಗುತ್ತದೆ. ಈ ವೇಳೆ ಆನ್ ಫೀಲ್ಡ್ ಅಂಪೈರ್ ಕಾಲ್ ಬದಲು, DRSನಲ್ಲಿ ಬಾಲ್ ವಿಕೆಟ್‌ಗೆ ಹಿಟ್ ಆಗುತ್ತಿದ್ದರೆ ಔಟ್ ತೀರ್ಪು ನೀಡಬೇಕು ಎಂದು ಸಚಿನ್ ಹೇಳಿದ್ದಾರೆ. ಈ ಮೂಲಕ DRS ನಿಯಮವನ್ನು ಸರಳೀಕೃತಗೊಳಿಸಲು ಆಗ್ರಹಿಸಿದ್ದಾರೆ.