ಮೆಲ್ಬೊರ್ನ್(ಜೂ.13): ಇನ್ನು ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ ಸಚಿನ್ ಸ್ಟ್ರೀಟ್(ಸಚಿನ್ ಡ್ರೈವ್), ವಿರಾಟ್ ಕೊಹ್ಲಿ ಸ್ಟ್ರೀಟ್( ಕೊಹ್ಲಿ ಕ್ರೆಸೆಂಟ್‌) ರಸ್ತೆಗಳಲ್ಲಿ ನೀವು ಓಡಾಡಬಹುದಾಗಿದೆ. ಮೆಲ್ಬೋರ್ನ್‌ನಲ್ಲಿ ಈಗಾಗಲೇ ಕೆಲವು ಬೀದಿಗಳಲ್ಲಿ ಕ್ರಿಕೆಟ್ ದಿಗ್ಗಜರ ಹೆಸರನ್ನು ಬೀದಿಗಳಿಗೆ ನಾಮಕರಣ ಮಾಡಲಾಗಿದೆ.

ಕ್ರಿಕೆಟ್‌ನ ದಿಗ್ಗಜ ಆಟಗಾರರ ಹೆಸರನ್ನು ಮೆಲ್ಬರ್ನ್‌ನ ಪಶ್ಚಿಮ ಭಾಗದಲ್ಲಿರುವ ಎಸ್ಟೇಟ್‌ಗೆ ಇಡಲಾಗಿದೆ. ರಾಕ್‌ಬ್ಯಾಂಕ್‌ನ ಮೆಲ್ಟನ್ ಸಿಟಿ ಕೌನ್ಸಿಲ್ ಬೀದಿಗಳಿಗೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಕಪಿಲ್ ದೇವ್, ವಿರಾಟ್ ಕೊಹ್ಲಿ, ಸ್ಟೀವ್ ವಾ ಹೆಸರಿಡಲಾಗಿದೆ. ಕೊಹ್ಲಿ ಕ್ರೆಸೆಂಟ್‌ನಲ್ಲಿರಲು ಯಾರಿಗೆ ಇಷ್ಟ ಇಲ್ಲ ಹೇಳಿ? ಇದೇ ಡಿಸೆಂಬರ್‌ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೇ ರಸ್ತೆಯಲ್ಲಿ ಕಾರ್ ಓಡಿಸಿದರೂ ಓಡಿಸಬಹುದು ಎಂದು ಪ್ರಾಪರ್ಟಿ ಡೆವಲಪರ್ ವರುಣ್ ಶರ್ಮಾ ಹೇಳಿದ್ದಾರೆ.

ತೆಂಡುಲ್ಕರ್ ಡ್ರೈವ್ ಹಾಗೂ ಕೊಹ್ಲಿ ಕ್ರೆಸೆಂಟ್ ಮಾತ್ರವಲ್ಲದೇ ವ್ಹಾ ಸ್ಟ್ರೀಟ್, ಸೋಬರ್ಸ್ ಡ್ರೈವ್, ಕಾಲಿಸ್ ವೇ, ದೇವ್ ಟೆರಸ್(ಕಪಿಲ್ ದೇವ್), ಹ್ಯಾಡ್ಲಿ ಸ್ಟ್ರೀಟ್, ಅಕ್ರಂ ವೇ ಮುಂತಾದ ಹೆಸರಿನ ರಸ್ತೆಗಳು ಇನ್ಮುಂದೆ ಆಸ್ಟ್ರೇಲಿಯಾದಲ್ಲಿ ನೋಡಲು ಸಿಗಲಿವೆ. ಮೆಲ್ಬರ್ನ್ ಪಶ್ಚಿಮ ಭಾಗದಲ್ಲಿ ಭಾರತೀಯರ ಜನಸಂಖ್ಯೆ ಹೆಚ್ಚಾಗಿದೆ. ಇನ್ನಷ್ಟು ಜನರನ್ನು ಪ್ರಾಪರ್ಟಿ ಖರೀದಿಸಲು ಜನರನ್ನು ಆಕರ್ಷಿಸಲು ದಿಗ್ಗಜ ಕ್ರಿಕೆಟಿಗರ ಹೆಸರನ್ನು ಇಡಲಾಗಿದೆ.

ಕೊರೋನಾ ಭೀತಿ: ಟೀಂ ಇಂಡಿ​ಯಾದ 2 ವಿದೇಶಿ ಪ್ರವಾಸ ರದ್ದು..!

ಕೊರೋನಾ ವೈರಸ್ ಹತೋಟಿಗೆ ಬಂದರೆ ವರ್ಷಾಂತ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ 3 ಏಕದಿನ, 3 ಟಿ20 ಹಾಗೂ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.