4ನೇ ಕ್ರಮಾಂಕದಲ್ಲಿ ಆಡಿದ್ರೆ ದಿಗ್ಗಜ ಕ್ರಿಕೆಟರ್ ಆಗ್ತಾರಾ..? 4ನೇ ಕ್ರಮಾಂಕದಲ್ಲಿ ರಾಜನಂತೆ ಮೆರೆದ 4 ಬ್ಯಾಟರ್..!
ಟೆಸ್ಟ್ ಕ್ರಿಕೆಟ್‌ನಲ್ಲಿ 4ನೇ ಕ್ರಮಾಂಕ ಮಹತ್ವದ ಸ್ಥಾನ
ಈ ಕ್ರಮಾಂಕದಲ್ಲಿ ಆಡಿದ ಆಟಗಾರರು ಬಹುತೇಕ ಲೆಜೆಂಡ್ಸ್
ಲೆಜೆಂಡ್ಸ್ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ವಿರಾಟ್ ಕೊಹ್ಲಿ
ಬೆಂಗಳೂರು(ಜು.28) ಇಂಟರ್ ನ್ಯಾಷನಲ್ ಕ್ರಿಕೆಟ್ಗೆ ಎಂಟ್ರಿಕೊಟ್ಟ ಆಟಗಾರರಿಗೆ ಇಂತಹದ್ದೇ ಸ್ಲಾಟ್ನಲ್ಲಿ ಆಡಬೇಕು ಅನ್ನೋ ಆಸೆ ಇರುತ್ತೆ. ಆದ್ರೆ ತಂಡದ ಅನಿವಾರ್ಯಕ್ಕೆ ತಕ್ಕಂತೆ ಆಡುವುದು ಅನಿವಾರ್ಯವಾಗಿ ಬಿಡುತ್ತೆ. ಹೀಗಾಗಿ ಯಾವ ಪ್ಲೇಯರ್ಗೆ ಯಾವ ಸ್ಲಾಟ್ ಸಿಗುತ್ತೋ ಗೊತ್ತಾಗಲ್ಲ. ಆದ್ರೆ ಕೆಲವೊಂದಿಷ್ಟು ಪ್ಲೇಯರ್ಸ್ ತಮಗೆ ಇಷ್ಟವಾದ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಉತ್ತಮ ಪ್ರದರ್ಶನ ನೀಡುತ್ತಾರೆ. ಕೊನೆಗೆ ಅದೇ ಸ್ಥಾನ ಅವರಿಗೆ ಕನ್ಫರ್ಮ್ ಆಗುತ್ತೆ. ಅಲ್ಲಿಯೇ ವಿಶ್ವದಾಖಲೆಯನ್ನೂ ನಿರ್ಮಿಸ್ತಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ 4 ಸ್ಲಾಟ್ ವೆರಿ ವೆರಿ ಇಂಪಾಡೆಂಟ್ ಸ್ಲಾಟ್. 4ನೇ ಕ್ರಮಾಂಕದಲ್ಲಿ ಆಡಿದ ಈ ಆಟಗಾರರು ವಿಶ್ವವಿಖ್ಯಾತರಾಗಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲೇ 4ನೇ ಸ್ಥಾನದಲ್ಲಿ ರಾಜರಂತೆ ಮೆರಿದಿರುವವರು ಕೇವಲ ನಾಲ್ಕೇ ಮಂದಿ. ಅದರಲ್ಲಿ ಇಬ್ಬರು ಭಾರತೀಯರಿದ್ದಾರೆ. ಅದರಲ್ಲಿ ಒಬ್ಬರು ಕೊಹ್ಲಿ.
ನಂ. 4 ಸ್ಲಾಟ್ನಲ್ಲಿ ಸಚಿನ್ ಮಾಸ್ಟರ್ ಬ್ಲಾಸ್ಟರ್
ಆಡು ಮುಟ್ಟದ ಸೊಪ್ಪಿಲ್ಲ. ಸಚಿನ್ ತೆಂಡುಲ್ಕರ್ ಮಾಡದ ದಾಖಲೆಗಳಿಲ್ಲ ಅನ್ನೋ ಮಾತಿದೆ. ಅದರಲ್ಲಿ ಕೆಲವೊಂದಿಷ್ಟು ದಾಖಲೆಗಳನ್ನ ಅವರು ಮಾಡಿರೋದು ನಂ. 4 ಸ್ಲಾಟ್ನಲ್ಲೇ. ಒನ್ಡೇ ಕ್ರಿಕೆಟ್‌ನಲ್ಲಿ ಓಪನರ್ ಆಗಿದ್ದ ಕ್ರಿಕೆಟ್ ದೇವರು, ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ 4ನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ನಂ. 4 ಸ್ಲಾಟ್ನಲ್ಲಿ ತೆಂಡುಲ್ಕರ್,13,492 ರನ್ ಹೊಡೆದಿದ್ದಾರೆ. ಈ ಸ್ಲಾಟ್ನಲ್ಲಿ ಅತ್ಯಧಿಕ ರನ್ ಹೊಡೆದಿರುವ ಅಗ್ರಜ ಸಚಿನ್. 200 ಟೆಸ್ಟ್ಗಳ ಪೈಕಿ 177 ಟೆಸ್ಟ್ಗಳಲ್ಲಿ ನಂಬರ್ 4 ಸ್ಲಾಟ್ನಲ್ಲೇ ಬ್ಯಾಟಿಂಗ್ ಮಾಡಿದ್ದಾರೆ. 51ರಲ್ಲಿ 44 ಸೆಂಚುರಿಗಳನ್ನ ಹೊಡೆದಿರುವುದು 4ನೇ ಕ್ರಮಾಂಕದಲ್ಲೇ.
ಟೀಂ ಇಂಡಿಯಾಗೆ ಗುಡ್ ನ್ಯೂಸ್, ಬುಮ್ರಾ ಕಮ್‌ಬ್ಯಾಕ್ ಬಗ್ಗೆ ಮಾಹಿತಿ ಬಿಚ್ಚಿಟ್ಟ ಜಯ್ ಶಾ
ಸಚಿನ್ಗಿಂತ ಬಹಳ ದೂರ ತ್ರಿಮೂರ್ತಿಗಳು:
ಶ್ರೀಲಂಕಾದ ಮಹೇಲ ಜಯವರ್ಧನೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ 4 ಸ್ಲಾಟ್ನಲ್ಲಿ ಬ್ಯಾಟಿಂಗ್ ಮಾಡಿ 9,509 ರನ್ ಬಾರಿಸಿದ್ದಾರೆ. ಈ ಮೂಲಕ 4ನೇ ಸ್ಥಾನದಲ್ಲಿ ಆಡಿ ಅತಿಹೆಚ್ಚು ರನ್ ಬಾರಿಸಿದ 2ನೇ ಆಟಗಾರರಾಗಿದ್ದಾರೆ. ಸೌತ್ ಆಫ್ರಿಕಾದ ಜಾಕ್ ಕಾಲಿಸ್ 9,033 ರನ್ ಹೊಡೆದು, 3ನೇ ಸ್ಥಾನದಲ್ಲಿದ್ದರೆ, ವಿಂಡೀಸ್ನ ಬ್ರಿಯಾನ್ ಲಾರಾ 7,535 ರನ್ ಗಳಿಸಿ 4ನೇ ಸ್ಥಾನದಲ್ಲಿದ್ದಾರೆ. ಈ ನಾಲ್ವರು 4ನೇ ಕ್ರಮಾಂಕದಲ್ಲಿ ರಾಜರಂತೆ ಆಳ್ವಿಕೆ ಮಾಡಿದ್ದಾರೆ.
4ನೇ ಕ್ರಮಾಂಕದಲ್ಲಿ ಕೊಹ್ಲಿ ಹೊಡೆದಿರುವ ರನ್ಗಳೆಷ್ಟು..?
ವಿರಾಟ್ ಕೊಹ್ಲಿ ದಾಖಲೆಗಳ ಸರದಾರ. ಸಚಿನ್ ರೆಕಾರ್ಡ್ಗಳನ್ನ ಒಂದೊಂದಾಗಿ ಬ್ರೇಕ್ ಮಾಡಿಕೊಂಡು ಬರ್ತಿದ್ದಾರೆ. ಒನ್ಡೇ ಮತ್ತು ಟಿ20 ಕ್ರಿಕೆಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಆಡುವ ಕಿಂಗ್ ಕೊಹ್ಲಿ, ಟೆಸ್ಟ್ನಲ್ಲಿ ಮಾತ್ರ ನಂ. 4 ಸ್ಲಾಟ್ಗೆ ಫಿಕ್ಸ್ ಆಗಿದ್ದಾರೆ. ಅಲ್ಲಿಯೇ ಅವರು ರನ್ ಹೊಳೆ ಹರಿಸಿರೋದು, ಶತಕದ ಮೇಲೆ ಶತಕ ಬಾರಿಸಿರೋದು.
Breaking News: ವಿಶ್ವಕಪ್ ವೇಳಾಪಟ್ಟಿಯಲ್ಲಿ ಶೀಘ್ರ ಬದಲಾವಣೆ: ಜಯ್ ಶಾ
ಕೊಹ್ಲಿ ಟೆಸ್ಟ್ ಫಾರ್ಮೆಟ್ನಲ್ಲಿ 4ನೇ ಸ್ಥಾನದಲ್ಲಿ ಆಡಿ 7,097 ರನ್ ಹೊಡೆದಿದ್ದಾರೆ. 29 ಟೆಸ್ಟ್ ಶತಕಗಳ ಪೈಕಿ 25 ಶತಕಗಳನ್ನ ನಂಬರ್ 4 ಸ್ಲಾಟ್ನಲ್ಲೇ ಸಿಡಿಸಿರುವುದು. 4ನೇ ಕ್ರಮಾಂಕದಲ್ಲಿ ಆಡಿ ಅತಿಹೆಚ್ಚು ರನ್ ಹೊಡೆದಿರುವವರ ಪಟ್ಟಿಯಲ್ಲಿ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ. ಸಚಿನ್ ರೆಕಾರ್ಡ್ ಬ್ರೇಕ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಉಳಿದವರ ದಾಖಲೆಯಂತೂ ಮುರಿಯುವ ಹಾದಿಯಲ್ಲಿದ್ದಾರೆ.