ಟೀಂ ಇಂಡಿಯಾಗೆ ಗುಡ್ ನ್ಯೂಸ್, ಬುಮ್ರಾ ಕಮ್‌ಬ್ಯಾಕ್ ಬಗ್ಗೆ ಮಾಹಿತಿ ಬಿಚ್ಚಿಟ್ಟ ಜಯ್ ಶಾ
ಏಷ್ಯಾಕಪ್ ಟೂರ್ನಿಗೂ ಮುನ್ನ ಗುಡ್ ನ್ಯೂಸ್ ಕೊಟ್ಟ ಬಿಸಿಸಿಐ
ಐರ್ಲೆಂಡ್ ಎದುರಿನ ಸರಣಿಗೂ ಮುನ್ನ ಟೀಂ ಇಂಡಿಯಾ ಕೂಡಿಕೊಳ್ಳಲಿರುವ ಬುಮ್ರಾ
ವೇಗಿ ಬುಮ್ರಾ ಫಿಟ್ ಆಗಿರುವ ಮಾಹಿತಿ ಬಿಚ್ಚಿಟ್ಟ ಜಯ್ ಶಾ
ಬ್ರಿಡ್ಜ್‌ಟೌನ್(ಜು.28): ಬೆನ್ನು ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವ ತಾರಾ ವೇಗಿ ಜಸ್‌ಪ್ರೀತ್ ಬುಮ್ರಾ, ಮುಂದಿನ ತಿಂಗಳು ನಡೆಯಲಿರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುರುವಾರ ಹೇಳಿದ್ದಾರೆ.
‘ಬುಮ್ರಾ ಸಂಪೂರ್ಣ ಫಿಟ್ ಇದ್ದಾರೆ. ಐರ್ಲೆಂಡ್ ಸರಣಿಯಲ್ಲಿ ಅವರು ಆಡಬಹುದು’ ಎಂದು ಶಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬೂಮ್ರಾ ಏಷ್ಯಾಕಪ್ ವೇಳೆಗೆ ತಂಡ ಕೂಡಿಕೊಳ್ಳುವ ನಿರೀಕ್ಷೆ ಇತ್ತು. ಆದರೆ ಅವರು ನಿರೀಕ್ಷೆಗೂ ಮೊದಲೇ ತಂಡಕ್ಕೆ ಮರಳಲಿದ್ದಾರೆ ಎನ್ನಲಾಗಿದೆ.
ಏಷ್ಯಾಕಪ್ ಮುನ್ನ ಬೆಂಗ್ಳೂರಲ್ಲಿ ಶಿಬಿರ
ನವದೆಹಲಿ: ವಿಂಡೀಸ್ ಪ್ರವಾಸ ಮುಗಿಯುತ್ತಿದ್ದಂತೆ ಭಾರತದ ತಾರಾ ಕ್ರಿಕೆಟಿಗರು ಬೆಂಗಳೂರಿಗೆ ಆಗಮಿಸಲಿದ್ದು, ಏಷ್ಯಾಕಪ್‌ಗೂ ಮೊದಲು ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯಲ್ಲಿ 1 ವಾರ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಏಷ್ಯಾಕಪ್ ಹಾಗೂ ವಿಶ್ವಕಪ್‌ಗೆ ಆಯ್ಕೆ ರೇಸ್‌ನಲ್ಲಿ ಇಲ್ಲದ ಆಟಗಾರರನ್ನು ಐರ್ಲೆಂಡ್ ವಿರುದ್ಧ ಟಿ20 ಸರಣಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ತಾನೇ ತೋಡಿಕೊಂಡ ಹಳ್ಳಕ್ಕೆ ತಾವೇ ಬಿದ್ದರಾ ಶುಭ್‌ಮನ್ ಗಿಲ್..?
ಸಿರಾಜ್‌ಗೆ ಗಾಯ ಭೀತಿ: ಭಾರತಕ್ಕೆ ವಾಪಸ್
ನವದೆಹಲಿ: ಭಾರತದ ತಾರಾ ವೇಗಿ ಮೊಹಮದ್ ಸಿರಾಜ್ ಮೊಣಕಾಲು ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ವೆಸ್ಟ್‌ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಸಿರಾಜ್ ಭಾರತಕ್ಕೆ ವಾಪಸಾಗಿದ್ದು, ಕೆಲ ವಾರಗಳ ಕಾಲ ವಿಶ್ರಾಂತಿಯ ಬಳಿಕ ಏಷ್ಯಾಕಪ್ ಶಿಬಿರಕ್ಕೆ ಹಾಜರಾಗಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವರ್ಷ ಸಿರಾಜ್ 6 ಟೆಸ್ಟ್, 8 ಏಕದಿನ ಪಂದ್ಯಗಳ ಜೊತೆ ಆರ್‌ಸಿಬಿ ಪರ ಐಪಿಎಲ್‌ನಲ್ಲಿ 14 ಪಂದ್ಯಗಳನ್ನು ಆಡಿದ್ದಾರೆ.
2ನೇ ಟೆಸ್ಟ್: ಲಂಕಾ ವಿರುದ್ಧ ಪಾಕ್‌ಗೆ ಜಯ
ಕೊಲಂಬೊ: ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಪಾಕಿಸ್ತಾನ ಇನ್ನಿಂಗ್ಸ್ ಹಾಗೂ 222 ರನ್‌ಗಳ ಜಯ ಸಾಧಿಸಿ, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಜಯದೊಂದಿಗೆ 12 ಅಂಕ ಪಡೆದ ಪಾಕಿಸ್ತಾನ, ಒಟ್ಟು 24 ಅಂಕಗಳೊಂದಿಗೆ 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ.
Breaking News: ವಿಶ್ವಕಪ್ ವೇಳಾಪಟ್ಟಿಯಲ್ಲಿ ಶೀಘ್ರ ಬದಲಾವಣೆ: ಜಯ್ ಶಾ
4ನೇ ದಿನವಾದ ಗುರುವಾರ 5 ವಿಕೆಟ್‌ಗೆ 576 ರನ್ ಗಳಿಸಿ 2ನೇ ಇನ್ನಿಂಗ್ಸ್ ಡ್ರಾ ಮಾಡಿಕೊಂಡ ಪಾಕಿಸ್ತಾನ, 410 ರನ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾವನ್ನು 188 ರನ್‌ಗೆ ಆಲೌಟ್ ಮಾಡಿತು. ಎಡಗೈ ಸ್ಪಿನ್ನರ್ ನೊಮನ್ ಅಲಿ ಮೊದಲ 7 ವಿಕೆಟ್ ಕಿತ್ತರೆ, ವೇಗಿ ನಸೀಂ ಶಾ ಕೊನೆಯ 3 ವಿಕೆಟ್ ಕಬಳಿಸಿದರು.
ಸ್ಕೋರ್: ಶ್ರೀಲಂಕಾ 166 ಹಾಗೂ 188/10(ಮ್ಯಾಥ್ಯೂಸ್ 63*, ನೊಮನ್ 7-70, ನಸೀಂ 3-44), ಪಾಕಿಸ್ತಾನ 576/5 ಡಿ.,(ಶಫೀಕ್ 201, ಸಲ್ಮಾನ್ 132*, ರಿಜ್ವಾನ್ 50*, ಫರ್ನಾಂಡೋ 3-133)