ಸಚಿನ್ ತೆಂಡುಲ್ಕರ್ ಕಾಶ್ಮೀರದ ಗುಲ್ಮರ್ಗ್‌ಗೆ ಭೇಟಿ ನೀಡಿದ್ದಾರೆ. ಇನ್ನು ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿರುವ ಲೈನ್ ಆಫ್ ಕಂಟ್ರೋಲ್‌ನ ಅಮನ್ ಸೇತು ಬ್ರಿಡ್ಜ್‌ಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ್ದಾರೆ. ಕಾಶ್ಮೀರ ಭೇಟಿಯ ವೇಳೆಯಲ್ಲಿ ಸಚಿನ್ ತೆಂಡುಲ್ಕರ್ ಕಮನ್ ಪೋಸ್ಟ್ ಬಳಿ ಇರುವ ಸೈನಿಕರ ಜತೆ ಮಾತುಕತೆ ನಡೆಸಿದ್ದಾರೆ.
ಜಮ್ಮು(ಫೆ.22): ಟೀಂ ಇಂಡಿಯಾ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಮೊದಲ ಬಾರಿಗೆ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸರಳತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಹೌದು, ಸಚಿನ್ ತೆಂಡುಲ್ಕರ್ ಕಾಶ್ಮೀರದ ಗುಲ್ಮರ್ಗ್‌ಗೆ ಭೇಟಿ ನೀಡಿದ್ದಾರೆ. ಇನ್ನು ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿರುವ ಲೈನ್ ಆಫ್ ಕಂಟ್ರೋಲ್‌ನ ಅಮನ್ ಸೇತು ಬ್ರಿಡ್ಜ್‌ಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ್ದಾರೆ. ಕಾಶ್ಮೀರ ಭೇಟಿಯ ವೇಳೆಯಲ್ಲಿ ಸಚಿನ್ ತೆಂಡುಲ್ಕರ್ ಕಮನ್ ಪೋಸ್ಟ್ ಬಳಿ ಇರುವ ಸೈನಿಕರ ಜತೆ ಮಾತುಕತೆ ನಡೆಸಿದ್ದಾರೆ.
ಇನ್ನು ಇದಕ್ಕೂ ಮುನ್ನ ಸಚಿನ್ ತೆಂಡುಲ್ಕರ್ ಕಾಶ್ಮೀರದಲ್ಲಿರುವ ಪ್ರಖ್ಯಾತ ಸ್ಥಳೀಯ ಬ್ಯಾಟ್ ಫ್ಯಾಕ್ಟರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತಮಗೆ ತಮ್ಮ ಸಹೋದರಿ ಮೊದಲ ಬಾರಿಗೆ ನೀಡಿದ ಕಾಶ್ಮೀರಿ ವಿಲ್ಲೋ ಬ್ಯಾಟ್ ನೀಡಿದ ಕ್ಷಣವನ್ನು ಮೆಲುಕು ಹಾಕಿದ್ದರು. ಕಾಶ್ಮೀರಿ ಬ್ಯಾಟ್ ಹಾಗೂ ತಮ್ಮ ನಡುವಿನ ದೀರ್ಘ ಒಡನಾಟವನ್ನು ತೆಂಡುಲ್ಕರ್ ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡಿದ್ದರು.
"ನನಗೆ ಮೊದಲ ಬ್ಯಾಟ್ ಕೊಡಿಸಿದ್ದು ನನ್ನ ಸಹೋದರಿ. ಕಾಶ್ಮೀರಿ ಕಾಶ್ಮೀರಿ ಬ್ಯಾಟ್ ಆಗಿತ್ತು. ಈಗ ನಾನು ಇಲ್ಲಿದ್ದೇನೆ ಅಂದರೆ ಕಾಶ್ಮೀರಿ ವಿಲ್ಲೋ ಭೇಟಿಯಾಗಲೇಬೇಕು. ಇನ್ನೊಂದು ಮುಖ್ಯವಾದ ವಿಚಾರವೆಂದರೆ ನನ್ನ ನೆಚ್ಚಿನ ಬ್ಯಾಟ್‌ಗಳಲ್ಲಿ ಕೇವಲ 5-6 ಗ್ರೈನ್ಸ್‌ಗಳಿರುತ್ತಿದ್ದವು. ಅಂದಹಾಗೆ ನಿಮ್ಮ ಬ್ಯಾಟ್‌ಗಳಲ್ಲಿ ಎಷ್ಟು ಗ್ರೈನ್ಸ್‌ಗಳಿವೆ ಎನ್ನುವುದನ್ನು ಕಾಮೆಂಟ್ ಮಾಡಿ ಸೋಷಿಯಲ್ ಮೀಡಿಯಾವಾದ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.
ಇನ್ನು ಇದಕ್ಕೂ ಮುನ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕಾಶ್ಮೀರಕ್ಕೆ ವಿಮಾನ ಏರುತ್ತಿದ್ದಂತೆಯೇ ಸಹ ಯಾತ್ರಿಕರು ಜೋರಾಗಿ ಚಪ್ಪಾಳೆ ತಟ್ಟಿ ಸಚ್ಚಿನ್.. ಸಚ್ಚಿನ್.. ಎಂದು ಘೋಷಣೆ ಕೂಗಿದ ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದವು.
200 ಟೆಸ್ಟ್ ಪಂದ್ಯಗಳನ್ನಾಡಿರುವ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ 15, 921 ರನ್ ಬಾರಿಸಿದ್ದಾರೆ. ಇದರಲ್ಲಿ 51 ಶತಕಗಳು ಸೇರಿವೆ. ಇನ್ನು 463 ಏಕದಿನ ಪಂದ್ಯಗಳನ್ನಾಡಿ 19 ಶತಕ ಹಾಗೂ 96 ಅರ್ಧಶತಕ ಸಹಿತ 18,426 ರನ್ ಬಾರಿಸಿದ್ದಾರೆ. ಸಚಿನ್ ತೆಂಡುಲ್ಕರ್ ಭಾರತ ಪರ 6 ಬಾರಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
