Asianet Suvarna News Asianet Suvarna News

ಸಚಿನ್‌ ಪುತ್ರಿ 'ಸಾರಾ' ಮಹಾಸಾಧನೆ, 'ದೇರ್‌ ಸಾರಾ ಪ್ಯಾರ್‌..' ಎಂದ ಕ್ರಿಕೆಟ್‌ ದಿಗ್ಗಜ!


ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಸಖತ್‌ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಪುತ್ರ ಸಾರಾ ತೆಂಡುಲ್ಕರ್‌ ಅವರ ಮಹಾ ಸಾಧನೆ. ಈ ಬಗ್ಗೆ ಹೆಮ್ಮೆ ಪಟ್ಟು ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.
 

Sachin tendulkar Daughter Sara completed Master in Clinical and Public Health Nutrition san
Author
First Published May 24, 2024, 6:57 PM IST

ಮುಂಬೈ (ಮೇ.24): ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಸಂಭ್ರಮದಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಪ್ರಯತ್ನ ಫಲ ಕೊಟ್ಟಿದೆ. 26 ವರ್ಷದ ಸಾರಾ ತೆಂಡುಲ್ಕರ್‌ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದರು. ಇದರ ಘಟಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆದಿದೆ. ಲಂಡನ್‌ನ ಯುನಿವರ್ಸಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಾರಾ ತೆಂಡುಲ್ಕರ್‌ ಡಿಸ್ಟಿಂಕ್ಷನ್‌ನಲ್ಲಿ ಪಾಸ್‌ ಆಗಿದ್ದಾರೆ.  ಭಾರತದ ಮಾಜಿ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರು ತಮ್ಮ ಮಗಳು ಸಾರಾ ಅವರು ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ನಲ್ಲಿ ಡಿಸ್ಟಿಂಕ್ಷನ್‌ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಸಂಭ್ರಮ ಪಟ್ಟಿದ್ದಾರೆ. ಈ ಕುರಿತಾಗಿ ಎಕ್ಸ್‌ನಲ್ಲಿ ಅವರು ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. 200 ಟೆಸ್ಟ್‌ ಪಂದ್ಯಗಳ ಅನುಭವಿ ಸಚಿನ್‌ ತೆಂಡುಲ್ಕರ್‌, ಸಾರಾ ಅವರ ಎಲ್ಲಾ ಕನಸುಗಳು ನನಸಾಗಲಿ ಎಂದು ಹಾರೈಸಿದರು. ಕಠಿಣ ಪರಿಶ್ರಮವು ಭವಿಷ್ಯದಲ್ಲಿ ಯಾವಾಗಲೂ ಫಲ ನೀಡುತ್ತದೆ ಎಂದು ಬರೆದಿದ್ದಾರೆ.

ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಸಚಿನ್‌ ಘಟಿಕೋತ್ಸವದ ವೀಡಿಯೊ ಮತ್ತು ಸಾರಾ ಅವರ ಪತ್ನಿ ಅಂಜಲಿಯೊಂದಿಗೆ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ತೆಂಡುಲ್ಕರ್‌ ಹೆಮ್ಮೆ ಪಟ್ಟಿದ್ದಾರೆ. "ಇದೊಂದು ಸುಂದರ ದಿನ. ನಮ್ಮ ಮಗಳು ಕ್ಲಿನಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಪೌಷ್ಟಿಕಾಂಶದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ದಿನ. ಪೋಷಕರಾಗಿ, ನೀವು ಇಲ್ಲಿಗೆ ಬರಲು ವರ್ಷಗಳಿಂದ ಮಾಡಿದ ಎಲ್ಲಾ ಕೆಲಸವನ್ನು ನೋಡಿದ್ದಕ್ಕಾಗಿ ನಾವು ತುಂಬಾ ಹೆಮ್ಮೆಪಡುತ್ತೇವೆ. ಇದು ಸುಲಭವಲ್ಲ ಭವಿಷ್ಯಕ್ಕಾಗಿ ನಿಮ್ಮ ಎಲ್ಲಾ ಕನಸುಗಳು ಇಲ್ಲಿವೆ, ನೀವು ಅವುಗಳನ್ನು ನನಸಾಗಿಸುವಿರಿ' ಎಂದು ಅವರು ಬರೆದಿದ್ದಾರೆ.

ಸಾರಾ ತೆಂಡೂಲ್ಕರ್‌ಗೂ ಇತ್ತು ಪಿಸಿಒಎಸ್, ಮೊಡವೆ ಕಾಟ; ಆಕೆ ಪರಿಹಾರ ಪ್ರಯೋಜನಕ್ಕೂ ಬರ್ಬಹುದು!

ಇನ್ನು ಕ್ರಿಕೆಟ್‌ನ ವಿಚಾರದಲ್ಲಿ ನೋಡುವುದಾದರೆ, 51 ವರ್ಷದ ಸಚಿನ್‌ ತೆಂಡುಲ್ಕರ್‌ 2024ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಭಾಗವಾಗಿದ್ದರು. ಐದು ಬಾರಿಯ ಚಾಂಪಿಯನ್‌ ಈ ಬಾರಿಯ ಐಪಿಎಲ್‌ನಲ್ಲಿ ಕೆಟ್ಟ ನಿರ್ವಹಣೆ ತೋರಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಪಡೆದಿತ್ತು. ಟೂರ್ನಮೆಂಟ್‌ನ ಆರಂಭದಲ್ಲಿ ರೋಹಿತ್ ಶರ್ಮ ಬದಲು ಮುಂಬೈ ಇಂಡಿಯನ್ಸ್‌ ತಂಡದ ನಾಯಕರಾಗಿ ನೇಮಕಗೊಂಡಿದ್ದ ಹಾರ್ದಿಕ್‌ ಪಾಂಡ್ಯ ಪ್ರತಿ ಪಂದ್ಯಕ್ಕೂ ಮುನ್ನ ಟೀಕೆ ಎದುರಿಸಿದ್ದರು. 30 ವರ್ಷದ ಆಲ್ರೌಂಡರ್‌ ಕೂಟ ಈ ವರ್ಷದ ಐಪಿಎಲ್‌ನಲ್ಲಿ ಕೆಟ್ಟ ಆಟವಾಡಿದ್ದರು. ಆಡಿದ 14 ಪಂದ್ಯಗಳಿಂದ ಅವರು ಕೇವಲ 216 ರನ್‌ ಬಾರಿಸಿದ್ದರು.

 

ಸಾರಾ ತೆಂಡೂಲ್ಕರ್‌ ಜೊತೆ ಬ್ರೇಕಪ್‌? ಶುಬ್ಮನ್‌ ಗಿಲ್‌ಗೆ ಹೊಸ ಗರ್ಲ್‌ಫ್ರೆಂಡ್‌?

 

 

Latest Videos
Follow Us:
Download App:
  • android
  • ios