Asianet Suvarna News Asianet Suvarna News

BCCI ನಿದ್ಡೆಗೆಡಿಸಿದ ಐಪಿಎಲ್ ಫ್ರಾಂಚೈಸಿಗಳು..!

ಬಿಸಿಸಿಐ ಪಾಲಿಗೆ ಹೊಸ ತಲೆನೋವಾಗಿ ಪರಿಣಮಿಸಿದ ಐಪಿಎಲ್‌ ಫ್ರಾಂಚೈಸಿಗಳ ನಡೆ
ವಿದೇಶಿ ಟಿ20 ಲೀಗ್‌ನಲ್ಲಿ ಬಂಡವಾಳ ಹೂಡುತ್ತಿರುವ ಐಪಿಎಲ್ ಫ್ರಾಂಚೈಸಿಗಳು
PL ಫ್ರಾಂಚೈಸಿ ಮಾಲೀಕರು ಇತ್ತೀಚೆಗೆ ವಿದೇಶಿ ಲೀಗ್‌ಗಳ ಕಡೆ ಹೆಚ್ಚು ಒಲವು 

IPL Franchise invest in foreign T20 League new headache for BCCI kvn
Author
Bengaluru, First Published Aug 12, 2022, 3:07 PM IST

ಬೆಂಗಳೂರು(ಆ.12): ಚೊಚ್ಚಲ ಟಿ20 ವಿಶ್ವಕಪ್ ನಡೆದ ಬೆನ್ನಲ್ಲೇ ಟಿ20 ಫ್ರಾಂಚೈಸಿ ಲೀಗ್ ಆರಂಭಿಸಿದ್ದ ಬಿಸಿಸಿಐ, ಅಂದಿನಿಂದ ಇಂದಿನವರೆಗೂ ಐಪಿಎಲ್ ಪ್ರಖ್ಯಾತಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಕಲರ್​ಫುಲ್ ಟೂರ್ನಿಯ ಖ್ಯಾತಿ ಹೆಚ್ಚುತ್ತಿದೆ ಹೊರೆತು ಕಡಿಮೆ ಮಾತ್ರ ಆಗ್ತಿಲ್ಲ. ದುಡ್ಡಿನ ಸುರಿಮಳೆಯನ್ನೂ ಸುರಿಸ್ತಿದೆ. ಕೋವಿಡ್​-19 ನಡುವೆಯೂ ಐಪಿಎಲ್​​  ಸಕ್ಸಸ್ ಆಗಿದೆ. ಆದ್ರೆ ಈಗ ಬಿಸಿಸಿಐಗೆ ದೊಡ್ಡ ತಲೆನೋವೊಂದು ಸ್ಟಾರ್ಟ್​ ಆಗಿದೆ. ಆ ಸಮಸ್ಯೆಯೇ ಐಪಿಎಲ್ ಫ್ರಾಂಚೈಸಿಗಳು.

ವಿದೇಶಿ ಫ್ರಾಂಚೈಸಿ ಲೀಗ್​​ಗಳಲ್ಲಿ ತಂಡ ಖರೀದಿಸಿದ IPL ಫ್ರಾಂಚೈಸಿಗಳು:

ಯೆಸ್, ಇದೇ BCCI ನಿದ್ದೆಗಡೆಸಿರೋದು. IPL ಫ್ರಾಂಚೈಸಿ ಮಾಲೀಕರು ಇತ್ತೀಚೆಗೆ ವಿದೇಶಿ ಲೀಗ್‌ಗಳ ಕಡೆ ಹೆಚ್ಚು ಒಲವು ತೋರಿದ್ದು, ತಂಡಗಳನ್ನು ಸಹ ಖರೀದಿಸುತ್ತಿದ್ದಾರೆ.  BCCI, ಐಪಿಎಲ್ ಅನ್ನೋ ಬ್ರ್ಯಾಂಡ್ ಅನ್ನ ಸೃಷ್ಟಿ ಮಾಡಿದೆ. ಇಡೀ ಕ್ರಿಕೆಟ್ ಜಗತ್ತು ಆ ಬ್ರ್ಯಾಂಡ್​ಗೆ ಫಿದಾ ಆಗಿದೆ. ಈಗ ಆ ಬ್ರ್ಯಾಂಡ್ ಅನ್ನ  ಉಳಿಸಿಕೊಳ್ಳೋ ಒತ್ತಡದಲ್ಲಿದೆ. UAEನಲ್ಲಿ ಟಿ20 ಲೀಗ್, ಕ್ರಿಕೆಟ್ ದಕ್ಷಿಣ ಆಫ್ರಿಕಾದ ಟಿ20 ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ಗಳಲ್ಲಿ ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಮುಖ್ಯ ಪಾತ್ರವನ್ನು ವಹಿಸಿದ್ದಾರೆ. 

ಸಿಎಸ್‌ಎ ಟಿ20: ಚೆನ್ನೈ ಫ್ರಾಂಚೈಸಿ ಸೇರಿಕೊಂಡ ಫಾಫ್ ಡು ಪ್ಲೆಸಿಸ್

CPL​​ನಲ್ಲಿ ಐದರ ಪೈಕಿ ಮೂರು ತಂಡಗಳನ್ನ IPL ಮಾಲೀಕರು ಹೊಂದಿದ್ದರೆ, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಹೊಸ ಟಿ20 ಲೀಗ್ ಇಂಟರ್‌ನ್ಯಾಶನಲ್ ಟಿ20 ಲೀಗ್‌ನಲ್ಲಿ ಕೊಲ್ಕತ್ತಾ, ಡೆಲ್ಲಿ ಹಾಗೂ ಮುಂಬೈ ಮಾಲೀಕರು ತಂಡಗಳನ್ನು ಖರೀದಿಸಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಯೋಜನೆ ಮಾಡುತ್ತಿರುವ ಲೀಗ್‌ನಲ್ಲಿ ಎಲ್ಲಾ ಆರು ತಂಡಗಳು ಕೂಡ ಐಪಿಎಲ್ ಫ್ರಾಂಚೈಸಿಯ ಮಾಲೀಕರ ಪಾಲಾಗಿವೆ.
 
ಫ್ರಾಂಚೈಸಿಗಳ ಒತ್ತಡಕ್ಕೆ ಮಣಿಯುತ್ತಾ ಬಿಸಿಸಿಐ..?: 

ಐಪಿಎಲ್​ನಲ್ಲಿ ಆಡಲು ಎಲ್ಲಾ ಕ್ರಿಕೆಟ್ ಮಂಡಳಿಗಳು ಅನುಮತಿ ನೀಡಿವೆ. ಆದ್ರೆ ವಿದೇಶಿ ಲೀಗ್​ಗಳಲ್ಲಿ ಭಾರತೀಯರು ಆಡಲು ಬಿಸಿಸಿಐ ಅನುಮತಿ ನೀಡಿಲ್ಲ. ಒಂದು ಪಕ್ಷ ಭಾರತೀಯ ಕ್ರಿಕೆಟರ್​​, ವಿದೇಶಿ ಲೀಗ್​ನಲ್ಲಿ ಆಡಬೇಕು ಅಂದ್ರೆ ಐಪಿಎಲ್ ಸೇರಿದಂತೆ ಎಲ್ಲಾ ಮಾದರಿ ಕ್ರಿಕೆಟ್​​ಗೆ ವಿದಾಯ ಹೇಳಿದ ಮೇಲೆ ವಿದೇಶಿ ಲೀಗ್​ಗಳಲ್ಲಿ ಆಡಬಹುದು. ಈ ಧೈರ್ಯವನ್ನ ಯಾವೊಬ್ಬ ಭಾರತೀಯ ಕ್ರಿಕೆಟರ್ ಸಹ ಮಾಡಲ್ಲ. ಹಾಗಾಗಿ ಈಗ ವಿದೇಶಿ ಲೀಗ್​ಗಳಲ್ಲಿ ಭಾರತೀಯ ಆಟಗಾರರು ಆಡಲು ಅವಕಾಶ ಮಾಡಿಕೊಡಿ ಅಂತ ಫ್ರಾಂಚೈಸಿಗಳು ಬಿಸಿಸಿಐ ಬಳಿ ಕೇಳಿಕೊಳ್ಳಲು ಮುಂದಾಗಿದ್ದಾರೆ. 

ಎಲ್ಲಾ ಆಟಗಾರರಿಗೂ ಅನುಮತಿ ನೀಡದಿದ್ದರೂ ಬಿಸಿಸಿಐ ಗುತ್ತಿಗೆ ಇಲ್ಲದ ಪ್ಲೇಯರ್ಸ್​ಗೆ ಆಡಲು ಪರ್ಮಿಶನ್ ಕೊಡಿ ಅನ್ನೋದು ಫ್ರಾಂಚೈಸಿಗಳ ಮನವಿ. ಆದ್ರೆ ಇದಕ್ಕೆಲ್ಲಾ ಬಿಸಿಸಿಐ ಸೊಪ್ಪು ಹಾಕಲ್ಲ. ಯಾಕಂದ್ರೆ ಐಪಿಎಲ್, ತನ್ನ ಬ್ರ್ಯಾಂಡ್ ವ್ಯಾಲ್ಯೂ ಉಳಿಸಿಕೊಳ್ಳಬೇಕು ಅಂದ್ರೆ ಭಾರತೀಯರು ಆಟಗಾರರು ಕೇವಲ ಐಪಿಎಲ್​ನಲ್ಲಿ ಮಾತ್ರ ಆಡಬೇಕು. ಭಾರತದ ಹಣ ಬೇರೆ ಕಡೆ ಹರಿದು ಹೋಗಲು ಯಾವ್ದೇ ಕಾರಣಕ್ಕೂ ಬಿಸಿಸಿಐ ಬಿಡಲ್ಲ. 

Follow Us:
Download App:
  • android
  • ios