* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾಗೆ ಶುರುವಾಗಿದೆ ಟೆನ್ಷನ್* ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ ಟೀಂ ಇಂಡಿಯಾ ಸ್ಟಾರ್ ಆಟಗಾರರು* ಆಸ್ಟ್ರೇಲಿಯಾದಲ್ಲಿ ನಡೆಯಲಿದೆ ಐಸಿಸಿ ಟಿ20 ವಿಶ್ವಕಪ್
ಮುಂಬೈ(ಏ.27): 15ನೇ ಐಪಿಎಲ್ನಲ್ಲಿ ದೇಶಿ ಹಾಗೂ ವಿದೇಶಿ ಪ್ಲೇಯರ್ಸ್ ರನ್ ಹೊಳೆಯನ್ನೇ ಹರಿಸ್ತಿದ್ದಾರೆ. ಆದ್ರೆ ಟೀಂ ಇಂಡಿಯಾದ (Team India) ಟಾಪ್ ಕ್ರಿಕೆಟರ್ಸ್ ನೆಲಕಚ್ಚಿದ್ದಾರೆ. ಆವೃತ್ತಿಯ ಮೊದಲಾರ್ಧ ಮುಗಿದು, ಸೆಕೆಂಡ್ ಹಾಫ್ ಆರಂಭಗೊಂಡಿದೆ. ಭಾರತ ತಂಡದ ನಂಬಿಗಸ್ಥ ಆಟಗಾರರೆಲ್ಲಾ ಮೊದಲಾರ್ಧದಲ್ಲಿ ಪ್ಲಾಫ್ ಶೋ ನೀಡಿದ್ದು, ಬಿಸಿಸಿಐಗೆ (BCCI) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ವರ್ಷಾಂತ್ಯ ಟಿ20 ವಿಶ್ವಕಪ್ ನಡೆಯಲಿದೆ. ಇಂತಹ ಟೈಮಲ್ಲಿ ಮೆನ್ ಇನ್ ಬ್ಲೂ ಪಡೆಯ ಅರ್ಧ ಡಜನ್ಗೂ ಅಧಿಕ ಪ್ಲೇಯರ್ಸ್ ಬ್ಯಾಡ್ ಫಾರ್ಮ್ ಸುಳಿಗೆ ಸಿಲುಕಿರೋದು ಬಿಸಿಸಿಐ ಹಾಗೂ ಫ್ಯಾನ್ಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಒಂದೂ ಅರ್ಧಶತಕವಿಲ್ಲ.. ಕೊಹ್ಲಿ ಗಳಿಸಿದ್ದು ಬರೀ 119 ರನ್:
ವಿರಾಟ್ ಕೊಹ್ಲಿಯ (Virat Kohli) ಬಿಗ್ ಫೇಲ್ಯೂರ್ ಟೀಂ ಇಂಡಿಯಾ (Team India) ಹಾಗೂ ಆರ್ಸಿಬಿಗೆ ದೊಡ್ಡ ಹಿನ್ನಡೆಯಾಗಿದೆ. ವಿರಾಟ್ ಕೊಹ್ಲಿ ಹಿಂದೆಂದೂ ಕಾಣದಷ್ಟು ವೈಫಲ್ಯ ಅನುಭವಿಸ್ತಿದ್ದಾರೆ. ಮೊದಲಾರ್ಧದಲ್ಲಿ ಒಂದೂ ಅರ್ಧಶತಕ ಸಿಡಿಸಿಲ್ಲ. 17ರ ಅವರೇಜ್ನಲ್ಲಿ ಜಸ್ಟ್ 119 ರನ್ ಗಳಿಸಿದ್ದಾರೆ. ಟೀಂ ಇಂಡಿಯಾದ ಈ ಲೆಜೆಂಡ್ ಕ್ರಿಕೆಟರ್ ದ್ವಿತಿಯಾರ್ಧದಲ್ಲಿ ಫಾರ್ಮ್ ಕಂಡುಕೊಳ್ಳಲೇಬೇಕಿದೆ.
19.13ರ ಅವರೇಜ್ನಲ್ಲಿ 153 ರನ್ ಬಾರಿಸಿರೋ ರೋಹಿತ್:
ವಿಶ್ವದ ಬೆಸ್ಟ್ ಓಪನರ್ ರೋಹಿತ್ ಶರ್ಮಾರ (Rohit Sharma) ಪ್ರದರ್ಶನ ಕೂಡ ನೀರಾಶದಾಯಕವಾಗಿದೆ. ಈವರೆಗೆ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ (Mumbai India) ಪರ ಬರೀ 153 ರನ್ ಬಾರಿಸಿದ್ದಾರೆ. ಹಾಫ್ಸೆಂಚುರಿ, ಸೆಂಚುರಿ ಮರೆಯಾಗಿದೆ. ಇನ್ನು ಕ್ಯಾಪ್ಟನ್ಸಿಯಲ್ಲೂ ಫೇಲಾಗಿದ್ಧಾರೆ. ಇವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ 8ರಲ್ಲೂ ಮುಗ್ಗರಿಸಿದೆ. ಟೀಂ ಇಂಡಿಯಾದ ಕ್ಯಾಪ್ಟನ್ನೇ ಹೀಗಾದ್ರೆ ತಂಡದ ಕಥೆಯೇನು ಅನ್ನೋ ಪ್ರಶ್ನೆ ಎದ್ದಿದೆ.
ಎಲ್ಲಿ ಹೋದ್ರು ಆ ಹಳೆಯ ಬುಮ್ರಾ:
15ನೇ ಐಪಿಎಲ್ ಸೀಸನ್ ಅನ್ನ ಫಾಲೋ ಮಾಡೋರಿಗೆ ಈ ಪ್ರಶ್ನೆ ಖಂಡಿತ ಕಾಡಿರುತ್ತೆ. ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ (Jasprit Bumrah) ತಮ್ಮ ಹಳೇ ಚಾರ್ಮ್ ಕಳೆದುಕೊಂಡಿದ್ದಾರೆ. ಪ್ರತಿ ಸಲ ವಿಕೆಟ್ ಗುಡ್ಡೆ ಹಾಕ್ತಿದ್ದ ಬುಮ್ರಾ ಈ ಸಲ ಬರೀ 5 ವಿಕೆಟ್ ಪಡೆದಿದ್ದಾರೆ. ಇವರ ವೈಫಲ್ಯ ಮುಂಬೈ ತಂಡದ ದಯನೀಯ ವೈಫಲ್ಯಕ್ಕೆ ಕಾರಣವಾಗಿದೆ.
15 ಕೋಟಿ ಕುಬೇರ ಗಳಿಸಿದ್ದು ಬರೀ 199 ರನ್:
ಇನ್ನು ಆಕ್ಷನ್ನಲ್ಲಿ 15 ಕೋಟಿ ಬಾಚಿದ್ದ ಇಶಾನ್ ಕಿಶನ್ (Ishan Kishan) ರನ್ಗಾಗಿ ಹೆಣಗಾಡ್ತಿದ್ದಾರೆ. ಆರಂಭಿಕನಾಗಿ ರನ್ ಬರ ಎದುರಿಸ್ತಿರೋ ಲೆಫ್ಟಿ ಬ್ಯಾಟರ್ ಆಡಿದ 8 ಪಂದ್ಯಗಳಿಂದ 199 ರನ್ ಗಳಿಸಿದ್ದಾರಷ್ಟೇ. ಉಳಿದ 6 ಪಂದ್ಯಗಳಲ್ಲಿ ಲಯ ಮರಳದಿದ್ರೆ ಪ್ಲೇಯಿಂಗ್ ಇಲೆವೆನ್ನಿಂದ ಕಿಟಾಗೋ ಪರಿಸ್ಥಿತಿ ಬಂದೀತು.
IPL 2022: ರಾಜಸ್ಥಾನ ರಾಯಲ್ಸ್ ಎದುರು ಹರ್ಷಲ್ ಪಟೇಲ್ ಈ ರೀತಿ ಮಾಡಿದ್ದು ಸರಿನಾ..?
ಇವರಷ್ಟೇ ಅಲ್ಲದೇ ಮಿಡಲ್ ಆರ್ಡರ್ ಸ್ಪೆಶಲಿಸ್ಟ್ ಶ್ರೇಯಸ್ ಅಯ್ಯರ್ (Shreyas Iyer), ರಿಷಭ್ ಪಂತ್ (Rishabh Pant) ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಕೂಡ ಸ್ಥಿರ ಪ್ರದರ್ಶನ ನೀಡ್ತಿಲ್ಲ. ಅಯ್ಯರ್ 248, ಪಂತ್ 188 ರನ್ ಗಳಿಸಿದ್ರೆ ಸೂರ್ಯಕುಮಾರ್ 239 ರನ್ ಗಳಿಸಿದ್ದಾರೆ. ಫೈನಲಿ 11ರ ಪೈಕಿ, 7 ಪ್ಲೇಯರ್ಸ್ ಬ್ಯಾಡ್ ಫಾರ್ಮ್ ಸುಳಿಗೆ ಸಿಲುಕಿದ್ದಾರೆ. ಸೆಕೆಂಡ್ ಹಾಫ್ನಲ್ಲೂ ಇವರು ಲಯ ಕಂಡುಕೊಳ್ಳದಿದ್ರೆ ಟಿ20 ವಿಶ್ವಕಪ್ನಲ್ಲಿ ಭಾರತ ಕಳೆದ ಬಾರಿಯಂತೆ ಲೀಗ್ನಲ್ಲೇ ಕಿಕೌಟಾದ್ರು ಅಚ್ಚರಿಯಿಲ್ಲ.
