IPL 2022: ರಾಜಸ್ಥಾನ ರಾಯಲ್ಸ್ ಎದುರು ಹರ್ಷಲ್‌ ಪಟೇಲ್ ಈ ರೀತಿ ಮಾಡಿದ್ದು ಸರಿನಾ..?

* ರಾಜಸ್ತಾನ ರಾಯಲ್ಸ್ ಎದುರು ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

* ರಾಯಲ್ಸ್ ನೀಡಿದ್ದ 145 ರನ್‌ಗಳ ಸಾಧಾರಣ ಗುರಿ ತಲುಪಲು ವಿಫಲವಾದ ಆರ್‌ಸಿಬಿ

* ರಿಯಾನ್‌ ಪರಾಗ್‌ಗೆ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದ ಹರ್ಷಲ್‌ ಪಟೇಲ್

IPL 2022 Harshal Patel refuses to shake hands with Riyan Parag Video goes viral kvn

ಬೆಂಗಳೂರು(ಏ.27): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League) ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡದ ಗೆಲುವಿನ ನಾಗಾಲೋಟ ಮುಂದುವರೆಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಮಣಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ. 

ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು 144 ರನ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು. ರಾಜಸ್ಥಾನ ರಾಯಲ್ಸ್ ನೀಡಿದ್ದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 115 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡವು 29 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತು. ರಿಯಾನ್‌ ಪರಾಗ್ ಬಾರಿಸಿದ ಸಮಯೋಚಿತ ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದಾಗಿ ಭರ್ಜರಿ ಗೆಲುವು ಸಾಧಿಸಿತು.

ಈ ಪಂದ್ಯದ ಸೋಲು ಗೆಲುವಿನಾಚೆಗೆ ನಡೆದ ಒಂದು ಪ್ರಸಂಗ ಸಾಕಷ್ಟು ಗಮನ ಸೆಳೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಹರ್ಷಲ್ ಪಟೇಲ್ (Harshal Patel) ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ರಿಯಾನ್‌ ಪರಾಗ್ (Riyan Parag) ನಡುವಿನ ವಾಕ್ಸಮರ ಸಾಕಷ್ಟು ಚರ್ಚಗೆ ಗ್ರಾಸವಾಗಿದೆ. ರಾಜಸ್ಥಾನ ರಾಯಲ್ಸ್‌ ತಂಡದ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಹರ್ಷಲ್ ಪಟೇಲ್ ಎಸೆತವನ್ನು ಸಿಕ್ಸರ್‌ಗಟ್ಟುವಲ್ಲಿ ರಿಯಾನ್‌ ಪರಾಗ್ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಈ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಸಹ ಆಟಗಾರರು ಈ ಇಬ್ಬರನ್ನು ತಡೆಹಿಡಿದು ಸಮಾಧಾನಪಡಿಸಿದ್ದರು. ಬಹುತೇಕ್ ಅಭಿಮಾನಿಗಳು ಪಂದ್ಯದ ಹೀಟ್‌ನಲ್ಲಿ ಹೀಗೆ ತಾಳ್ಮೆ ಕಳೆದುಕೊಂಡಿದ್ದಾರಷ್ಟೇ, ಆಮೇಲೆ ಎಲ್ಲವನ್ನು ಮರೆಯಲಿದ್ದಾರೆ ಎಂದೇ ಭಾವಿಸಿದ್ದರು.

ಪಂದ್ಯದ ಫಲಿತಾಂಶ ಏನೇ ಇರಲಿ, ಪಂದ್ಯ ಮುಕ್ತಾಯದ ಬಳಿಕ ಉಭಯ ತಂಡಗಳ ಆಟಗಾರರು ಕೈ ಕುಲುಕುವುದು ಸರ್ವೇ ಸಾಮಾನ್ಯ. ಆದರೆ ರಾಜಸ್ತಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯದಲ್ಲಿ ಹಾಗಾಗಲಿಲ್ಲ. ಆರ್‌ಸಿಬಿ ಇನಿಂಗ್ಸ್ ಮುಕ್ತಾಯದ ಬಳಿಕ ಹರ್ಷಲ್ ಪಟೇಲ್ ಎದುರಾಳಿ ತಂಡದ ಆಟಗಾರ ರಿಯಾನ್‌ ಪರಾಗ್ ಅವರ ಕೈಕುಲುಕಲು ನಿರಾಕರಿಸುವ ಮೂಲಕ ಕ್ರೀಡಾ ಸ್ಪೂರ್ತಿ ಮರೆತರು. ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಿಯಾನ್‌ ಪರಾಗ್, ತಾವೇ ಮುಂದೆ ಬಂದು ಹರ್ಷಲ್ ಪಟೇಲ್‌ಗೆ ಶೇಕ್ ಹ್ಯಾಡ್ ಮಾಡಲು ಬಂದರಾದರೂ, ಹರ್ಷಲ್ ಪಟೇಲ್ ಅದನ್ನು ನಿರಾಕರಿಸಿ ತಮ್ಮ ಪಾಡಿಗೆ ತಾವು ಪೆವಿಲಿಯನ್ ಹಾದಿ ಹಿಡಿದರು. ಹರ್ಷಲ್ ಪಟೇಲ್ ಅವರ ಈ ನಡೆಗೆ ಸ್ವತಃ ರಿಯಾನ್‌ ಪರಾಗ್ ತಬ್ಬಿಬ್ಬಾದರು. ಹರ್ಷಲ್ ಪಟೇಲ್ ಅವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

RCBಗೆ ಮತ್ತೊಂದು ಸೋಲು, ಸೋಷಿಯಲ್‌ ಮೀಡಿಯಾದಲ್ಲಿ ಫುಲ್ ಟ್ರೋಲ್‌..!

ಆರ್‌ಸಿಬಿ ಎದುರಿನ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡ ರಯಾನ್ ಪರಾಗ್: 

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಿಯಾನ್‌ ಪರಾಗ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಆದರೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಬೆಂಗಳೂರಿನ ಎದುರು ಮಹತ್ವದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ರಾಜಸ್ಥಾನ ರಾಯಲ್ಸ್‌ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೇ ಕ್ಷೇತ್ರರಕ್ಷಣೆಯಲ್ಲೂ 4 ಮಹತ್ವದ ಕ್ಯಾಚ್ ಪಡೆದು ಮಿಂಚಿದ್ದರು.

Latest Videos
Follow Us:
Download App:
  • android
  • ios